IPL Auction 2022 ಸರೋಜಿನಿ ನಗರ ಮಾರ್ಕೆಟ್ ಲೆವೆಲ್‌ನಲ್ಲಿ ವಾರ್ನರ್ ಖರೀದಿ, ವಾಸಿಮ್ ಜಾಫರ್ ಟ್ವೀಟ್ ವೈರಲ್!

  • ಸ್ಫೋಟಕ ಬ್ಯಾಟ್ಸ್‌ಮನ್ ವಾರ್ನರ್ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
  • 6.25 ಕೋಟಿ ರೂಪಾಯಿಗೆ ವಾರ್ನರ್ ಖರೀದಿಸಿದ ಡೆಲ್ಲಿ
  • ಡೆಲ್ಲಿ ಖರೀದಿ ಚೌಕಾಸಿಯನ್ನು ಮಾರ್ಕೆಟ್‌ಗೆ ಹೋಲಿಸಿದ ಮಾಜಿ ಕ್ರಿಕೆಟಿಗ
David Warner just rs6 25 crore for Delhi like Sarojini Nagar market level bargain says Wasim Jaffer ckm

ಬೆಂಗಳೂರು(ಫೆ.12):  ಐಪಿಎಲ್ ಹರಾಜು(IPL Auction 2022) ಪ್ರಕ್ರಿಯೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. 1 ಕೋಟಿ ಮೂಲ ಬೆಲೆಯ ವನಿಂದು ಹಸರಂಗ 10.75 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಇತ್ತ ಅನುಭವಿ ಸುರೇಶ್ ರೈನಾ ಅನ್‌ಸೋಲ್ಡ್ ಆಗುವ ಮೂಲಕ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಇದರ ನಡುವೆ ಡೇವಿಡ್ ವಾರ್ನರ್(David Warner) ಖರೀದಿ ಇದೀಗ ಭಾರಿ ಚರ್ಚೆಯಾಗತ್ತಿದೆ. ವಾರ್ನರ್ ಖರೀದಿಯನ್ನು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ದೆಹಲಿ ಸರೋಜಿನಿ ನಗರ ಮಾರ್ಕೆಟ್ ಖರೀದಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ (Delhi Capitals)ತಂಡ ಡೇವಿಡ್ ವಾರ್ನರ್‌ಗೆ 6.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಕಡಿಮೆ ಮೊತ್ತಕ್ಕೆ ಡೆಲ್ಲಿ ತಂಡಕ್ಕೆ ಲಭ್ಯವಾಗಿದ್ದಾರೆ. ಡೆಲ್ಲಿ ತಂಡಕ್ಕೆ ಜಾಕ್‌ಪಾಟ್ ಎಂದು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತು ಚರ್ಚಿಸುತ್ತಿದ್ದಾರೆ. ಇದೇ ಮಾತನ್ನು ವಾಸಿಮ್ ಜಾಫರ್(Wsim jaffer) ದೆಹಲಿಯ ಗಲ್ಲಿ ಮಾತಿನಲ್ಲಿ ಹೇಳಿದ್ದಾರೆ. 

IPL Auction 2022 ವೇದಿಕೆಯಲ್ಲಿ ದಿಢೀರ್ ಕುಸಿದ ಬಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್

ಚೌಕಾಸಿ ಮಾಡುವುದರಲ್ಲಿ ದೆಹಲಿ(Delhi) ಮಂದಿ ಎಲ್ಲರಿಗಿಂತ ಮುಂದಿದ್ದಾರೆ. ಆದರೆ ಡೇವಿಡ್ ವಾರ್ನರ್‌ನ್ನು 6.25 ಕೋಟಿ ರೂಪಾಯಿಗೆ ಖರೀದಿಸಿರುವುದು ದೆಹಲಿ ಸರೋಜಿನಿ ನಗರ ಮಾರ್ಕೆಟ್(Sarojini Nagar Market) ಲೆವೆಲ್ ಚೌಕಾಸಿಯಾಗಿದೆ ಎಂದು ವಾಸಿಮ್ ಜಾಫರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. 

