Asianet Suvarna News Asianet Suvarna News

IPL Player Salaries : ಐಪಿಎಲ್ ಅಂದ್ರೆ ಸುಮ್ನೆ ಅಲ್ಲ, ಇವ್ರು ಕೊಡೋ ಸ್ಯಾಲರಿ ಮುಂದೆ ಬೇರೆ ಟಿ20 ಲೀಗ್ ಇಲ್ಲ!

ಐಪಿಎಲ್ ಪ್ರತಿ ಪಂದ್ಯಕ್ಕೆ ಆಟಗಾರನೊಬ್ಬನಿಗೆ ಸರಾಸರಿ 2.78 ಕೋಟಿ ವೇತನ
ವಿಶ್ವದ ಯಾವುದೇ ಟಿ20 ಲೀಗ್ ಗಳಲ್ಲೂ ಇಷ್ಟು ಪ್ರಮಾಣದ ವೇತನವಿಲ್ಲ
ವೇತನದ ವಿಚಾರದಲ್ಲಿ ಐಪಿಎಲ್ ಮುಂದೆ ಯಾವ ಲೀಗ್ ಕೂಡ ಸಾಟಿಯಲ್ಲ

Cricket News Indian Premier League Most popular t20 league But what makes cricketers choose IPL over other T20 global tournaments san
Author
Bengaluru, First Published Feb 22, 2022, 9:09 PM IST

ಬೆಂಗಳೂರು (ಫೆ. 22): ಜಾಗತಿಕವಾಗಿ ದೇಶೀಯ ಟ್ವೆಂಟಿ 20 (ಟಿ 20) ಲೀಗ್‌ ಎನ್ನುವ ವಿಚಾರ ಬಂದಾಗ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಲ್ಲರಲ್ಲಿಯೂ ಬರುವ ಮೊದಲ ಹಾಗೂ ಕೊನೆಯ ಹೆಸರು. 2008 ರಲ್ಲಿ ಪ್ರಾರಂಭವಾದ ಐಪಿಎಲ್ (IPL) ತಕ್ಷಣವೇ ಜಾಗತಿಕವಾಗಿ ಅತ್ಯಂತ ಜನಪ್ರಿಯ ಟಿ20 (T20) ಲೀಗ್ ಆಗಿದ್ದರೂ ಸಹ, ಇಷ್ಟು ವರ್ಷಗಳಲ್ಲಿ ಐಪಿಎಲ್ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ವರ್ಷದಿಂದ ವರ್ಷಕ್ಕೆ ಶ್ರೀಮಂತವಾಗುವುದು ಮಾತ್ರವಲ್ಲ, ಆಟಗಾರರ ವೇತನ ವಿಚಾರದಲ್ಲಿಯೂ ಶಿಸ್ತು ಬೆಳೆಸಿಕೊಂಡಿದೆ. ಐಪಿಎಲ್, ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐನ (BCCI) ಕೂಸು. ಆದರೆ, ಐಪಿಎಲ್ ನ ಶ್ರೀಮಂತಿಕೆ ಮಾತ್ರ ಸ್ವಂತ ಬಲದಲ್ಲಿ ಬೆಳೆದಿದ್ದು ಎಂದರೆ ತಪ್ಪಾಗಲಾರದು. ಇದರಿಂದಾಗಿ ವಿಶ್ವದ ಯಾವುದೇ ಕ್ರಿಕೆಟ್ ರಾಷ್ಟ್ರಗಳು ನಡೆಸುವ ದೇಶೀಯ ಟಿ20 ಲೀಗ್, ಬಿಸಿಸಿಐ ನಡೆಸುವ ಐಪಿಎಲ್ ನಷ್ಟು ಪ್ರಖ್ಯಾತಿ ಪಡೆದಿಲ್ಲ. ಪ್ರತಿ ಫ್ರಾಂಚೈಸಿಗಳಿಗೆ ಆಟಗಾರರ ಖರೀದಿಗಾಗಿಯೇ 90 ಕೋಟಿ ರೂಪಾಯಿ ಮೀಸಲಿಡುತ್ತದೆ. ಪ್ರಸ್ತುತ ವಿಶ್ವದಲ್ಲಿರುವ ಯಾವುದೇ ಟಿ20 ಲೀಗ್ ಗಳು ಐಪಿಎಲ್ ನ ಅರ್ಧದಷ್ಟು ವೇತನವನ್ನೂ ಆಟಗಾರರಿಗೆ ನೀಡುವುದಿಲ್ಲ

