Asianet Suvarna News Asianet Suvarna News

ಡೇವಿಡ್ ವಾರ್ನರ್ ಸೆಂಚುರಿ; ಭಾರತಕ್ಕೆ ಸೋಲಿನ ವರಿ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಡೇವಿಡ್ ವಾರ್ನರ್ ಸೆಂಚುರಿ ಮೂಲಕ ಆಸ್ಟ್ರೇಲಿಯಾ ಗೆಲುವಿನ ಸನಿಹದಲ್ಲಿದೆ. ವಾರ್ನರ್ ಸೆಂಚುರಿ ಅಬ್ಬರದ ವಿವರ ಇಲ್ಲಿದೆ.

David warner hit 18th odi century against Team India
Author
Bengaluru, First Published Jan 14, 2020, 8:04 PM IST

ಮುಂಬೈ(ಜ.14): ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಆರಂಭಿಕ ಡೇವಿಡ್ ವಾರ್ನರ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ನಿರಾಯಾಸವಾಗಿ ಗೆಲುವಿನತ್ತ ಹೆಜ್ಜೆ ಹಾಕಿದರೆ, ಭಾರತ ಹೀನಾಯ ಸೋಲಿನತ್ತ ವಾಲಿದೆ. ಮೊದಲ ಏಕದಿನ ಪಂದ್ಯದಲ್ಲೇ ಭಾರತದ ಕಳಪೆ ಪ್ರದರ್ಶನ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ: ಕೊಹ್ಲಿ ಟೀಕಿಸಿದ ಫ್ಯಾನ್ಸ್!.

ಡೇವಿಡ್ ವಾರ್ನರ್ ಬೌಂಡರಿ ಮೂಲಕ ಸೆಂಚುರಿ ಪೂರೈಸಿದರು. ವಾರ್ನರ್ ಶತಕದಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಏಕದಿನದಲ್ಲಿ 18ನೇ ಶತಕ ಸಿಡಿಸಿದ ವಾರ್ನರ್ ಭಾರತ ಗೆಲುವಿನ ಆಸೆಗೆ ತಣ್ಣೀರೆರಚಿದರು. ವಾರ್ನರ್‌ಗೆ ಫಿಂಚ್ ಉತ್ತಮ ಸಾಥ್ ನೀಡಿದರು. ಆರಂಭಿಕರಿಬ್ಬರು 200 ರನ್ ಜೊತೆಯಾಟ ಆಡೋ ಮೂಲಕ ದಾಖಲೆ ಬರೆದರು.

ಟೀಂ ಇಂಡಿಯಾ ವಿಕೆಟ್ ಕಬಳಿಸಲು ಹಲವು ಪ್ರಯತ್ನ ನಡೆಸಿತು. ಇದ್ದ ರಿವ್ಯೂವ್ ಕೂಡ ಕಳೆದುಕೊಂಡಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆಸೀಸ್ ತಂಡದ ಅಬ್ಬರಕ್ಕೆ ಭಾರತದ ಬಳಿ ಉತ್ತರ ಇರಲಿಲ್ಲ. ಹೊಸ ವರ್ಷದ ಮೊದಲ ಏಕದಿನ ಸರಣಿ ಭಾರತದ ಪಾಲಿಗೆ ಕಠಿಣವಾಗುತ್ತಿದೆ.
 

Follow Us:
Download App:
  • android
  • ios