Asianet Suvarna News Asianet Suvarna News

ಲಂಕಾ ವಿರುದ್ಧ ಭಾರತ ವನಿತೆಯರಿಗೆ ಸರಣಿ ಜಯ

ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮ ಮೊದಲ ವಿಕೆಟ್‌ಗೆ ಆಡಿದ ದಾಖಲೆಯ ಜೊತೆಯಾಟದ ನೆರವಿನಿಂದ ಪ್ರವಾಸಿ ಭಾರತ ಮಹಿಳಾ ಕ್ರಿಕೆಟ್‌ ತಂಡ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಮಣಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆಲುವು ಸಾಧಿಸಿದೆ. 

Cricket smriti mandhana and shafali verma Shines india womens team won odi series against sri lanka san
Author
First Published Jul 5, 2022, 8:47 AM IST

ಪಲ್ಲೆಕೆಲೆ (ಜುಲೈ 4): ರೇಣುಕಾ ಸಿಂಗ್‌(4/28)ರ ಆಕರ್ಷಕ ಬೌಲಿಂಗ್‌, ಸ್ಮೃತಿ ಮಂಧನಾ (smriti mandhana)(94*) ಮತ್ತು ಶಫಾಲಿ ವರ್ಮಾ (shafali verma) (71*)ರ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿದೆ. 

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ 50 ಓವರಲ್ಲಿ 173 ರನ್‌ಗೆ ಆಲೌಟ್‌ ಆಯಿತು. ಲಂಕಾ ಪರ ಕಾಂಚನ 47 ರನ್‌ ಗಳಿಸಿದರು. ಸುಲಭ ಗುರಿ ಬೆನ್ನತ್ತಿದ ಭಾರತ 25.4 ಓವರಲ್ಲಿ ಗುರಿ ತಲುಪಿ ಸಂಭ್ರಮಿಸಿತು. ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮ ಮೊದಲ ವಿಕೆಟ್‌ಗೆ ಆಡಿದ 174 ರನ್‌ ಜೊತೆಯಾಟ ಭಾರತ ತಂಡದ ಪರವಾಗಿ ಮಹಿಳಾ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ ಆಡಿದ ಗರಿಷ್ಠ ರನ್‌ ಜೊತೆಯಾಟವಾಗಿದೆ.

ಇದರೊಂದಿಗೆ 2022-2025 ಐಸಿಸಿ ವುಮೆನ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಅಮೂಲ್ಯ ಅಂಕಗಳನ್ನು ಸಂಪಾದಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದರೊಂದಿಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು ನಾಲ್ಕು ಅಂಕ ಸಂಪಾದಿಸಿದಂತಾಗಿದೆ.

ಮಹಿಳಾ ಬಿಗ್‌ಬ್ಯಾಶ್‌ ಟಿ20: ಮೆಲ್ಬರ್ನ್‌ ತಂಡಕ್ಕೆ ಹರ್ಮನ್‌
ಮೆಲ್ಬರ್ನ್‌:
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಈ ವರ್ಷ ನಡೆಯಲಿರುವ 8ನೇ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್‌ ಟಿ20 ಟೂರ್ನಿಯಲ್ಲಿ ಮೆಲ್ಬರ್ನ್‌ ರೆನಿಗೇಡ್‌್ಸ ತಂಡದಲ್ಲೇ ಮುಂದುವರಿಯಲಿದ್ದಾರೆ. ಕಳೆದ ವರ್ಷ ಹರ್ಮನ್‌ಪ್ರೀತ್‌ ತಂಡದ ಪರ ಅತಿಹೆಚ್ಚು ರನ್‌ ಗಳಿಸಿದ, ಅತಿಹೆಚ್ಚು ವಿಕೆಟ್‌ ಕಬಳಿಸಿದ ಆಟಗಾರ್ತಿ ಎನಿಸಿದ್ದರು. 406 ರನ್‌ ಕಲೆಹಾಕಿದ್ದ ಅವರು ಟೂರ್ನಿಯಲ್ಲಿ ಗರಿಷ್ಠ, 18 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಜೊತೆಗೆ 15 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು.

