ಒಂದು ಕಾಲದಲ್ಲಿ ಟೆಂಟಲ್ಲಿರುತ್ತಿದ್ದ ಕ್ರಿಕೆಟರ್ ಜೈಸ್ವಾಲ್ ಈಗ 5.4 ಕೋಟಿ ಮನೆ ಮಾಲೀಕ!
ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಬಡತನ ಗೆದ್ದು ಬಂದಿದ್ದಾರೆ. ಸತತ ಪರಿಶ್ರಮದ ಮೂಲಕ ಸಾಧಿಸಿ ತೋರಿಸಿದ್ದಾರೆ. ಕ್ರಿಕೆಟ್ ನಲ್ಲಿ ಅಧ್ಬುತ ಆಟ ಪ್ರದರ್ಶನ ಮಾಡುವ ಜೈಸ್ವಾಲ್, ಮುಂಬೈನಲ್ಲಿ ಎರಡನೇ ಫ್ಲಾಟ್ ಖರೀದಿ ಮಾಡಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.
ಒಂದು ಕಾಲದಲ್ಲಿ ಟೆಂಟ್ ನಲ್ಲಿ ರಾತ್ರಿ ಕಳೆಯುತ್ತಿದ್ದ ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅದೃಷ್ಟ ಬದಲಾಗಿದೆ. ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಯಶಸ್ವಿ ಜೈಸ್ವಾಲ್ ಭಾರತೀಯ ಕ್ರಿಕೆಟ್ ತಂಡದ ಯುವ ತಾರೆ. ಸದ್ಯ ಯಶಸ್ವಿ ಜೈಸ್ವಾಲ್, ಫ್ಲಾಟ್ ಖರೀದಿ ವಿಷ್ಯದಲ್ಲಿ ಸುದ್ದಿಯಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ಮುಂಬೈನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಿದ್ದಾರೆ. ಈ ಫ್ಲಾಟ್ ಬೆಲೆ 5.4 ಕೋಟಿ ರೂಪಾಯಿ.
ಯಶಸ್ವಿ ಜೈಸ್ವಾಲ್ ( Yashasvi Jaiswa) ಫ್ಲ್ಯಾಟ್ ಖರೀದಿ ಮಾಡ್ತಾರೆ ಎನ್ನುವ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿತ್ತು. 5.4 ಕೋಟಿ ರೂಪಾಯಿ ಮೌಲ್ಯದ ಈ ಅಪಾರ್ಟ್ಮೆಂಟ್ (Apartment) ಗಾತ್ರ 1,110 ಚದರ ಅಡಿ. ನೋಂದಣಿ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಅಪಾರ್ಟ್ಮೆಂಟ್ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದರೂ, ಈ ವರ್ಷದ ಕೊನೆಯಲ್ಲಿ ಯಶಸ್ವಿ ಅಪಾರ್ಟ್‌ಮೆಂಟ್ ನಲ್ಲಿ ವಾಸ ಶುರುಮಾಡುವ ಸಾಧ್ಯತೆ ಇದೆ. ಯಶಸ್ವಿ ಖರೀದಿಸಿರುವ ಅಪಾರ್ಟ್‌ಮೆಂಟ್ ಸಾಕಷ್ಟು ಐಷಾರಾಮಿ ( Luxurious) ಯಾಗಿದೆ.
ಏನಿದು ನೀಲಿ ಆಧಾರ್ ಕಾರ್ಡ್? ಇದನ್ನು ಯಾರಿಗಾಗಿ, ಹೇಗೆ ಮಾಡಿಸುವುದು?
ಯಶಸ್ವಿ ಜೈಸ್ವಾಲ್ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಅವರ ಬಾಲ್ಯ ತುಂಬಾ ಕಷ್ಟಕರವಾಗಿತ್ತು. ಕ್ರಿಕೆಟ್‌ನಲ್ಲಿ ಅವರ ಉತ್ಸಾಹ ಅವರನ್ನು ಯುಪಿಯ ಭದೋಹಿಯಿಂದ ಮುಂಬೈಗೆ ಕರೆತಂದಿತ್ತು. ಆಜಾದ್ ಮೈದಾನದಲ್ಲಿ ಟೆಂಟ್‌ನಲ್ಲಿ ಅವರು ವಾಸಿಸುತ್ತಿದ್ದರು. ಅವರ ಪೋಷಕರು ಉತ್ತರ ಪ್ರದೇಶದ ಬದೋಹಿಯಲ್ಲಿ ವಾಸಿಸುತ್ತಿದ್ದರು. ಮುಂಬೈಗೆ ಬಂದ ಕೆಲ ದಿನ ಚಿಕ್ಕಪ್ಪನ ಮನೆಯಲ್ಲಿದ್ದ ಯಶಸ್ವಿ, ಮನೆ ಚಿಕ್ಕದಾಗಿದ್ದರಿಂದ ಟೆಂಟ್ ಗೆ ಶಿಫ್ಟ್ ಆಗಿದ್ದರು. ಆಜಾದ್ ಮೈದಾನದಲ್ಲಿಯೇ ಕ್ರಿಕೆಟ್‌ನ ಸೂಕ್ಷ್ಮತೆಗಳನ್ನು ಕಲಿತು ಯಶಸ್ವಿ ಈಗ ಈ ಹಂತಕ್ಕೆ ಬಂದು ನಿಂತಿದ್ದಾರೆ. ಇಪ್ಪತ್ತೆರಡು ವರ್ಷದ ಯಶಸ್ವಿ ಮುಂಬೈನಲ್ಲಿ ಖರೀದಿ ಮಾಡಿದ ಎರಡನೇ ಮನೆ ಇದು. ಈ ಹಿಂದೆ ಅವರು ಥಾಣೆಯಲ್ಲಿ 5 ಬಿಎಚ್‌ಕೆ ಫ್ಲಾಟ್ ಖರೀದಿಸಿದ್ದರು.
