ಸೌಥಾಂಪ್ಟನ್(ಜು.11)‌: ಇಂಗ್ಲೆಂಡ್‌ ವಿರು​ದ್ಧದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಮೇಲುಗೈ ಸಾಧಿ​ಸಿದೆ. 2ನೇ ದಿನ​ದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 57 ರನ್‌ ಗಳಿ​ಸಿದ್ದ ವಿಂಡೀಸ್‌, ಕ್ರೇಗ್‌ ಬ್ರಾಥ್‌ವೇಟ್‌ (65)ರ ಹೋರಾ​ಟದ ಅರ್ಧ​ಶ​ತ​ಕದ ನೆರ​ವಿ​ನಿಂದ 3ನೇ ದಿನ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆ​ಯಿತು. 

ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್  ಶೇನ್‌ ಡೌರಿಚ್‌ (61) ಬಾರಿಸಿದ ಸಮಯೋಚಿತ ಅರ್ಧಶತಕ ಹಾಗೂ ರೋಸ್ಟನ್‌ ಚೇಸ್‌ (47) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ತಂಡವನ್ನು ಮುನ್ನೂರರ ಗಡಿ ದಾಟಲು ನೆರವಾದರು.

ಇನ್ನು ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾದರು. ವಿಂಡೀಸ್‌ನ ಪ್ರಮುಖ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಸ್ಟೋಕ್ಸ್‌ಗೆ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಉತ್ತಮ ನೆರವು ನೀಡಿದರು. ಆಂಡರ್‌ಸನ್ ಇಂಗ್ಲೆಂಡ್‌ನ ಮೂರು ವಿಕೆಟ್ ಕಬಳಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 318 ರನ್‌ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 114 ರನ್‌ಗಳ ಮುನ್ನಡೆ ಪಡೆಯಿತು. 

ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 204 ರನ್‌ಗೆ ಆಲೌ​ಟ್‌

ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ತಂಡ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿದೆ. ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 15 ರನ್ ಬಾರಿಸಿದ್ದು 99 ರನ್‌ಗಳ ಹಿನ್ನಡೆಯಲ್ಲಿದೆ.  

ಸ್ಕೋರ್‌: ಇಂಗ್ಲೆಂಡ್‌ 204 & 15/0
ವಿಂಡೀಸ್‌ : 318