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಗೆಲುವಿನತ್ತ ಇಂಗ್ಲೆಂಡ್

2ನೇ ಟಿ20: ಬಾಂಗ್ಲಾ ವಿರುದ್ಧ ಗೆದ್ದ ವಿಂಡೀಸ್‌
ರೋಸೌ(ಡೊಮಿನಿಕಾ):
ರೋವ್ಮನ್‌ ಪೋವೆಲ್‌ (28 ಎಸೆತಗಳಲ್ಲಿ 61 ರನ್‌, 2 ಬೌಂಡರಿ, 6 ಸಿಕ್ಸರ್‌)ರ ವಿಸ್ಫೋಟಕ ಆಟದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ 35 ರನ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 5 ವಿಕೆಟ್‌ಗೆ 193 ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾ, 20 ಓವರಲ್ಲಿ 6 ವಿಕೆಟ್‌ಗೆ 158 ರನ್‌ ಗಳಿಸಿತು. ಶಕೀಬ್‌ ಅಲ್‌ ಹಸನ್‌ರ 68 ರನ್‌ ಇನ್ನಿಂಗ್‌್ಸ ವ್ಯರ್ಥವಾಯಿತು. 3 ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ 1-0 ಮುನ್ನಡೆ ಪಡೆದಿದೆ. ಮೊದಲ ಪಂದ್ಯ ಮಳೆಗೆ ಬಲಿಯಾಗಿತ್ತು.

WBBL ಮೆಲ್ಬೊರ್ನ್‌ ರೆನೆಗೇಡ್ಸ್‌ ಜತೆ ಮರು ಒಪ್ಪಂದ ಮಾಡಿಕೊಂಡ ಹರ್ಮನ್‌ಪ್ರೀತ್ ಕೌರ್

ಬಾಕ್ಸಿಂಗ್‌: 2 ಚಿನ್ನ ಸೇರಿ 14 ಪದಕ ಗೆದ್ದ ಭಾರತೀಯರು
ನವದೆಹಲಿ:
ಕಜಕಸ್ಥಾನದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಎಲೋರ್ಡಾ ಬಾಕ್ಸಿಂಗ್‌ ಕಪ್‌ ಕೂಟದಲ್ಲಿ ಅಲ್ಫಿಯಾ ಪಠಾಣ್‌ ಹಾಗೂ ಗಿತಿಕಾ ಚಿನ್ನಕ್ಕೆ ಕೊರಳೊಡಿದ್ದು, ಭಾರತ 14 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆ ದಿನವಾದ ಸೋಮವಾರ ಭಾರತದ ಬಾಕ್ಸಿಂಗ್‌ ಪಟುಗಳು 2 ಚಿನ್ನ, 2 ಬೆಳ್ಳಿ ಹಾಗೂ 10 ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮಹಿಳೆಯರ 81 ಕೆ.ಜಿ. ವಿಭಾಗದಲ್ಲಿ ಅಲ್ಫಿಯಾ, ಕಜಕಸ್ಥಾನದ ಲಜ್ಜತ್‌ ವಿರುದ್ಧ 5-0 ಅಂತರದಲ್ಲಿ ಗೆದ್ದರೆ, 48 ಕೆ.ಜಿ. ವಿಭಾಗದ ಹಣಾಹಣಿಯಲ್ಲಿ ಗಿತಿಕಾ ಭಾರತದವರೇ ಆದ ಕಲೈವನಿ ವಿರುದ್ಧ 4-1 ಅಂತರದಲ್ಲಿ ಜಯಿಸಿ ಸ್ವರ್ಣ ಪಡೆದರು. ಜಮುನಾ (54 ಕೆ.ಜಿ.) ಬೆಳ್ಳಿ ತಮ್ಮದಾಗಿಸಿಕೊಂಡರು.

Follow Us:
Download App:
  • android
  • ios