Shocking Video: ಮದ್ಯ ಕುಡಿದು ರಸ್ತೆಯಲ್ಲೇ ತೂರಾಡಿದ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿಗೆ ಸಹಾಯ ಮಾಡಿದ ಪಾದಾಚಾರಿಗಳು!

ಒಂದು ಕಾಲದಲ್ಲಿ ಸಚಿನ್‌ರಷ್ಟೇ ಪ್ರತಿಭಾವಂತನಾಗಿ ಟೀಮ್‌ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಬದುಕನ್ನು ಮದ್ಯಪಾನ ಸರ್ವನಾಶ ಮಾಡಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ವೈರಲ್‌ ಆಗಿದೆ.
 

Drunk Vinod Kambli Struggles To Stand On His Feet Helped Fellow Mumbaikars san

ಮುಂಬೈ (ಆ.5): ಕುಡಿತದ ಚಟದಿಂದಲೇ ತನ್ನ ಸುಂದರ ವೃತ್ತಿಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡ ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಇನ್ನೊಂದು ವಿಡಿಯೋ ವೈರಲ್‌ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ಕಾರಣಕ್ಕಾಗಿಯೇ ವಿನೋದ್‌ ಕಾಂಬ್ಳಿ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಒಂದು ಕಾಲದಲ್ಲಿ ಸಚಿನ್‌ರಷ್ಟೇ ಪ್ರತಿಭಾವಂತನಾಗಿ ಟೀಮ್‌ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಬದುಕನ್ನು ಮದ್ಯಪಾನ ಸರ್ವನಾಶ ಮಾಡಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ಫುಲ್‌ ಟೈಟ್‌ ಆಗಿರುವ ವಿನೋದ್‌ ಕಾಂಬ್ಳಿಗೆ ರಸ್ತೆಯ ಮೇಲೆ ಸ್ವಂತ ಬಲದಲ್ಲಿ ನಿಲ್ಲೋಕೆ ಕೂಡ ಸಾಧ್ಯವಾಗುತ್ತಿಲ್ಲ. ತೂರಾಡುತ್ತಿದ್ದ ವಿನೋದ್‌ ಕಾಂಬ್ಳಿ ಬೈಕ್‌ಅನ್ನು ಹಿಡಿದುಕೊಂಡು ನಿಲ್ಲುವ ಪ್ರಯತ್ನ ಮಾಡುತ್ತಿದ್ದರು. ಕೊನೆಯಲ್ಲಿ, ಅಲ್ಲಿಯೇ ಇದ್ದ ಪಾದಾಚಾರಿಗಳು 52 ವರ್ಷ ವಯಸ್ಸಿನ ಮಾಜಿ ಕ್ರಿಕೆಟಿಗ ಹೋಗಬೇಕಾದ ಸ್ಥಳಕ್ಕೆ ತಲುಪಲು ಸಹಾಯ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಹಲವು ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ವೈರಲ್‌ ಆಗಿದೆ.

ಕಾಂಬ್ಳಿಗಿದೆ ಆರೋಗ್ಯ ಸಮಸ್ಯೆ: ಕಾಂಬ್ಳಿಗೆ ಈ ಹಿಂದೆಯೂ ಆರೋಗ್ಯ ಸಮಸ್ಯೆ ಇತ್ತು. 2013ರಲ್ಲಿ ಚೆಂಬೂರಿನಿಂದ ವಾಹನ ಚಲಾಯಿಸುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿತ್ತು. ಪೊಲೀಸ್ ಅಧಿಕಾರಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಅವರ ಪ್ರಾಣ ಉಳಿಸಿದ್ದರು. ಕಾಂಬ್ಳಿ ಅವರ  ಅಪಧಮನಿಯಲ್ಲಿ ಎರಡು ಬ್ಲಾಕ್‌ ಇದ್ದ ಕಾರಣಕ್ಕೆ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

ಕಾಂಬ್ಳಿ ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ರನ್‌ ಬಾರಿಸಿದ್ದರು. ಇಂಡಿಯನ್‌ ಕ್ರಿಕೆಟ್‌ನ ಮುಂದಿನ ಬಿಗ್‌ ಪ್ಲೇಯರ್‌ ಎಂದೇ ಅವರನ್ನು ನೋಡಲಾಗುತ್ತಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ಎಡಗೈ ಆಟಗಾರ 129 ಪಂದ್ಯಗಳಲ್ಲಿ 9965 ರನ್‌ಗಳಿಗೆ 59.67 ಸರಾಸರಿ ಹೊಂದಿದ್ದರು. ಅವರು 1991 ರಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧ ODI ಪಂದ್ಯದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಎರಡು ವರ್ಷಗಳ ನಂತರ 1993 ರಲ್ಲಿ ಅವರು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ್ದರು.

ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೇಲೆ ಮುಂಬೈ ಪೊಲೀಸರಿಂದ FIR..! ಕಾಂಬ್ಳಿಗೆ ಮತ್ತಷ್ಟು ಸಂಕಷ್ಟ..!

ಕಾಂಬ್ಳಿ ಭಾರತದ ಪರವಾಗಿ 104 ಏಕದಿನ ಪಂದ್ಯ ಆಡಿದ್ದಾರೆ ಮತ್ತು 32.59 ಸರಾಸರಿಯಲ್ಲಿ 2477 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಮುಂಬೈ ಮಾಜಿ ಕ್ರಿಕೆಟಿಗ, 17 ಪಂದ್ಯಗಳಲ್ಲಿ 54.20 ಸರಾಸರಿಯೊಂದಿಗೆ ಒಟ್ಟು 1084 ರನ್ ಗಳಿಸಿದರು.

ಸಚಿನ್ ತೆಂಡುಲ್ಕರ್‌ಗೆ ಎಲ್ಲವೂ ಗೊತ್ತಿದೆ, ಆದ್ರೆ ಯಾರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ: ವಿನೋದ್ ಕಾಂಬ್ಳಿ

ಫಾರ್ಮ್ ಮತ್ತು ಫಿಟ್‌ನೆಸ್‌ನೊಂದಿಗಿನ ಹೋರಾಟದಿಂದ ಕಾಂಬ್ಳಿ ಹೆಚ್ಚಿನ ಕಾಲ ಟೀಮ್‌ನಲ್ಲಿ ಉಳಿಯಲಿಲ್ಲ. ಇದರಿಂದಾಗಿ ಅವರು ಸ್ಥಿರ ಪ್ರದರ್ಶನ ನೀಡಲು ವಿಫಲರಾದರು. 9 ಬಾರಿ ಟೀಮ್‌ ಇಂಡಿಯಾಗೆ ವಾಪಾಸಾದರೂ, ಶಾಶ್ವತ ಸ್ಥಾನ ಪಡೆಯಲು ವಿಫಲರಾಗಿದ್ದರು. ಬದ್ಧತೆಯ ಕೊರತೆ ಮತ್ತು ಬದಲಾಗುತ್ತಿರುವ ಕ್ರಿಕೆಟ್ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ವಿಫಲತೆಯು ಅವರ ಅವನತಿಗೆ ಕಾರಣವಾಯಿತು.

Latest Videos
Follow Us:
Download App:
  • android
  • ios