ಮುಂಬೈ(ಅ. 21) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದು   ತಮ್ಮ ಬ್ಯಾಕ್ ಫುಟ್ ಡಿಫೆನ್ಸ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ವಿಡಿಯೋ ಹಂಚಿಕೊಂಡು ಬರೆದುಕೊಂಡಿರುವ ಸಚಿನ್ ' ನಾನು ಇತ್ತೀಚೆಗೆ ನನ್ನ ಚಿಕ್ಕಮ್ಮನ ಮನೆಗೆ ಆಕೆಯ ಜನ್ಮದಿನದ ಸಂದರ್ಭ ಹೋಗಿದ್ದೆ. ಹಳೆಯ ನೆನಪುಗಳೆಲ್ಲ ತೇಲಿ ಬಂದವು. ಇಲ್ಲಿಯೇ ನಾನು ಪ್ರಾಕ್ಟೀಸ್ ಮಾಡುತ್ತಿದ್ದೆ. ಈ ಕೋಣೆಗಳು ಹಲವು ಕತೆಗಳನ್ನು ಹೇಳುತ್ತವೆ ಎಂದು ವಿವರಿಸುತ್ತ ಹೋಗುತ್ತಾರೆ.

ಮಾಸ್ಟರ್ ಜಡ್ಜ್ ಮಾಡಲು ಸಾಮಾನ್ಯದವರ ಬಳಿ ಸಾಧ್ಯವಿಲ್ಲ

ಕಾಲ ಬದಲಾಗಿರಬಹುದು ಆದರೆ ಬದುಕು ಬದಲಾಗಿಲ್ಲ ಎಂದು ಹೇಳುತ್ತ ವಿವರಣೆ ನೀಡುತ್ತ ಹೋಗುತ್ತಾರೆ. ಹಾಗಾದರೆ ಮಾಸ್ಟರ್ ಬ್ಲಾಸ್ಟರ್ ಏನು ಹೇಳಿದ್ದಾರೆ ನೀವೇ ನೋಡಿಕೊಂಡು ಬನ್ನಿ....