ಲೆಕ್ಕಾಚಾರಗಳ ಪ್ರಕಾರ, ಇತರ ದೇಶೀಯ ಟಿ20 ಪಂದ್ಯಾವಳಿಗಳಲ್ಲಿ ಆಟಗಾರರು ಗಳಿಸುವ ಮೊತ್ತದ 100% ಕ್ಕಿಂತ ಹೆಚ್ಚು ಐಪಿಎಲ್ ಖಂಡಿತವಾಗಿಯೂ ಪಾವತಿಸುತ್ತದೆ. ಕೆಲವೊಮ್ಮೆ, ಇದು 200% ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಹೋಗುತ್ತದೆ. ಐಪಿಎಲ್‌ನ ವೇತನವನ್ನು ಇತರ ಉನ್ನತ ಕ್ರೀಡಾ ಪಂದ್ಯಾವಳಿಗಳಿಗೆ ಹೋಲಿಸಿದರೆ, 2018 ರಲ್ಲಿ ಗ್ಲೋಬಲ್ ಸ್ಪೋರ್ಟ್ಸ್ ಸ್ಯಾಲರೀಸ್ (Global Sports Salaries) ಸಮೀಕ್ಷೆಯು ಐಪಿಎಲ್ ಆಟಗಾರನು ಪ್ರತಿ ಪಂದ್ಯಕ್ಕೆ ಸರಾಸರಿ ರೂ 2.78 ಕೋಟಿ ಗಳಿಸುತ್ತಾನೆ ಎಂದು ಹೇಳುತ್ತದೆ. ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) 16 ಪಂದ್ಯಗಳಲ್ಲಿ ಪ್ರತಿ ಪಂದ್ಯಕ್ಕೆ ಆಟಗಾರನಿಗೆ ಸರಾಸರಿ 1.40 ಕೋಟಿ ರೂಪಾಯಿಗಳನ್ನು ಪಾವತಿಸುತ್ತದೆ. ಇನ್ನು ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ (EPL), ಫುಟ್‌ಬಾಲ್ ಆಟಗಾರರು 38 ಪಂದ್ಯಗಳಲ್ಲಿ ಪ್ರತಿ ಪಂದ್ಯಕ್ಕೆ 79 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ. 

ಐಪಿಎಲ್ 11ನೇ ಋತುವಿನಲ್ಲಿ ಲೀಗ್ ನ ಮೌಲ್ಯದಲ್ಲಿ ಶೇ. 19ರಷ್ಟು (6.3 ಶತಕೋಟಿ ಡಾಲರ್) ಏರಿಕೆಯಾಗಿದೆ. ಪ್ರಸ್ತುತ ಐಪಿಎಲ್ ನ ಮೌಲ್ಯ 4.7 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಸ್ವತಃ ಬಿಸಿಸಿಐ 18 ಸಾವಿರ ಕೋಟಿ ಮೌಲ್ಯ ಹೊಂದಿರುವಾಗ ಐಪಿಎಲ್ ನ ಯಶಸ್ಸು ಕಣ್ಣು ಕುಕ್ಕುವಂತೆ ಮಾಡಿದೆ.

ಕ್ರಿಕೆಟಿಗರಿಗೆ ವಿಶ್ವದ ಇತರ ಲೀಗ್ ಗಳು ಹಾಗೂ ಐಪಿಎಲ್ ನೀಡುವ ವೇತನದ ವಿಶ್ಲೇಷಣೆ
ಡಾರ್ಸಿ ಶಾರ್ಟ್ (D'Arcy Short):
ಆಸ್ಟ್ರೇಲಿಯಾದ ಆಲ್‌ರೌಂಡರ್ ಬಿಗ್ ಬ್ಯಾಷ್ ಲೀಗ್‌ನಲ್ಲಿ (BBL) ಹೊಬಾರ್ಟ್ ಹರಿಕೇನ್ಸ್‌ಗಾಗಿ ಪರವಾಗಿ ಆಡುತ್ತಿದ್ದಾರೆ. ಇದಕ್ಕಾಗಿ ಅವರು 2 ಕೋಟಿ ರೂಪಾಯಿ ಪಡೆಯುತ್ತಿದ್ದು, ದುಬಾರಿ ಆಟಗಾರರರ ಪೈಕಿ ಒಬ್ಬರಾಗಿದ್ದಾರೆ. ಆದರೆ, ಐಪಿಎಲ್ ನಲ್ಲಿ ಒಮ್ಮೆ ಮಾತ್ರವೇ ಆಡಿದ್ದ ಇವರಿಗೆ ರಾಜಸ್ಥಾನ ರಾಯಲ್ಸ್ 4 ಕೋಟಿ ರೂಪಾಯಿ ನೀಡಿತ್ತು.

