ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಪರವಾಗಿ ಆಡಿದ ಕ್ರಿಕೆಟಿಗನ ಕುರಿತು ಮಾಹಿತಿ ಇಲ್ಲಿದೆ. ಈತ ಪಂಜಾಬ್ ಮೂಲದವನಾಗಿದ್ದರೂ ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿದ್ದೇಕೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ನವದೆಹಲಿ (ಮಾ.09): ಭಾರತ ಸೇರಿದಂತೆ ವಿಶ್ವದಾದ್ಯಂತ ಇದೀಗ ಐಸಿಸಿ ಕ್ರಿಕೆಟ್ ಜ್ವರ ರಂಭವಾಗಿದೆ. ಇದೀಗ ಎಲ್ಲ ಪಂದ್ಯಗಳು ಮುಗಿದಿದ್ದು, ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಪ್ರಶಸ್ತಿಗಾಗಿ ಸೆಣಸಾಡಲಿವೆ. ಆದರೆ, ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ದೇಶ ಮತ್ತು ಭಾರತ ದೇಶ ಎರಡೂ ದೇಶಗಳ ಪ್ರತಿನಿಧಿಯಾಗಿ ಆಟವಾಡಿದ ಏಕೈಕ ಕ್ರಿಕೆಟ್ ಪ್ಲೇಯರ್ ಎಂಬ ವಿಶೇಷ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಪಂಜಾಬ್ ಮೂಲದ ಕ್ರಿಕೆಟರ್ ಆಗಿರುವ ಇವರ ಕ್ರಿಕೆಟ್ ಸಾಧನೆಯ ಪೂರ್ಣ ವಿವರ ಇಲ್ಲಿದೆ ನೋಡಿ..
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 9 ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಆದರೆ, ಈ ದೊಡ್ಡ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಭಾರತವು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದೆ, ನಂತರ ಇದು ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಭಾರತ-ಪಾಕಿಸ್ತಾನ ಬ್ಲಾಕ್ ಬಸ್ಟರ್ ಪಂದ್ಯವು ಫೆ.23 ರಂದು ದುಬೈನಲ್ಲಿ ನಡೆದಿದ್ದು, ಇಲ್ಲಿ ಇಂಡಿಯಾ ತಂಡವು ಪಾಕಿಸ್ತಾನವನ್ನು ಮಣಿಸಿದೆ. ಇನ್ನು ಐಸಿಸಿ ಟೂರ್ನಿ ಆಯೋಜನೆ ಮಾಡಿದ ಪಾಕಿಸ್ತಾನವೇ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಿದೆ.
ಪಾಕಿಸ್ತಾನ ಮತ್ತು ಭಾರತ ಬದ್ಧ ವೈರಿಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕ್ರಿಕೆಟ್ ಮಾತ್ರವಲ್ಲದೇ ಎಲ್ಲ ವಿಚಾರದಲ್ಲೂ ಪಾಕಿಸ್ತಾನ ನಮ್ಮ ವೈರಿಯೇ ಆಗಿದೆ. ಆದರೆ, ಇಂದು ನಿಮಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ಒಂದು ಕುತೂಹಲಕಾರಿ ಸಂಗತಿಯನ್ನು ಹೇಳುತ್ತೇವೆ. ಅದನ್ನು ಕೇಳಿ ನೀವು ಆಶ್ಚರ್ಯಚಕಿತರಾಗುತ್ತೀರಿ. ಮೊದಲ ಬಾರಿಗೆ ಹಿಂದೂಸ್ತಾನ್ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು 1952 ರಲ್ಲಿ ದೆಹಲಿಯಲ್ಲಿ ನಡೆಯಿತು. ಅದರ ನಂತರ, ಎರಡೂ ತಂಡಗಳ ನಡುವೆ ಹಲವು ರೋಚಕ ಪಂದ್ಯಗಳು ನಡೆದವು. ದೆಹಲಿಯಲ್ಲಿ ಎರಡೂ ತಂಡಗಳ ಮೊದಲ ಪಂದ್ಯ ನಡೆದಾಗ, ಅಬ್ದುಲ್ ಹಫೀಜ್ ಕರ್ದಾರ್ ಪಾಕ್ ತಂಡದ ನಾಯಕತ್ವ ವಹಿಸಿದ್ದರು. ಮುಖ್ಯ ಸಂಗತಿಯೆಂದರೆ, ಪಾಕ್ ನಾಯಕ ಹಫೀಜ್ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತ ಕ್ರಿಕೆಟ್ ತಂಡದ ಪರವಾಗಿಯೂ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: IND vs NZ Final: ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್ ಕದನ, ರಣ ರೋಚಕ ಪಂದ್ಯದಲ್ಲಿ ಗೆಲ್ಲೋರು ಯಾರು?
