ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ ನಾಯಕತ್ವಕ್ಕೆ ಗುಡ್‌ ಬೈ ಹೇಳಿದ ಜೋ ರೂಟ್..!

* ಇಂಗ್ಲೆಂಡ್ ಟೆಸ್ಟ್ ನಾಯಕತ್ವಕ್ಕೆ ಜೋ ರೂಟ್ ಗುಡ್‌ ಬೈ

* ಇಂಗ್ಲೆಂಡ್ ಸಾಲು ಸಾಲು ಸೋಲು ಕಂಡ ಬೆನ್ನಲ್ಲೇ ಈ ಮಹತ್ವದ ತೀರ್ಮಾನ

* 2017ರಲ್ಲಿ ಟೆಸ್ಟ್ ನಾಯಕರಾಗಿ ಆಯ್ಕೆಯಾಗಿದ್ದ ಜೋ ರೂಟ್

Cricketer Joe Root steps down as England Test captain kvn

ಲಂಡನ್‌(ಏ.15): ವೈಯುಕ್ತಿಕ ಉತ್ತಮ ಪ್ರದರ್ಶನದ ಹೊರತಾಗಿಯೂ ಇಂಗ್ಲೆಂಡ್ ತಂಡವು ಸಾಲು ಸಾಲು ಸೋಲು ಕಾಣುತ್ತಿರುವ ಬೆನ್ನಲ್ಲೇ ತಕ್ಷಣಕ್ಕೆ ಜಾರಿಗೆ ಬರುವಂತೆ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವಕ್ಕೆ ಜೋ ರೂಟ್ ರಾಜೀನಾಮೆ (Joe Root steps down) ನೀಡಿದ್ದಾರೆ. ಇಂಗ್ಲೆಂಡ್‌ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಜೋ ರೂಟ್ ನಾಯಕದ ಕುರಿತಂತೆ ಕಟು ಟೀಕಾ ಪ್ರಹಾರ ನಡೆಸಿದ್ದರು. ಇದರೀಗ ಅಚ್ಚರಿಯ ಬೆಳವಣಿಗೆ ಎನ್ನುವಂತೆ ದಿಢೀರ್ ಆಗಿ ಜೋ ರೂಟ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 

ಕಳೆದ 17 ಪಂದ್ಯಗಳಲ್ಲಿ ಇಂಗ್ಲೆಂಡ್‌ ಕ್ರಿಕೆಟ್ ತಂಡವು (England Cricket Team) ಕೇವಲ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಜಯಿಸಿದೆ. ಅದರಲ್ಲೂ ಆಸ್ಟ್ರೇಲಿಯಾ ಎದುರಿನ ಆಷಸ್ ಟೆಸ್ಟ್ ಸರಣಿ, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಸೋಲು ಕಂಡಿತ್ತು. ಸತತ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಜೋ ರೂಟ್ ಮೇಲೆ ಟೀಕಾಪ್ರಹಾರವೇ ಹರಿದು ಬಂದಿತ್ತು. ಹಲವು ಸಹವರ್ತಿಗಳ ಜತೆ ಚರ್ಚಿಸಿಯೇ ತಾವು ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಜೋ ರೂಟ್‌ ತಿಳಿಸಿದ್ದಾರೆ.

ಇದು ಒಂದು ರೀತಿಯ ಸವಾಲಿನ ನಿರ್ಧಾರವಾಗಿತ್ತು ಎಂದ ಜೋ ರೂಟ್

ವೆಸ್ಟ್‌ ಇಂಡೀಸ್ ವಿರುದ್ದದ ಸರಣಿ ಮುಗಿಸಿದ ನಾನು ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದೆ. ಇದು ಒಂದು ರೀತಿ ನನ್ನ ಪಾಲಿಗೆ ಸವಾಲಿನ ತೀರ್ಮಾನವಾಗಿತ್ತು. ನಾನು ನನ್ನ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹಪಾಠಿಗಳ ಬಳಿ ಚರ್ಚಿಸಿ ಇದೇ ಸರಿಯಾದ ತೀರ್ಮಾನವೆಂದು ಭಾವಿಸಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನಿಸಿದೆ ಎಂದು ಜೋ ರೂಟ್ ಹೇಳಿದ್ದಾರೆ.  

ಆಲಿಸ್ಟರ್ ಕುಕ್‌, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ 2017ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನಾಗಿ ಜೋ ರೂಟ್ ನೇಮಕವಾಗಿದ್ದರು. ಇಂಗ್ಲೆಂಡ್ ಪರ 64 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಮೂಲಕ, ಇಂಗ್ಲೆಂಡ್ ತಂಡವನ್ನು ಅತಿಹೆಚ್ಚು ಬಾರಿ ಟೆಸ್ಟ್ ನಾಯಕನಾಗಿ ಮುಂದುವರೆಸಿದ ಕೀರ್ತಿ ಜೋ ರೂಟ್‌ಗೆ ಸಲ್ಲುತ್ತದೆ. ಈ ಪೈಕಿ ಇಂಗ್ಲೆಂಡ್ ತಂಡವು 27 ಗೆಲುವು ಹಾಗೂ 26 ಸೋಲುಗಳನ್ನು ಕಂಡಿದೆ. 

Latest Videos
Follow Us:
Download App:
  • android
  • ios