ಯಶಸ್ವಿ ಜೈಸ್ವಾಲ್ ಅವರ ನಿವ್ವಳ ಮೌಲ್ಯ ಎಷ್ಟು ? : ಯಶಸ್ವಿ ಜೈಸ್ವಾಲ್ ಅವರ ನಿವ್ವಳ ಮೌಲ್ಯವು ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಏರುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಯಶಸ್ವಿ ಅವರ ವಾರ್ಷಿಕ ವೇತನ 4 ಕೋಟಿ ರೂಪಾಯಿ. ಅವರ ನಿವ್ವಳ ಮೌಲ್ಯ ಸುಮಾರು 16 ಕೋಟಿ ರೂಪಾಯಿ.
ಯಶಸ್ವಿ ಜೈಸ್ವಾಲ್ ಯಾರ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ? : ಯಶಸ್ವಿ ಖರೀದಿಸಿರುವ ಪ್ರಾಜೆಕ್ಟ್ ಅದಾನಿ ರಿಯಾಲ್ಟಿಯಲ್ಲಿದೆ. ಇದನ್ನು 2016 ರಲ್ಲಿ 2 ಬಿಎಚ್ ಕೆ, 3 ಬಿಎಚ್ ಕೆ ಮತ್ತು 4 ಬಿಎಚ್ ಕೆ ಅಪಾರ್ಟ್ಮೆಂಟ್ ಗಳೊಂದಿಗೆ ಪ್ರಾರಂಭಿಸಲಾಯಿತು. ಇದನ್ನು ಪ್ರಾರಂಭಿಸಿದಾಗ ಅದು ರೇಡಿಯಸ್ ಎಸ್ಟೇಟ್ (Radius Estate) ಕೈನಲ್ಲಿತ್ತು. ಆದ್ರೆ ರೇಡಿಯಸ್ ಎಸ್ಟೇಟ್ ದಿವಾಳಿಯಾದ ನಂತರ ಅದರ ಜವಾಬ್ದಾರಿಯನ್ನು ಅದಾನಿ ರಿಯಾಲ್ಟಿಯ ಕೈಗೆ ಬಂದಿತ್ತು. ಪ್ರಸ್ತುತ ಈ ಯೋಜನೆಯು ಅದಾನಿ ರಿಯಾಲ್ಟಿ (Adani Realty)ಯಲ್ಲಿದೆ.
ಒಂದೇ ಕಂಪೆನಿಯಿಂದ ಭರ್ತಿ 915 ಕೋಟಿ ರೂ. ಲಾಭ ಗಳಿಸಿದ ನಾರಾಯಣ ಮೂರ್ತಿ-ಸುಧಾ ಮೂರ್ತಿ, ಇನ್ಫೋಸಿಸ್ ಅಲ್ಲ!
ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಯಶಸ್ವಿ ಜೈಸ್ವಾಲ್ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಅಧ್ಬುತ ಆಟದ ಕಾರಣ ಯಶಸ್ವಿ ಜೈಸ್ವಾಲ್, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಾಧ್ಯವಾಯ್ತು. ಕಳೆದ ವರ್ಷ ಯಶಸ್ವಿ ಜೈಸ್ವಾಲ್ ಗೆ ಚೊಚ್ಚಲ ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿತ್ತು. ಯಶಸ್ವಿ ಈವರೆಗೆ ಏಳು ಟೆಸ್ಟ್ ಮತ್ತು 17 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 71.75 ಸರಾಸರಿಯಲ್ಲಿ 861 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಜೈಸ್ವಾಲ್ 502 ರನ್ ಗಳಿಸಿ, ಭರವಸೆ ಆಟಗಾರ ಎನ್ನಿಸಿಕೊಂಡಿದ್ದಾರೆ.