ಧನಶ್ರೀ ವರ್ಮ ಜೊತೆ ಸಪ್ತಪದಿ ತುಳಿದ ಯಜುವೇಂದ್ರ ಚಹಾಲ್!
ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಗೆಳತಿ ಧನಶ್ರಿ ವರ್ಮಾ ಕೈಹಿಡಿದ್ದಾರೆ. ಮಂಗಳವಾರ(ಡಿ.22) ರಂದು ಯಜುವೇಂದ್ರ ಚಹಾಲ್ ಮದುವೆಯಾಗಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋ ಬಹಿರಂಗ ಪಡಿಸಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 22ರಂದು ಚಹಾಲ್, ಸ್ನೇಹಿತೆ ಧನಶ್ರಿ ವರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುರುಗ್ರಾಂನಲ್ಲಿ ಚಹಾಲ್ ಹಾಗೂ ಧನಶ್ರಿ ವರ್ಮಾ ವಿವಾಹ ಮಹೋತ್ಸ ನೆರವೇರಿದೆ. ಹಿಂದೂ ಸಂಪ್ರದಾಯದಂತೆ ನವ ದಂಪತಿಗಳು ಮದುವೆಯಾಗಿದ್ದಾರೆ.
ಸಾಮಾಜಿಕ ಮಾಧ್ಯದಲ್ಲಿ ಚಹಾಲ್ ಮದುವೆ ಸಂಭ್ರಮ ಹಂಚಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಹಾಲ್ ಹಾಗೂ ಧನಶ್ರಿ ವರ್ಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ನಿಶ್ಚಿತಾರ್ಥದ ಬಳಿಕ ಚಹಾಲ್ ಹಾಗೂ ಧನಶ್ರಿ ವರ್ಮಾ ಐಪಿಎಲ್ ಟೂರ್ನಿಗಾಗಿ ದುಬೈಗೆ ತೆರಳಿದ್ದರು. ಐಪಿಎಲ್ ಟೂರ್ನಿ ವೇಳೆ ಚಹಾಲ್ ಹಾಗೂ ಧನಶ್ರಿ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿದ್ದರು.
ಧನಶ್ರಿ ವರ್ಮಾ ಜನಪ್ರಿಯ ಯೂಟ್ಯೂಬರ್, ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದಾರೆ. ನಿಶ್ಚಿತಾರ್ಥಕ್ಕೂ ಮುನ್ನವೇ ಚಹಾಲ್ ಹಾಗೂ ಧನಶ್ರಿ ವರ್ಮಾ ಡೇಟಿಂಗ್ ಮಾಡುತ್ತಿದ್ದರು.
ಹೊಸ ಬದುಕಿಗೆ ಕಾಲಿಟ್ಟ ಚಹಾಲ್ ಹಾಗೂ ಧನಶ್ರಿ ವರ್ಮಾಗೆ ಟೀಂ ಇಂಡಿಯಾ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. ಇತ್ತ ಅಭಿಮಾನಿಗಳ ಕೂಡ ಚಹಾಲ್ ದಂಪತಿಗೆ ಶುಭ ಹಾರೈಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಯಜುವೇಂದ್ರ ಚಹಾಲ್ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ರವೀಂದ್ರ ಜಡೇಜಾ ಬದಲು ಕಣಕ್ಕಿಳಿದು 3 ವಿಕೆಟ್ ಕಬಳಿಸಿ ಮಿಂಚಿದ್ದರು.
ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಪ್ರಮುಖ ಸದಸ್ಯನಾಗಿರುವ ಯಜುವೇಂದ್ರ ಚಹಾಲ್ , ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ಟಿ20 ಸರಣಿ ಬಳಿಕ ಚಹಾಲ್ ತವರಿಗೆ ಆಗಮಿಸಿ ಇದೀಗ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.