ಒಂದು ತಿಂಗಳು ತವರಿಗೆ ಹೊರಟುನಿಂತ ಧನಶ್ರೀ ವರ್ಮಾ! ಕುಣಿದು ಕುಪ್ಪಳಿಸಿದ ಯುಜುವೇಂದ್ರ ಚಹಲ್..!

* ಮತ್ತೊಮ್ಮೆ ರೀಲ್ಸ್‌ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ ಯುಜುವೇಂದ್ರ ಚಹಲ್ ಧನಶ್ರೀ ವರ್ಮಾ
* ಡಿವೋರ್ಸ್‌ ಗಾಳಿ ಸುದ್ದಿ ಬೆನ್ನಲ್ಲೇ ಚಹಲ್ ಜೋಡಿಯ ವಿಡಿಯೋ ವೈರಲ್
* ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದ ಯುಜುವೇಂದ್ರ ಚಹಲ್

Dhanashree Verma Posts New Reel With Yuzvendra Chahal video goes viral kvn

ನವದೆಹಲಿ(ಆ.24): ಟೀಂ ಇಂಡಿಯಾ ಸ್ಟಾರ್ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಪತ್ನಿ ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಸದ್ಯದಲ್ಲಿಯೇ ಈ ಜೋಡಿ ಬೇರ್ಪಡಲಿದೆ ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿ ಒಂದು ವಾರ ಕಳೆಯುವಷ್ಟರಲ್ಲಿ ಇದೀಗ ಈ ಜೋಡಿ ತಮ್ಮ ಬಾಂದವ್ಯ ಎಷ್ಟು ಗಟ್ಟಿಯಾಗಿದೆ ಎನ್ನುವುದನ್ನು ರೀಲ್ಸ್‌ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣ ಮಾಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯನ್ನಾಡಲು ಯುಎಇಗೆ ತೆರಳುವ ಮುನ್ನ ಯುಜುವೇಂದ್ರ ಚಹಲ್ ಹಾಗು ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಾಸ್ಯಮಯವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋಫಾ ಮೇಲೆ ಕುಳಿತಿರುವಾಗ, ಧನಶ್ರೀ ವರ್ಮಾ, ಕೇಳು, ನಾನು ಒಂದು ತಿಂಗಳುಗಳ ಕಾಲ ನಮ್ಮ ತಾಯಿಯ ಮನೆಗೆ ಹೋಗುತ್ತೇನೆ ಎನ್ನುತ್ತಾರೆ. ಆಗ ಪಕ್ಕದಲ್ಲಿ ಕುಳಿತಿದ್ದ ಯುಜುವೇಂದ್ರ ಚಹಲ್, ಹೆಂಡತಿಯನ್ನು ಮುದ್ದಾಡಿ ಕುಣಿದು ಕುಪ್ಪಳಿಸಿದ್ದಾರೆ. ಯುಜುವೇಂದ್ರ ಚಹಲ್ ಅವರ ಈ ಪ್ರತಿಕ್ರಿಯೆ ನೋಡಿ ಧನಶ್ರೀ ಕೂಡಾ ನಗಲು ಆರಂಭಿಸುತ್ತಾರೆ. ಈ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿವಾಹ ವಿಚ್ಛೇದನಾ ಪಡೆಯಲಿದ್ದಾರೆ ಎನ್ನುವ ಗಾಳಿ ಸುದ್ದಿ ಬಳಿಕ ಮೊದಲ ಬಾರಿಗೆ ಈ ಜೋಡಿ ಒಟ್ಟಾಗಿ ವಿಡಿಯೋ ಮಾಡಿರುವುದನ್ನು ಅವರ ಅಭಿಮಾನಿಗಳು ಕೂಡಾ ಸ್ವಾಗತಿಸಿದ್ದಾರೆ.  ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ನಡುವೆ ವೈಮನಸ್ಸು ಮೂಡಿದೆ ಎಂದು ಗಾಳಿ ಸುದ್ದಿ ಬೆನ್ನಲ್ಲೆ ಎಚ್ಚೆತ್ತುಕೊಂಡ ಚಹಲ್, ಎಲ್ಲರಲ್ಲೂ ನನ್ನದೊಂದು ಸವಿನಯ ಮನವಿ, ನಮ್ಮ ಸಂಬಂಧದ ಕುರಿತಂತೆ ಕೇಳಿ ಬರುತ್ತಿರುವ ಗಾಳಿಸುದ್ದಿಯನ್ನು ನಂಬಬೇಡಿ. ದಯವಿಟ್ಟು ಎಲ್ಲರೂ ಈ ಗಾಳಿ ಸುದ್ದಿಗೆ ಪೂರ್ಣ ವಿರಾಮ ಹಾಕಿ ಎಂದು ಮನವಿ ಮಾಡಿಕೊಂಡಿದ್ದರು.

ದಾಂಪತ್ಯ ಜೀವನದಲ್ಲಿ ಬಿರುಕು; ಕೊನೆಗೂ ಮೌನ ಮುರಿದ ಯುಜುವೇಂದ್ರ ಚಹಲ್‌..!

ಇನ್ನು ಧನಶ್ರೀ ವರ್ಮಾ ಕೂಡಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ನಮ್ಮ ಸಂಬಂಧದ ಕುರಿತಂತೆ ಹಬ್ಬಿರುವ ಗಾಳಿ ಸುದ್ದಿಯನ್ನು ನಂಬಬೇಡಿ. ಇದಕ್ಕೆಲ್ಲಾ ಕೊನೆ ಹಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಟೀಂ ಇಂಡಿಯಾ ತಾರಾ ಲೆಗ್‌ಸ್ಪಿನ್ನರ್ ಸದ್ಯ, ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಟೀಂ ಇಂಡಿಯಾಗೆ ಜತೆಗೆ ಯುಎಇಗೆ ಬಂದಿಳಿದಿದ್ದಾರೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಆರಂಭವಾಗಲಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂಡಿಯಾ, ಆಗಸ್ಟ್‌ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ

Latest Videos
Follow Us:
Download App:
  • android
  • ios