Asianet Suvarna News Asianet Suvarna News

Duleep Trophy Final ಸರ್ಫರಾಜ್ ಖಾನ್ ಭರ್ಜರಿ ಶತಕ, ಜಯದ ಹೊಸ್ತಿಲಲ್ಲಿ ಪಶ್ಚಿಮ ವಲಯ

ನಿರ್ಣಾಯಕ ಘಟ್ಟ ತಲುಪಿದ ದುಲೀಪ್ ಟ್ರೋಫಿ ಫೈನಲ್
ದಕ್ಷಿಣ ವಲಯ ಎದುರು ಪಶ್ಚಿಮ ವಲಯದ ಬಿಗಿ ಹಿಡಿತ
ದುಲೀಪ್ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಲ್ಲಿ ನಿಂತ ಪಶ್ಚಿಮ ವಲಯ

Duleep Trophy Final Sarfaraz Khan century powers West Zone Driver seat against South Zone kvn
Author
First Published Sep 25, 2022, 10:07 AM IST

ಕೊಯಮತ್ತೂರು(ಸೆ.25): ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೂ ದಕ್ಷಿಣ ವಲಯ ವಿರುದ್ಧ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಪಶ್ಚಿಮ ವಲಯ ಭರ್ಜರಿ ಆಟವಾಡಿ ಗೆಲುವಿನ ಹೊಸ್ತಿಲು ತಲುಪಿದೆ. 2ನೇ ಇನ್ನಿಂಗ್ಸಲ್ಲಿ 4 ವಿಕೆಟ್‌ಗೆ 585 ರನ್‌ ಗಳಿಸಿದ ಪಶ್ಚಿಮ ವಲಯ, ದಕ್ಷಿಣ ವಲಯಕ್ಕೆ ಗೆಲ್ಲಲು 529 ರನ್‌ ಗುರಿ ನೀಡಿದೆ. ದುಲೀಪ್ ಟ್ರೋಫಿ ಫೈನಲ್ ಗೆಲ್ಲಲು ದಕ್ಷಿಣ ವಲಯಕ್ಕೆ 371 ರನ್‌ಗಳ ಅಗತ್ಯವಿದ್ದರೆ, ಪಶ್ಚಿಮ ವಲಯ ಟ್ರೋಫಿಗೆ ಮುತ್ತಿಕ್ಕಲು ಕೇವಲ 4 ವಿಕೆಟ್ ಗಳಿಸುವ ಅವಶ್ಯಕತೆಯಿದೆ.

3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 376 ರನ್‌ ಗಳಿಸಿದ್ದ ಪಶ್ಚಿಮ ವಲಯ, 4ನೇ ದಿನವಾದ ಶನಿವಾರ ಆ ಮೊತ್ತಕ್ಕೆ ಇನ್ನೂ 209 ರನ್‌ ಸೇರಿಸಿತು. ಯಶಸ್ವಿ ಜೈಸ್ವಾಲ್‌ 265 ರನ್‌ ಗಳಿಸಿ ಔಟಾದರು. ಸರ್ಫರಾಜ್‌ ಖಾನ್‌ 127 ರನ್‌ ಗಳಿಸಿ ಔಟಾಗದೆ ಉಳಿದರೆ, ಹೆಟ್‌ ಪಟೇಲ್‌ 51 ರನ್‌ ಗಳಿಸಿದರು. ದಕ್ಷಿಣ ವಲಯ ಪರ ಕೃಷ್ಣಪ್ಪ ಗೌತಮ್ ಹಾಗೂ ಆರ್ ಸಾಯಿ ಕಿಶೋರ್ ತಲಾ 2 ವಿಕೆಟ್ ಉರುಳಿಸಿದರು.

