ವ್ಯಾಲಂಟೈನ್ ದಿನದಂದು ಶುಭ್‌ಮನ್ ಗಿಲ್ ಹಂಚಿಕೊಂಡ ಫೋಟೋ ವೈರಲ್‌ಸಾರಾ ತೆಂಡುಲ್ಕರ್ ಜತೆಗೆ ಶುಭ್‌ಮನ್ ಗಿಲ್ ಡೇಟಿಂಗ್?ಈ ಹಿಂದೆ ಸಾರಾ ಕೂಡಾ ಅದೇ ಜಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಪತ್ತೆ..!

ನವದೆಹಲಿ(ಫೆ.16): ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌, ಕಳೆದ ಕೆಲ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನೆ ಮಾತಾಗಿದ್ದಾರೆ. ಇನ್ನು ಶುಭ್‌ಮನ್ ಗಿಲ್‌, ಕ್ರಿಕೆಟ್‌ನಲ್ಲಿ ಸುದ್ದಿಯಾದಷ್ಟೇ, ವೈಯುಕ್ತಿಕ ಜೀವನದ ವಿಚಾರದಲ್ಲೂ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಶುಭ್‌ಮನ್ ಗಿಲ್‌ ಅವರ ಹೆಸರು, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಾಗೂ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್‌ ಅವರ ಜತೆ ಆಗಾಗ ಥಳುಕು ಹಾಕಿಕೊಳ್ಳುತ್ತಲೇ ಇರುತ್ತದೆ.

ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ಎದುರು ನಡೆದ ಏಕದಿನ ಪಂದ್ಯದಲ್ಲಿ ಶುಭ್‌ಮನ್‌ ಗಿಲ್, ಆಕರ್ಷಕ ದ್ವಿಶತಕ ಚಚ್ಚಿದಾಗ, ಪ್ರೇಕ್ಷಕರು 'ಸಾರಾ-ಸಾರಾ' ಎಂದು ಕೂಗುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಆದರೆ ಶುಭ್‌ಮನ್ ಗಿಲ್ ಯಾರ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಸ್ಪಷ್ಟವಾಗಿರಲಿಲ್ಲ. ಇನ್ನು ಇತ್ತೀಚೆಗಷ್ಟೇ ಶುಭ್‌ಮನ್‌ ಗಿಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲಂಡನ್‌ನ ಕೆಫೆಯೊಂದರಲ್ಲಿ ಕಾಫಿ ಹೀರುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇನ್ನು ಇದೇ ಕುರ್ಚಿಯಲ್ಲಿ ಸಾರಾ ತೆಂಡುಲ್ಕರ್ ಅವರು ಕುಳಿತಿರುವ ಫೋಟೋವನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಇದರ ಜತೆಗೆ ಸಾರಾ ತೆಂಡುಲ್ಕರ್ ಹಾಗೂ ಶುಭ್‌ಮನ್‌ ಗಿಲ್‌ ನಡುವೆ ಲವ್ವಿಡವ್ವಿ ನಡೆಯುತ್ತಿದೆ ಎಂದು ಷರಾ ಬರೆದುಬಿಟ್ಟಿದ್ದಾರೆ.

View post on Instagram

ಶುಭ್‌ಮನ್ ಗಿಲ್ ಫೋಟೋ ಹಂಚಿಕೊಂಡ ಬೆನ್ನಲ್ಲೇ ಇನ್‌ಸ್ಟಾಗ್ರಾಂನಲ್ಲಿ 'ಯಾವ ಸಾರಾ ಖಾನ್‌ ಈ ಫೋಟೋ ಕ್ಲಿಕ್ಕಿಸಿದ್ದು? ಎಂದು ಪ್ರಶ್ನಿಸಿದ್ದಾರೆ. ಮತ್ತೋರ್ವ ನೆಟ್ಟಿಗ ಖಾನ್ ಅಥವಾ ತೆಂಡುಲ್ಕರ್ ಎಂದು ಪ್ರಶ್ನಿಸಿದ್ದಾನೆ.

