ನವದೆಹಲಿ(ಡಿ.23): ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ತಮ್ಮ ಗೆಳತಿ ಧನಶ್ರೀ ವರ್ಮಾ ಜತೆ ಡಿಸೆಂಬರ್ 22ರಿಂದ ಹೊಸ ಇನಿಂಗ್ಸ್‌ ಆರಂಭಿಸಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ರೀತಿಯಲ್ಲಿಯೇ ಚಹಲ್ ಮದುವೆಯನ್ನು ತುಂಬಾ ಗುಟ್ಟಾಗಿಯೇ ಮಾಡಿಕೊಂಡಿದ್ದಾರೆ.

ಈ ಮುದ್ದಾದ ಜೋಡಿ ಗುರುಗಾವ್‌ನಲ್ಲಿರುವ ಕರ್ಮಾ ಲೇಕ್ ರೆಸಾರ್ಟ್‌ನಲ್ಲಿ ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇದಾದ ಬಳಿಕ ಈ ಜೋಡಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ತಮ್ಮ ಅಭಿಮಾನಿಗಳಿಗೆ ತಾವು ಮದುವೆಯಾಗಿರುವ ವಿಚಾರವನ್ನು ತಿಳಿಸಿದ್ದಾರೆ. 

ಕಳೆದ ಆಗಸ್ಟ್‌ನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಯುಜುವೇಂದ್ರ ಚಹಲ್ ದಿಢೀರ್ ಎನ್ನುವಂತೆ ಧನಶ್ರೀ ವರ್ಮ ಜತೆ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದ್ದರು. ಅದೇ ರೀತಿ ಇದೀಗ ಚಹಲ್ ದಾಪಂತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಧನಶ್ರೀ ವರ್ಮ ಜೊತೆ ಸಪ್ತಪದಿ ತುಳಿದ ಯಜುವೇಂದ್ರ ಚಹಾಲ್!

ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಹೊಸ ಇನಿಂಗ್ಸ್ ಆರಂಭಿಸಿದ್ದಕ್ಕೆ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ನವದೀಪ್ ಸೈನಿ ಸೇರಿದಂತೆ ಹಲವು ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ.