ಟೆಸ್ಟ್‌ಗೆ ವಿದಾಯ ಹೇಳಿದ ಡೇವಿಡ್‌ ವಾರ್ನರ್‌: ಹೆಲ್ಮೆಟ್‌ ಚುಂಬಿಸಿ ಅಭಿಮಾನಿಗೆ ಉಡುಗೊರೆ ನೀಡಿದ ಆಸೀಸ್‌ ಆಟಗಾರ

ಡೇವಿಡ್‌ ವಾರ್ನರ್ ಸ್ಟೇಡಿಯಂನಿಂದ ನಿರ್ಗಮಿಸುವ ಮುನ್ನ ಮುಖದಲ್ಲಿ ಬೇಸರ ಮೂಡಿತ್ತು. ನಂತರ, ಹೆಲ್ಮೆಟ್‌  ಅನ್ನು ಚುಂಬಿಸಿ, ಬೌಂಡರಿ ಲೈನ್‌ನಲ್ಲಿ ಕಾಯುತ್ತಿದ್ದ ಸ್ಟೀವ್ ಸ್ಮಿತ್‌ರೊಂದಿಗೆ ಅಪ್ಪುಗೆ ಹಂಚಿಕೊಂಡರು. ಅಲ್ಲದೆ, ಮೆಟ್ಟಿಲು ಹತ್ತುವಾಗ, ಅವರು ತಮ್ಮ ಹೆಲ್ಮೆಟ್ ಮತ್ತು ಬ್ಯಾಟಿಂಗ್ ಗ್ಲೌಸ್‌ಗಳನ್ನು ಸ್ಟ್ಯಾಂಡ್‌ನಲ್ಲಿದ್ದ ಯುವ ಅಭಿಮಾನಿಗೆ ನೀಡಿದರು.

david warner kisses his helmet gives it away to young fan after his last test international innings ash

ಸಿಡ್ನಿ (ಜನವರಿ 6, 2024): ಡೇವಿಡ್ ವಾರ್ನರ್ ಶನಿವಾರ ಆಸ್ಟ್ರೇಲಿಯದ ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ವೃತ್ತಿಜೀವನದ ಅಂತಿಮ ಇನ್ನಿಂಗ್ಸ್ ಆಡಿದ ನಂತರ ತಮ್ಮ 12 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದರು. ಅನುಭವಿ ಬ್ಯಾಟರ್‌ ತಮ್ಮ ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 57 ರನ್ ಗಳಿಸಿದರು.

ಈ ಮೂಲಕ ಪಾಕಿಸ್ತಾನದ ವಿರುದ್ಧ ಸರಣಿ ವೈಟ್‌ವಾಶ್‌ ಮಾಡಲು ಸಹ ನೆರವಾದರು. 130 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಮೂರನೇ ಟೆಸ್ಟ್ ಅನ್ನು 8 ವಿಕೆಟ್‌ಗಳಿಂದ ಗೆದ್ದು ಪಾಕ್‌ ತಂಡವನ್ನು 3 - 0 ಅಂತರದಿಂದ ಗೆಲುವು ಸಾಧಿಸಿದರು. ವಾರ್ನರ್‌ ಅಂತಿಮ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಸಾಜಿದ್‌ ಖಾನ್‌ಗೆ ಔಟಾಗಿದ್ದಾರೆ. ಆನ್‌ಫೀಲ್ಡ್‌ ಅಂಪೈರ್ ಈ ಔಟ್‌ ಕೊಡದಿದ್ದರೂ, ಡಿಆರ್‌ಎಸ್‌ ಮೂಲಕ ಡೇವಿಡ್‌ ವಾರ್ನರ್ ತಮ್ಮ ಕಡೆಯ ಪಂದ್ಯದಲ್ಲಿ ಔಟಾಗಿದ್ದಾರೆ.