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕಾಗಿ ಆಡಿದ ಅಬ್ದುಲ್: ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಕ್ರಿಕೆಟ್ ಆಡುವುದಕ್ಕೆ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಅಬ್ದುಲ್ ಹಫೀಜ್ ಕರ್ದಾರ್ ಕೂಡ ಒಬ್ಬ ಆಟಗಾರನಾಗಿದ್ದರು. ಪಾಕಿಸ್ತಾನ ವಿಭಜನೆಗೂ ಮುನ್ನ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಎರಡೂ ದೇಶಗಳು ವಿಭಜನೆಯಾದಾಗ, ಅವರು ಭಾರತವನ್ನು ತೊರೆದು ಪಾಕ್‌ನಲ್ಲಿ ವಾಸಿಸಲು ನಿರ್ಧರಿಸಿದರು. 1947 ರ ನಂತರ ಅವರು ಅಲ್ಲೇ ನೆಲೆಸಿದರು. ಭಾರತದಿಂದ ಬೇರ್ಪಡುವವರೆಗೂ ಅವರು ದೇಶಕ್ಕಾಗಿ 3 ಟೆಸ್ಟ್ ಪಂದ್ಯಗಳನ್ನು ಆಡಿದರು. ಅವರು ಎಲ್ಲಾ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಡಿದರು. ಆದರೆ, ಭಾರತದಿಂದ ಪಾಕಿಸ್ತಾನ ವಿಭಜನೆಯಾದ ನಂತರ 1956ರಲ್ಲಿ ಪಾಕಿಸ್ತಾನವು ಅಂತಾರಾಷ್ಟ್ರೀಯಯ ಕ್ರಿಕೆಟ್ ತಂಡದ ಸ್ಥಾನಮಾನ ಪಡೆದುಕೊಂಡಿತು. ಆಗ ಇದೇ ಅಬ್ದುಲ್ ಹಫೀಜ್ ಪಾಕ್ ತಂಡದ ನಾಯಕನಾಗಿ ಭಾರತದ ವಿರುದ್ಧವೇ ಕ್ರಿಕೆಟದ ಪಂದ್ಯಗಳಲ್ಲಿ ಭಾಗಿಯಾದರು.
ಇದನ್ನೂ ಓದಿ: 'ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಗಢಾಫಿ ಸ್ಟೇಡಿಯಂ': ಪಾಕ್ ಕಾಲೆಳೆದ ನೆಟ್ಟಿಗರು!
ಅಬ್ದುಲ್ ಟೆಸ್ಟ್ ದಾಖಲೆ: ಭಾರತ-ಪಾಕಿಸ್ತಾನ 1947ರಲ್ಲಿ ವಿಭಜನೆಯಾದ ನಂತರ, ಅಬ್ದುಲ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಾಯಕನನ್ನಾಗಿ ಘೋಷಿಸಿತು. ಅವರು ಪಾಕಿಸ್ತಾನಕ್ಕಾಗಿ 23 ಟೆಸ್ಟ್ ಪಂದ್ಯಗಳನ್ನು ಆಡಿದರು. ಈ ರೀತಿ, ಭಾರತ ಮತ್ತು ಪಾಕಿಸ್ತಾನವನ್ನು ಸೇರಿಸಿ ಅವರು 26 ಟೆಸ್ಟ್ ಪಂದ್ಯಗಳನ್ನು ಆಡಿದರು. ಅಬ್ದುಲ್ 23.76 ಸರಾಸರಿಯಲ್ಲಿ 21 ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲಿಯೂ 927 ರನ್ ಗಳಿಸಿದರು. ಟೀಂ ಇಂಡಿಯಾ ಪರವಾಗಿ ಆಡುವಾಗ ಅವರು 80 ರನ್ ಗಳಿಸಿದ್ದಾರೆ. ಉಳಿದ ರನ್‌ಗಳನ್ನು ಪಾಕಿಸ್ತಾನಕ್ಕಾಗಿ ಗಳಿಸಿದ್ದಾರೆ. ಪಾಕಿಸ್ತಾನಕ್ಕಾಗಿ 24.91 ಸರಾಸರಿಯಲ್ಲಿ 847 ರನ್ ಗಳಿಸಿದ್ದಾರೆ. ಅವರು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ.
