ಸತತ ವೈಫಲ್ಯಗಳ ನಡುವೆ ವಿರಾಟ್‌ ಕೊಹ್ಲಿಗೆ ಮತ್ತೊಂದು ಶಾಕ್‌!

ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್‌ನಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಟಾಪ್‌-10 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಇನ್ನೊಂದೆಡೆ ಬರ್ಮಿಂಗ್‌ ಹ್ಯಾಮ್‌ ಟೆಸ್ಟ್‌ನಲ್ಲಿ ಅದ್ಭುತ ನಿರ್ವಹಣೆ ನೀಡಿದ ರಿಷಭ್‌ ಪಂತ್‌ ಜೀವನಶ್ರೇಷ್ಠ ಸ್ಥಾನಕ್ಕೇರಿದ್ದಾರೆ.

Cricket News Virat Kohli Drops Out Of Top 10 For 1st Time In 6 Years in ICC Test Rankings san

ದುಬೈ (ಜುಲೈ 6): ಭಾರತ (India) ಹಾಗೂ ಆತಿಥೇಯ ಇಂಗ್ಲೆಂಡ್‌ (England) ನಡುವೆ ಮುಕ್ತಾಯವಾದ ಬರ್ಮಿಂಗ್‌ ಹ್ಯಾಮ್‌ ಟೆಸ್ಟ್‌ (Birmingham Test) ಬಳಿಕ, ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ( ICC Test Rankings) ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆಗಳಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ (Team India Former Captain Virat Kohli) 2016ರ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಟಾಪ್‌ 10 ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಎಜ್‌ ಬಾಸ್ಟನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ತನ್ನ ಈವರೆಗಿನ ಅತ್ಯಧಿಕ ಮೊತ್ತದ ಚೇಸಿಂಗ್‌ ಅನ್ನು ದಾಖಲಿಸಿತು. ಈ ಗೆಲುವಿಗೆ ಕಾರಣರಾದ ಮಾಜಿ ನಾಯಕ ಜೋ ರೂಟ್‌ (Joe Root) ಹಾಗೂ ಜಾನಿ ಬೇರ್‌ ಸ್ಟೋ (Jhony Bairstow) ಇಬ್ಬರೂ ಈಗ ಬ್ಯಾಟಿಂಗ್‌ ಶ್ರೇಯಾಂಕದ ಪಟ್ಟಿಯಲ್ಲಿ ಅಗ್ರ 10 ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ಜೋ ರೂಟ್‌ ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರ ಮಾಡಿಕೊಂಡರೆ, ಬೇರ್‌ ಸ್ಟೋ 11 ಸ್ಥಾನಗಳಲ್ಲಿ ಏರಿಕೆ ಕಾಣುವ ಮೂಲಕ 10ನೇ ಸ್ಥಾನ ಸಂಪಾದಿಸಿದ್ದಾರೆ.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಫೋಟಕ ಶತಕ ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಭಾರತದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, 6 ಸ್ಥಾನ ಏರಿಕೆ ಕಾಣುವ ಮೂಲಕ ಜೀವನಶ್ರೇಷ್ಠ 5ನೇ ಸ್ಥಾನ ಸಂಪಾದನೆ ಮಾಡಿದ್ದಾರೆ.


ತಮ್ಮ ಕ್ರಿಕೆಟ್ ಜೀವನದ ಅತ್ಯಂತ ಕೆಟ್ಟ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್‌ ಬಾರಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್‌ ಸಿಡಿಸಿದರು. ಇದರಿಂದಾಗಿ 2016ರ ಬಳಿಕ ಮೊದಲ ಬಾರಿಗೆ ಟಾಪ್‌ 10 ಪಟ್ಟಿಯಿಂದ ಹೊರಬೀಳುವ ಮೂಲಕ 13ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಆರು ವರ್ಷಗಳ ಬಳಿಕ ಟಾಪ್‌ 10ನಿಂದ ಹೊರಬಿದ್ದಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಪಂದ್ಯವನ್ನು ತಪ್ಪಿಸಿಕೊಂಡ ನಾಯಕ ರೋಹಿತ್‌ ಶರ್ಮ, ಒಂದು ಸ್ಥಾನ ಕುಸಿತ ಕಂಡಿದ್ದು 9ನೇ ಸ್ಥಾನ ಪಡೆದಿದ್ದಾರೆ

'ಪೂಜಾರ ರೀತಿ ಆಡುತ್ತಿದ್ದ ಬೇರ್‌ಸ್ಟೋವ್‌ರನ್ನು, ಕೊಹ್ಲಿ ಪಂತ್‌ರನ್ನಾಗಿ ಮಾಡಿದ್ರು..!'

ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಹೋರಾಟದ ಮುಂದಾಳತ್ವ ವಹಿಸಿದ್ದ ವೇಗಿ ಜೇಮ್ಸ್‌ ಆಂಡರ್‌ಸನ್‌, ಬೌಲಿಂಗ್‌ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆ ಕಂಡು 6ನೇ ಸ್ಥಾನ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಉರುಳಿಸುವ ಮೂಲಕ ಆಂಡರ್‌ಸನ್‌ ಗಮನಸೆಳೆದಿದ್ದರು. ಈ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಿಂದ ಜೇಮ್ಸ್‌ ಆಂಡರ್‌ಸನ್‌ 17 ವಿಕೆಟ್‌ ಸಂಪಾದನೆ ಮಾಡಿದ್ದಾರೆ.

ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ಸ್ಥಾನ ಪಡೆದ ಆರ್ಶದೀಪ್ ಸಿಂಗ್..!

ನಥಾನ್‌ ಲ್ಯಾನ್‌ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಭಳಿಸುವ ಮೂಲಕ ಐದು ಸ್ಥಾನಗಳ ಏರಿಕೆಯೊಂದಿಗೆ 13 ನೇ ಸ್ಥಾನಕ್ಕೆ ಏರಿದ್ದಾರೆ. ಟೆಸ್ಟ್ ಆಲ್‌ರೌಂಡರ್ ಶ್ರೇಯಾಂಕದ ಅಗ್ರ 10 ರ ಪಟ್ಟಿಯಲ್ಲಿ ಯಾವುದೇ ಬದಲಾವಣೆ  ಆಗಿಲ್ಲ. ಆದರೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಮೂರು ಸ್ಥಾನಗಳನ್ನು ಜಿಗಿತ ಕಂಡಿದ್ದು, ಇದೇ ಮೊದಲ ಬಾರಿಗೆ ಜೀವನಶ್ರೇಷ್ಠ 14ನೇ ಸ್ಥಾನಕ್ಕೇರಿದ್ದಾರೆ.

 

Latest Videos
Follow Us:
Download App:
  • android
  • ios