ಅಮೂಲ್ಯ ವಸ್ತು ಕಳೆದುಕೊಂಡ ಡೇವಿಡ್ ವಾರ್ನರ್: ಕೈಮುಗಿದ ಕಳ್ಳನಿಗೆ ಬೇಡಿಕೊಂಡ ಆಸೀಸ್ ಓಪನರ್

ಡ್ರೆಸ್ಸಿಂಗ್ ಕೋಣೆಗೆ ತೆರಳುವ ಮುನ್ನ ಪಾಕ್‌ ಆಟಗಾರರು ಸಹ ಡೇವಿಡ್‌ ವಾರ್ನರ್‌ರನ್ನು ಅಭಿನಂದಿಸಿದರು. ಈ ಮಧ್ಯೆ, ಡೇವಿಡ್‌ ವಾರ್ನರ್ ಸ್ಟೇಡಿಯಂನಿಂದ ನಿರ್ಗಮಿಸುವ ಮುನ್ನ ಮುಖದಲ್ಲಿ ಬೇಸರ ಮೂಡಿತ್ತು. ನಂತರ, ಹೆಲ್ಮೆಟ್‌  ಅನ್ನು ಚುಂಬಿಸಿ, ಬೌಂಡರಿ ಲೈನ್‌ನಲ್ಲಿ ಕಾಯುತ್ತಿದ್ದ ಸ್ಟೀವ್ ಸ್ಮಿತ್‌ರೊಂದಿಗೆ ಅಪ್ಪುಗೆ ಹಂಚಿಕೊಂಡರು. ಅಲ್ಲದೆ, ಮೆಟ್ಟಿಲು ಹತ್ತುವಾಗ, ಅವರು ತಮ್ಮ ಹೆಲ್ಮೆಟ್ ಮತ್ತು ಬ್ಯಾಟಿಂಗ್ ಗ್ಲೌಸ್‌ಗಳನ್ನು ಸ್ಟ್ಯಾಂಡ್‌ನಲ್ಲಿದ್ದ ಯುವ ಅಭಿಮಾನಿಗೆ ನೀಡಿದರು.

112 ಟೆಸ್ಟ್‌ ಪಂದ್ಯಗಳಲ್ಲಿ 44.60 ಸರಾಸರಿಯಲ್ಲಿ 8,786 ರನ್‌ಗಳನ್ನು ಡೇವಿಡ್‌ ವಾರ್ನರ್‌ ಹೊಡೆದಿದ್ದು, 70.20 ಸ್ಟ್ರೈಕ್ ರೇಟ್‌ನೊಂದಿಗೆ 26 ಶತಕಗಳು ಮತ್ತು 37 ಅರ್ಧ ಶತಕಗಳನ್ನು ಸಿಡಿಸಿದ ನಂತರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಲ್ಲದೆ, ವಾರ್ನರ್ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಸ್ಲಿಪ್ ಫೀಲ್ಡರ್‌ಗಳಲ್ಲಿ ಒಬ್ಬರಾಗಿ 91 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

ವಿದಾಯ ಟೆಸ್ಟ್‌ಗೂ ಮುನ್ನ ಏಕದಿನಕ್ಕೆ ಡೇವಿಡ್ ವಾರ್ನರ್‌ ಬೈಬೈ

ಇನ್ನು, ಸರಣಿ ಗೆಲುವಿನ ನಂತರ ಮಾತನಾಡಿದ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯ ತಂಡಕ್ಕೆ 18 ತಿಂಗಳಿಂದ ಸುಮಾರು 2 ವರ್ಷ ಉತ್ತಮವಾಗೇ ಇತ್ತು. ಈಗ 3 - 0 ಯಿಂದ ಗೆಲುವು ಸಾಧಿಸಿದ್ದು, ಕನಸು ನನಸಾಗಿದೆ. ನಾನು ಶ್ರೇಷ್ಠ ಕ್ರಿಕೆಟಿಗರ ಗುಂಪಿನೊಂದಿಗೆ ಇರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios