Asianet Suvarna News Asianet Suvarna News

Duleep Trophy ಸಾಯಿ ಕಿಶೋರ್ ಶೈನಿಂಗ್, ದಕ್ಷಿಣ ವಲಯಕ್ಕೆ ಬೃಹತ್ ಮುನ್ನಡೆ

ನಿರ್ಣಾಯಕ ಘಟ್ಟದತ್ತ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ
ಉತ್ತರ ವಲಯ ವಿರುದ್ದ ದಕ್ಷಿಣ ವಲಯಕ್ಕೆ ಬೃಹತ್ ಮುನ್ನಡೆ
ಗೆಲುವಿನತ್ತ ದಾಪುಗಾಲಿಡುತ್ತಿದೆ ಪಶ್ಚಿಮ ವಲಯ

Duleep Trophy South Zone driver seat against North Zone after R Sai Kishore heroic performance kvn
Author
First Published Sep 18, 2022, 9:50 AM IST

ಸೇಲಂ(ಸೆ.18): ಎಡಗೈ ಸ್ಪಿನ್ನರ್‌ ಸಾಯಿಕಿಶೋರ್‌ರ ಆಕರ್ಷಕ ಪ್ರದರ್ಶನದ ನೆರವಿನಿಂದ ಉತ್ತರ ವಲಯ ವಿರುದ್ಧ ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ಬೃಹತ್‌ ಮುನ್ನಡೆ ಪಡೆದಿದೆ. ಮೊದಲ ಇನ್ನಿಂಗ್ಸಲ್ಲಿ 630 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿದ್ದ ದಕ್ಷಿಣ ವಲಯ, ಉತ್ತರ ವಲಯವನ್ನು 207 ರನ್‌ಗೆ ಕಟ್ಟಿಹಾಕಿತು. ನಿಶಾಂತ್‌ ಸಂಧು 40 ರನ್‌ ಗಳಿಸಿದರು. ಸಾಯಿ ಕಿಶೋರ್‌ 70 ರನ್‌ಗೆ 7 ವಿಕೆಟ್‌ ಕಬಳಿಸಿದರು. 

ಇನ್ನು 423 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ದಕ್ಷಿಣ ವಲಯ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 157 ರನ್‌ ಗಳಿಸಿದೆ. ರೋಹನ್‌ ಕುನ್ನುಂಮಾಲ್‌ 77 ರನ್‌ ಗಳಿಸಿ ಔಟಾದರೆ, ಮಯಾಂಕ್‌ ಅಗರ್‌ವಾಲ್‌ 53 ರನ್‌ ಗಳಿಸಿ ಔಟಾಗದೆ ಉಳಿದಿದ್ದಾರೆ.

ಸ್ಕೋರ್‌: ದಕ್ಷಿಣ ವಲಯ 630/8 ಡಿ., 157/1, ಉತ್ತರ ವಲಯ 207

ಪಶ್ಚಿಮ ವಲಯಕ್ಕೆ ಭರ್ಜರಿ ಗೆಲುವಿನ ನಿರೀಕ್ಷೆ

ಕೊಯಮತ್ತೂರು: ಪೃಥ್ವಿ ಶಾ ಅವರ ಸ್ಫೋಟಕ ಶತಕದ ನೆರವಿನಿಂದ 2ನೇ ಇನ್ನಿಂಗ್‌್ಸನಲ್ಲಿ 371 ರನ್‌ ಕಲೆಹಾಕಿದ ಪಶ್ಚಿಮ ವಲಯ, ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯದ ವಿರುದ್ಧ ಭರ್ಜರಿ ಜಯದ ನಿರೀಕ್ಷೆಯಲ್ಲಿದೆ. ಶಾ 140 ಎಸೆತಗಳಲ್ಲಿ 142 ರನ್‌ ಸಿಡಿಸಿದರು. ಗೆಲ್ಲಲು 501 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿರುವ ಕೇಂದ್ರ ವಲಯ 3ನೇ ದಿನದ ಅಂತ್ಯಕ್ಕೆ 2 ವಿಕೆಟ್‌ಗೆ 33 ರನ್‌ ಗಳಿಸಿದ್ದು, ಅಂತಿಮ ದಿನವಾದ ಭಾನುವಾರ ಗೆಲ್ಲಲು ಇನ್ನೂ 468 ರನ್‌ ಕಲೆಹಾಕಬೇಕಿದೆ.

ಸ್ಕೋರ್‌: ಪಶ್ಚಿಮ ವಲಯ 257 ಹಾಗೂ 371, 
ಕೇಂದ್ರ ವಲಯ 128 ಹಾಗೂ 33/2

‘ಎ’ ಟೆಸ್ಟ್‌: ನ್ಯೂಜಿಲೆಂಡ್‌ ವಿರುದ್ಧ ರಜತ್‌ ಶತಕ

ಬೆಂಗಳೂರು: ರಜತ್‌ ಪಾಟೀದಾರ್‌ರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್‌ ‘ಎ’ಗೆ 3ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ 416 ರನ್‌ಗಳ ಗುರಿ ನೀಡಿದೆ. 2ನೇ ಇನ್ನಿಂಗ್ಸಲ್ಲಿ ಭಾರತ ‘ಎ’ 7 ವಿಕೆಟ್‌ಗೆ 359 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. 

Duleep Trophy ಸೆಂಟ್ರಲ್ ಝೋನ್ ವಿರುದ್ದ ಆಕರ್ಷಕ ಶತಕ ಚಚ್ಚಿದ ಪೃಥ್ವಿ ಶಾ

ರಜತ್‌ ಪಾಟೀದಾರ್ ಔಟಾಗದೆ 109 ರನ್‌ ಗಳಿಸಿದರು. ನ್ಯೂಜಿಲೆಂಡ್‌ ‘ಎ’ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 20 ರನ್‌ ಗಳಿಸಿದ್ದು, ಗೆಲ್ಲಲು ಇನ್ನೂ 396 ರನ್‌ಗಳ ಅಗತ್ಯವಿದೆ. ಭಾನುವಾರ ಪಂದ್ಯದ ಕೊನೆ ದಿನವಾಗಿದೆ.

ಜೂಲನ್‌ಗೆ ಸಿಗುತ್ತಾ ಗೆಲುವಿನ ವಿದಾಯ?

ಹೋವ್‌: ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಪಂದ್ಯಗಳ ಸರಣಿಗೆ ಭಾನುವಾರ ಚಾಲನೆ ಸಿಗಲಿದ್ದು, ಭಾರತ ಮಹಿಳಾ ತಂಡ ಹಿರಿಯ ವೇಗಿ ಜೂಲನ್‌ ಗೋಸ್ವಾಮಿಗೆ ಗೆಲುವಿನ ವಿದಾಯ ನೀಡಲು ಕಾತರಿಸುತ್ತಿದೆ. ಈ ಸರಣಿಯ ಬಳಿಕ ಜೂಲನ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿದ್ದಾರೆ. 201 ಏಕದಿನ ಪಂದ್ಯಗಳನ್ನಾಡಿರುವ ಜೂಲನ್‌ 252 ವಿಕೆಟ್‌ ಕಬಳಿಸಿದ್ದಾರೆ.

Follow Us:
Download App:
  • android
  • ios