 

ದೆಹಲಿಯ ಸರೋಜಿನಿ ನಗರ ಮಾರ್ಕೆಟ್ ಅಥವಾ ಎಸ್ಎನ್ ಮಾರ್ಕೆಟ್ ಬಟ್ಟೆ ಸೇರಿದಂತೆ ಇತರ ವಸ್ತುಗಳ ವ್ಯಾಪಾರಕ್ಕೆ ಅತ್ಯಂತ ಜನಪ್ರಿಯವಾಗಿದೆ. ಇಲ್ಲಿ ಚೌಕಾಸಿ ಮಾಡಿ ಬಟ್ಟೆ ಖರೀದಿಸಬೇಕು. ದೆಹಲಿ ಪ್ರವಾಸ ಹೋದರೆ ಸರೋಜಿನಿ ನಗರ ಮಾರುಕಟ್ಟೆಗೆ ಭೇಟಿ ನೀಡದೆ ಹೋದರೆ ದೆಹಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಎಲ್ಲಾ ಬ್ರ್ಯಾಂಡ್ ಬಟ್ಟಗಳು ಲಭ್ಯವಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಬಟ್ಟೆಗಳು ಲಭ್ಯವಿದೆ. ಕೈಗೆಟುಕುವ ದರದಲ್ಲಿ ಬಟ್ಟೆ ಖರೀದಿಸಲು ಅವಕಾಶವಿದೆ. ಇನ್ನು ಈ ಮಾರುಕಟ್ಟೆ ಅತ್ಯಂತ ಜನವಿರುವ ಸ್ಥಳವಾಗಿದೆ. ಅತೀ ಹೆಚ್ಚಿನ ಮಂದಿ ಈ ಮಾರುಕಟ್ಟೆಗೆ ಆಗಮಿಸಿ ತಮಿಗಿಷ್ಟದ ಬಟ್ಟೆ ಖರೀದಿಸುತ್ತಾರೆ. ಖ್ಯಾತ ಗಾಯಕಿ ಸರೋಜಿನಿ ನಾಯ್ದು ಗೌರವಾರ್ಥವಾಗಿ ಈ ಮಾರುಕಟ್ಟೆಗೆ ಸರೋಜಿನಿ ನಗರ ಮಾರ್ಕೆಟ್ ಎಂಬ ಹೆಸರಿಡಲಾಗಿದೆ. ಇದೀಗ ವಾಸಿಮ್ ಜಾಫರ್ ದೆಹಲಿ ತಂಡ ಸರೋಜಿನಿ ಮಾರ್ಕೆಟ್ ರೀತಿಯಲ್ಲಿ ಅತೀ ಕಡಿಮೆ ಬೆಲೆಗೆ ವಾರ್ನರ್ ಖರೀದಿಸಿದೆ ಎಂದಿದ್ದಾರೆ.

IPL Auction 2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ!

2021ರ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಯಕ ವಾರ್ನರ್ ತಂಡದಿಂದ ಹೊರಗಿಟ್ಟು ಕೇನ್ ವಿಲಿಯಮ್ಸನ್‌ಗೆ ನಾಯಕತ್ವ ನೀಡಿತ್ತು. ಹೈದರಾಬಾದ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ವಾರ್ನರ್ ಕಳೆದ ಆವತ್ತಿಯಲ್ಲಿ ಕಳಪೆ ಫಾರ್ಮ್‌ನಿಂದ ತೀವ್ರ ಹಿನ್ನಡೆ ಅನುಭವಿಸಿದ್ದರು. 

ಕಳಪೆ ಫಾರ್ಮ್ ಕಾರಣ ಸನ್‌ರಸರ್ಸ್ ಹೈದರಾಬಾದ್ ತಂಡ ಮೊದಲು ವಾರ್ನರ್ ಕೈಬಿಟ್ಟಿತ್ತು. ಇದೀಗ ಹರಾಜಿನಲ್ಲಿ ವಾರ್ನರ್‌ನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿ ಮಾಡಿತು. ಈ ಮೂಲಕ ಸ್ಫೋಟಕ ಬ್ಯಾಟ್ಸ್‌ಮನ್‌ನ್ನು ತಂಡಕ್ಕೆ ಸೇIPL Auction 2022 : ಲಖನೌ ತಂಡದಲ್ಲಿ ರಾಹುಲ್ -ಮನೀಷ್ ಜೋಡಿ, ಪಡಿಕ್ಕಲ್ ಮಿಲಿಯನೇರ್!ರಿಸಿಕೊಂಡಿತು. ಈ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಖರೀದಿಯಾಗಿತ್ತು. 

IPL Auction 2022 : ಲಖನೌ ತಂಡದಲ್ಲಿ ರಾಹುಲ್ -ಮನೀಷ್ ಜೋಡಿ, ಪಡಿಕ್ಕಲ್ ಮಿಲಿಯನೇರ್!

ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ 150 ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ 5,449 ರನ್ ಸಿಡಿಸಿದ್ದಾರೆ. 4 ಸೆಂಚುರಿ ಹಾಗೂ 50 ಅರ್ಧಶತಕ ಸಿಡಿಸಿದ್ದಾರೆ. 126 ರನ್ ವಾರ್ನರ್ ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿತ ಗರಿಷ್ಠ ಸ್ಕೋರ್.

Latest Videos
Follow Us:
Download App:
  • android
  • ios