'ಫುಟ್‌ಬಾಲ್‌ ಟೀಮ್‌ಗೆ ಚೆಸ್‌ ಪ್ಲೇಯರ್ ಕೋಚ್‌ ಆದಂಗಾಯ್ತು..' ಆರ್‌ಸಿಬಿ 'ಮೆಂಟರ್‌' ಆಯ್ಕೆಗೆ ತಲೆಕೆರೆದುಕೊಂಡ ಫ್ಯಾನ್ಸ್‌!

ಇನ್ನೂ ಓರ್ವ ನೆಟ್ಟಿಗ, ಸಾರಾ ತೆಂಡುಲ್ಕರ್ ಕೂಡಾ ಇದೇ ಬ್ಯಾಕ್‌ಗ್ರೌಂಡ್‌ನಲ್ಲಿ ಕುಳಿತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಪತ್ತೆಹಚ್ಚಿದ್ದಾರೆ. ಜುಲೈ 15, 2021ರಲ್ಲಿ ಸಾರಾ ತೆಂಡುಲ್ಕರ್, ಇದೇ ಬ್ಯಾಕ್‌ಗ್ರೌಂಡ್‌ನಲ್ಲಿ ಕ್ಲಿಕ್ಕಿಸಿರುವ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ಕೂಡಾ ಆವಾಗಲೇ ಕ್ಲಿಕ್ಕಿಸಿದ್ದಿರಬಹುದು. ಆದರೆ ಈಗ ಗಿಲ್ ಫೋಟೋ ಶೇರ್‌ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸಾರಾ ತೆಂಡುಲ್ಕರ್ ಹಾಗೂ ಶುಭ್‌ಮನ್‌ ಗಿಲ್ ಒಟ್ಟಿಗೆ ಡೇಟಿಂಗ್ ಮಾಡುತ್ತಿರುವುದು ಪಕ್ಕಾ, ಈ ಕಾರಣಕ್ಕಾಗಿಯೇ ಶುಭ್‌ಮನ್ ಗಿಲ್, ವ್ಯಾಲಂಟೈನ್ ದಿನದಂದೇ ಫೋಟೋ ಶೇರ್ ಮಾಡಿದ್ದಾರೆ ಎಂದು ನೆಟ್ಟಿಗರು ಮಾತಾನಾಡಿಕೊಳ್ಳಲಾರಂಭಿಸಿದ್ದಾರೆ.

View post on Instagram

ಡೆಲ್ಲಿ ಟೆಸ್ಟ್‌ನಲ್ಲಿ ಕಣಕ್ಕಿಳಿಯುತ್ತಾರಾ ಶುಭ್‌ಮನ್‌ ಗಿಲ್‌..?:

ಪಂಜಾಬ್ ಮೂಲದ ಪ್ರತಿಭಾನ್ವಿಯ ಬ್ಯಾಟರ್ ಟೀಂ ಇಂಡಿಯಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಿದ್ದೂ, ಆಸ್ಟ್ರೇಲಿಯಾ ಎದುರಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಶುಭ್‌ಮನ್ ಗಿಲ್ ಬೆಂಚ್ ಕಾಯಿಸುವಂತಾಗಿತ್ತು. ಕನ್ನಡಿಗ ಕೆ ಎಲ್ ರಾಹುಲ್‌ ನಾಯಕ ರೋಹಿತ್ ಶರ್ಮಾ ಜತೆಗೂಡಿ ಇನಿಂಗ್ಸ್‌ ಆರಂಭಿಸಿದ್ದರಿಂದ ಶುಭ್‌ಮನ್ ಗಿಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಇನ್ನು ಮೊದಲ ಟೆಸ್ಟ್‌ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ಫೆಬ್ರವರಿ 17ರಿಂದ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.