ರಶೀದ್ ಖಾನ್ (Rashid Khan): ವಿಶ್ವ ಕ್ರಿಕೆಟ್ ನ ಅಗ್ರ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿರುವ ರಶೀದ್ ಖಾನ್ ಬಹುತೇಕ ವಿಶ್ವದ ಎಲ್ಲಾ ಟಿ20 ಲೀಗ್ ಗಳಲ್ಲಿ ಆಡುವ ಮೂಲಕ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದಾರೆ. ಪಿಎಸ್ಎಲ್ ನಲ್ಲಿ ಲಾಹೋರ್ ಖಲಂದರ್ಸ್ ಪರವಾಗಿ ಆಡುವ ರಶೀದ್ ಖಾನ್ 997 ಲಕ್ಷದಿಂದ 1.2 ಕೋಟಿ ರೂಪಾಯಿವರೆಗಿನ ಮೊತ್ತ ಪಡೆಯುತ್ತಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬಾರ್ಬಡೋಸ್ ರಾಯಲ್ಸ್ ಪರ ಆಡುವ ಮೂಲಕ 83 ಲಕ್ಷ ರೂ ಹಾಗೂ ಬಿಬಿಎಲ್ ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರವಾಗಿ ಆಡುವ ಮೂಲಕ 14.7 ಕೋಟಿ ಗಳಿಸುತ್ತಾರೆ. ಆದರೆ, ಐಪಿಎಲ್ ನಲ್ಲಿ ಇವರ ವೇತನ 15 ಕೋಟಿ ಆಗಿದೆ.

ಫಾಫ್ ಡು ಪ್ಲೆಸಿಸ್ (Faf du Plessis): ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಜಗತ್ತಿನಾದ್ಯಂತ T20 ಲೀಗ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಪರ ಆಡುತ್ತಿರುವ ಅವರು 93 ಲಕ್ಷದಿಂದ 1.2 ಕೋಟಿ ರೂ. ಪಿಎಸ್‌ಎಲ್‌ನಲ್ಲಿ ಅವರು  97 ಲಕ್ಷದಿಂದ 2 ಕೋಟಿ ರೂಪಾಯಿ ಗಳಿಸುತ್ತಾರೆ. ಐಪಿಎಲ್ ನಲ್ಲಿ ಇವರಿಗೆ ಸಿಗುವ ವೇತನ 7 ಕೋಟಿ ರೂಪಾಯಿ.

IPL 2022: ಐಪಿಎಲ್‌ ಟೂರ್ನಿಯು ಈ ದಿನಾಂಕದಿಂದ 6 ಸ್ಟೇಡಿಯಂನಲ್ಲಿ ಆರಂಭ..?
ಮೊಹಮದ್ ನಬಿ (Mohammad Nabi):
ಅಫ್ಘಾನಿಸ್ತಾನದ ಅಗ್ರ ಆಲ್‌ರೌಂಡರ್ ಮೊಹಮದ್ ನಬಿ, ಟಿ20 ಟೂರ್ನಿಗಳಲ್ಲೂ ಸಕ್ರಿಯರಾಗಿದ್ದಾರೆ. ಕರಾಚಿ ಕಿಂಗ್ಸ್‌ಗಾಗಿ ಆಡುತ್ತಿರುವ ಅವರು 44 ಲಕ್ಷ ರೂ., ಸಿಪಿಎಲ್‌ನಲ್ಲಿ ಕೊನೆಯ ಬಾರಿ ಆಡಿದ್ದಾಗ 97 ಲಕ್ಷ ರೂಪಾಯಿ ತೆಗೆದುಕೊಂಡಿದ್ದರೆ, ಐಪಿಎಲ್ ನಲ್ಲಿ ಮೂಲಬೆಲೆಗೆ ಕೆಕೆಆರ್ ಗೆ ಸೇರಿರುವ ಇವರಿಗೆ 1 ಕೋಟಿ ರೂಪಾಯಿ ಸಿಗಲಿದೆ.

IPL Broadcast Rights: ಐಪಿಎಲ್‌ ಪ್ರಸಾರ ಹಕ್ಕು ಖರೀದಿಗೆ ಅಮೆಜಾನ್‌, ರಿಲಯನ್ಸ್‌ ಆಸಕ್ತಿ?
ಕ್ರಿಸ್ ಗೇಲ್ (Chris Gayle): ಜಮೈಕಾದ ಸ್ಫೋಟಕ ಬ್ಯಾಟ್ಸ್ ಮನ್ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್ ನಲ್ಲಿ ದೊಡ್ಡ ಹೆಸರು. ವಿಶ್ವದ ಬಹುತೇಕ ಟಿ20 ಲೀಗ್ ಗಳಲ್ಲಿ ಆಡಿದ್ದರೂ ಅವರಿಗೆ ಹೆಚ್ಚಿನ ವೇತನ ನೀಡಿದ್ದು ಐಪಿಎಲ್. ಬಿಪಿಎಲ್ ನಲ್ಲಿ 74 ಲಕ್ಷ ಪಡೆಯುವ ಕ್ರಿಸ್ ಗೇಲ್, ಸಿಪಿಎಲ್ ನಲ್ಲಿ 1.19 ಕೋಟಿ ರೂ. ವೇತನ ಪಡೆಯುತ್ತಾರೆ. ಐಪಿಎಲ್ ನಲ್ಲಿ ಆರ್ ಸಿಬಿ, ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಪರ ಆಡಿರುವ ಗೇಲ್, ಗರಿಷ್ಠ ಪಡೆದ ವೇತನ 8.4 ಕೋಟಿ ರೂಪಾಯಿ ಆಗಿದೆ.

Follow Us:
Download App:
  • android
  • ios