ದೊಡ್ಡ ಗುರಿ ಬೆನ್ನತ್ತಿದ ದಕ್ಷಿಣ ವಲಯಕ್ಕೆ ಆರಂಭಿಕ ರೋಹನ್‌ ಕುನ್ನುಮಾಲ್‌(93) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಆಸರೆಯಾಗಲಿಲ್ಲ. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಮತ್ತೊಮ್ಮೆ ದೊಡ್ಡ ಇನಿಂಗ್ಸ್‌ ಕಟ್ಟಲು ವಿಫಲವಾದರು. ಮಯಾಂಕ್‌ ಅಗರ್‌ವಾಲ್ ಕೇವಲ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಹನುಮ ವಿಹಾರಿ ಕೇವಲ ಒಂದು ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ್ದ ಬಾಬಾ ಇಂದ್ರಜಿತ್ ಬ್ಯಾಟಿಂಗ್ ಕೇವಲ 4 ರನ್‌ಗಳಿಗೆ ಸೀಮಿತವಾಯಿತು. 

Duleep Trophy Final: ದಕ್ಷಿಣ ವಲಯದ ಮೇಲೆ ಯಶಸ್ವಿ ಜೈಸ್ವಾಲ್ ಸವಾರಿ

ಇನ್ನು ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ(14) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಕಿ ಬೊಯೆ(13) ಅವರು ಕೂಡಾ ಹೆಚ್ಚುಹೊತ್ತು ಕ್ರೀಸ್‌ನಲ್ಲಿರುವ ಪಶ್ಚಿಮ ವಲಯದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಸದ್ಯ ಆರ್. ಸಾಯಿ ಕಿಶೋರ್(2) ಹಾಗೂ ಟಿ ರವಿ ತೇಜ(9) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಶ್ಚಿಮ ವಲಯ ಪರ ಜಯದೇವ್ ಉನಾದ್ಕತ್‌, ಅತೀತ್‌ ಶೇಠ್, ಶಮ್ಸ್‌ ಮುಲಾನಿ ತಲಾ 2 ವಿಕೆಟ್‌ ಕಿತ್ತರು. ಭಾನುವಾರ ಮೊದಲ ಅವಧಿಯಲ್ಲೇ ಪಂದ್ಯ ಜಯಿಸಿ ಟ್ರೋಫಿ ಎತ್ತಿಹಿಡಿಯಲು ಅಜಿಂಕ್ಯ ರಹಾನೆ ಪಡೆ ಕಾಯುತ್ತಿದೆ.

ಸ್ಕೋರ್‌:
ಪಶ್ಚಿಮ ವಲಯ 270 ಹಾಗೂ 585/4 ಡಿ.,
ದಕ್ಷಿಣ ವಲಯ 327 ಹಾಗೂ 154/6

3ನೇ ಟಿ20: ಪಾಕಿಸ್ತಾನ ವಿರುದ್ಧ ಗೆದ್ದ ಇಂಗ್ಲೆಂಡ್‌

ಕರಾಚಿ: ಹ್ಯಾರಿ ಬ್ರೂಕ್‌ ಹಾಗೂ ಬೆನ್‌ ಡಕೆಟ್‌ರ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ 63 ರನ್‌ ಗೆಲುವು ಸಾಧಿಸಿ 7 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಪಡೆದಿದೆ. ಬ್ರೂಕ್‌ 35 ಎಸೆತದಲ್ಲಿ 81 ರನ್‌ ಸಿಡಿಸಿದರೆ, ಡಕೆಟ್‌ 42 ಎಸೆತದಲ್ಲಿ 69 ರನ್‌ ಚಚ್ಚಿದರು. ಇಂಗ್ಲೆಂಡ್‌ 3 ವಿಕೆಟ್‌ಗೆ 221 ರನ್‌ ಗಳಿಸಿತು. ಪಾಕಿಸ್ತಾನ 20 ಓವರಲ್ಲಿ 8 ವಿಕೆಟ್‌ಗೆ 158 ರನ್‌ ಗಳಿಸಿತು. ಮಾರ್ಕ್ ವುಡ್‌ 3 ವಿಕೆಟ್‌ ಕಿತ್ತರು.
 

Follow Us:
Download App:
  • android
  • ios