Asianet Suvarna News Asianet Suvarna News

ಅಶ್ವಿನ್, ಅಕ್ಸರ್ ಮೋಡಿ; ಆಲೌಟ್ ಭೀತಿಯಲ್ಲಿ ಇಂಗ್ಲೆಂಡ್!

ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡು ನಿರಾಸೆ ಅನುಭವಿಸಿತು. ಆದರೆ ಸೋಲಿಗೆ 2ನೇ ಪಂದ್ಯದಲ್ಲಿ ತಿರುಗೇಟುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಕಾರಣ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದೆ.

Day 2 Team India spinner dominate 2nd test against england ckm
Author
Bengaluru, First Published Feb 14, 2021, 2:23 PM IST

ಚೆನ್ನೈ(ಫೆ.14): ರೋಹಿತ್ ಶರ್ಮಾ ಶತಕ, ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 329 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರ್ ಅಶ್ವಿನ್ ಹಾಗೂ ಅಕ್ಸರ್ ಪಟೇಲ್ ಸ್ಪಿನ್ ಮೋಡಿ ಮೂಲಕ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದರು.

ಚೆನ್ನೈ ಟೆಸ್ಟ್; ರೋಹಿತ್ ಶತಕ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ

ರೊರಿ ಬರ್ನ್ಸ್, ಡೋಮಿಕ್ ಸಿಬ್ಲೆ, ಡೇನಿಯಲ್ ಲಾರೆನ್ಸ್, ನಾಯಕ ಜೋ ರೂಟ್ ಅಬ್ಬರಿಸಲಿಲ್ಲ. ಇನ್ನು ಬೆನ್ ಸ್ಟೋಕ್ಸ್ 18 ರನ್ ಸಿಡಿಸಿದರೆ, ಒಲ್ಲಿ ಪೊಪ್ 22 ರನ್ ಸಿಡಿಸಿ ಔಟಾದರು. ಬೆನ್ ಫೋಕ್ಸ್ ತಂಡಕ್ಕೆ ಆಸರೆಯಾದರೆ, ಮೊಯಿನ್ ಆಲಿ, ಒಲೈ ಸ್ಟೋನ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು.

106 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ಇದೀಗ 2ನೇ ಟೆಸ್ಟ್ ಪಂದ್ಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆರ್ ಅಶ್ವಿನ್ 4, ಅಕ್ಸರ್ ಪಟೇಲ್ 2, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ. ಆಲೌಟ್ ಭೀತಿಯಲ್ಲಿರುವ ಇಂಗ್ಲೆಂಡ್ ವಿಕೆಟ್ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

 

ಸದ್ಯ ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ ಫೋಟೋ ಮನಹೋಹಕವಾಗಿದೆ. ಸುಂದರ ನೋಟ ಹಾಗೂ ಅಷ್ಟೇ ಕುತೂಹಲ ಚೆನ್ನೈ ಟೆಸ್ಟ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ  ಫೋಟೋ ಪೋಸ್ಟ್ ಮಾಡಿ ಚೆನ್ನೈ ಟೆಸ್ಟ್ ಪಂದ್ಯದ ರೋಚಕತೆ ಮತ್ತಷ್ಟು ಹೆಚ್ಚಿಸಿದ್ದರೆ, ಇತ್ತ ಎರಡನೇ ಟೆಸ್ಟ್ ಆಡುತ್ತಿರುವ  ಇಂಗ್ಲೆಂಡಿನ ಸ್ಥಿತಿ ಕಷ್ಟ ಕಷ್ಟ.

 

Follow Us:
Download App:
  • android
  • ios