* ರೈತನ ಮಗಳ ಕನಸಿಗೆ ನೆರವಾದ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್* ವೈದ್ಯೆಯಾಗುವ ರೈತನ ಮಗಳ ಕನಸಿಗೆ ನೀರೆರೆದ ಸಚಿನ್* ರೈತನ ಮಗಳ ಪಾಲಿಗೆ ದೇವರಾದ ಸಚಿನ್ ತೆಂಡುಲ್ಕರ್

ಮುಂಬೈ(ಜು.29): ಮಹಾರಾಷ್ಟ್ರದ ರೈತನ ಮಗಳೊಬ್ಬಳ ವೈದ್ಯಕೀಯ ಶಿಕ್ಷಣಕ್ಕೆ ದಿಗ್ಗಜ ಕ್ರಿಕೆಟ್‌ ಸಚಿನ್‌ ತೆಂಡುಲ್ಕರ್‌ ನೆರವು ನೀಡಿದ್ದಾರೆ. ರತ್ನಗಿರಿ ಜಿಲ್ಲೆಯ ಝಾರೈ ಎನ್ನುವ ಗ್ರಾಮದ ಬಡ ರೈತನ ಮಗಳು ದೀಪ್ತಿ ವಿಶ್ವಾಸ್‌ರಾವ್‌ ತಮ್ಮ ಹಳ್ಳಿಯ ಮೊದಲ ವೈದ್ಯೆಯಾಗಲು ಹೊರಟಿದ್ದಾರೆ. 

ದೀಪ್ತಿಗೆ ಸಚಿನ್‌ ತೆಂಡುಲ್ಕರ್‌ ಫೌಂಡೇಷನ್‌ ವತಿಯಿಂದ ಅಕೊಲಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಕೊಡಿಸಲಾಗಿದೆ. ಆಕೆಯ ಓದಿನ ವೆಚ್ಚವನ್ನು ಭರಿಸುವುದಾಗಿ ತೆಂಡುಲ್ಕರ್‌ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ರ ಈ ಔದಾರ್ಯಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

ವೈದ್ಯೆಯಾಗುವ ಕನಸು ಬೆನ್ನತ್ತಿ ಹೊರಟ ದೀಪ್ತಿ ಪಯಣ ನನಸಾಗುತ್ತಿದೆ. ಆಕೆಯ ಗುರಿಯೆಡೆಗಿನ ಪಯಣ ಹಲವರನ್ನು ಸ್ಪೂರ್ತಿಗೊಳಿಸಲಿದೆ. ದೀಪ್ತಿಗೆ ಶುಭಹಾರೈಕೆಗಳು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟ್ವೀಟ್‌ ಮಾಡಿದ್ದಾರೆ.

Scroll to load tweet…

ಸಚಿನ್ ತೆಂಡುಲ್ಕರ್‌ ಏಕಂ ಎನ್ನುವ ಸರ್ಕಾರೇತರ ಸಂಘ ಸಂಸ್ಥೆ(ಎನ್‌ಜಿಒ)ಯೊಂದಿಗೆ ಕೈಜೋಡಿಸಿದ್ದಾರೆ. ಈ ಎನ್‌ಜಿಒ ಬಡತನದಿಂದ ಬಳಲುತ್ತಿರುವ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ನಿಟ್ಟಿಸಲ್ಲಿ ಸರ್ಕಾರಿ ಹಾಗೂ ಟ್ರಸ್ಟ್‌ ಆಸ್ಪತ್ರೆಗಳೊಂದಿಗೆ ಸಮಾಜಮುಖಿ ಕಾರ್ಯ ನಡೆಸುತ್ತಿದೆ. ಈ ಏಕಂ ಫೌಂಡೇಶನ್‌ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿನ ಮಕ್ಕಳಿಗೆ ನೆರವು ನೀಡುತ್ತಾ ಬಂದಿದೆ.