* ಕಾರು ಅಪಘಾತದಲ್ಲಿ ಕೊನೆಯುಸಿರೆಳೆದ ಆಂಡ್ರ್ಯೂ ಸೈಮಂಡ್ಸ್‌* ಸೈಮಂಡ್ಸ್‌ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು* ತಪ್ಪಾದ ಎಮೋಜಿ ಬಳಸಿ ಸುದ್ದಿಗೆ ಗ್ರಾಸವಾದ ವಿವಿಎಸ್ ಲಕ್ಷ್ಮಣ್

ನವದೆಹಲಿ(ಮೇ.18): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ (Andrew Symonds) ಕಳೆದ ಶನಿವಾರ ತಡರಾತ್ರಿ ಭೀಕರ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಇಡೀ ಕ್ರಿಕೆಟ್ ಜಗತ್ತನ್ನು ತಬ್ಬಿಬ್ಬುಗೊಳಿಸಿದ್ದು, ಹಲವು ಹಿರಿ-ಕಿರಿಯ ಕ್ರಿಕೆಟಿಗರು ಸೈಮಂಡ್ಸ್ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಕಂಬನಿ ಮಿಡಿದಿದ್ದಾರೆ. ಹಲವು ಕ್ರಿಕೆಟಿಗರು ಸೈಮಂಡ್ಸ್‌ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಮಾಡಿದ ಸಂತಾಪದ ಟ್ವೀಟ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ತಪ್ಪನ್ನು ಹುಡುಕಿದ್ದು, ಟ್ವೀಟ್‌ ಅಳಿಸಲು ಆಗ್ರಹಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ವಿವಿಎಸ್ ಲಕ್ಷ್ಮಣ್ ಹಾಗೂ ಆಂಡ್ರ್ಯೂ ಸೈಮಂಡ್ಸ್‌ ಒಟ್ಟಾಗಿಯೇ ಡೆಕ್ಕನ್ ಚಾರ್ಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಲಕ್ಷ್ಮಣ್ ಹಾಗೂ ಸೈಮಂಡ್ಸ್ ನಡುವೆ ಒಳ್ಳೆಯ ಒಡನಾಟವಿತ್ತು. ಆದರೆ ಸೈಮಂಡ್ಸ್‌ ಅಪಘಾತದಿಂದ ನಿಧನವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಎಲ್ಲರಂತೆ ವಿವಿಎಸ್ ಲಕ್ಷ್ಮಣ್ ಕೂಡಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಆದರೆ ಟ್ವೀಟ್ ಮಾಡುವ ವೇಳೆ ಲಕ್ಷ್ಮಣ್ ಬಳಸಿದ ಎಮೋಜಿ ಈಗ ಚರ್ಚೆಗೆ ಗ್ರಾಸವಾಗಿದ್ದು, ಈ ಟ್ವೀಟ್ ಅಳಿಸಿ ಹಾಕುವಂತೆ ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ. 'ಭಾರತದಲ್ಲಿ ನಾವು ಎಚ್ಚರವಾಗುತ್ತಿದ್ದಂತೆಯೇ ಆಘಾತಕಾರಿ ಸುದ್ದಿಯನ್ನು ಕೇಳಿದೆವು. ಪ್ರೀತಿಯ ಗೆಳೆಯ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ಎಂತಹ ದುಃಖಕರವಾದ ಸುದ್ದಿಯಿದು ಎಂದು ಟ್ವೀಟ್ ಮಾಡಿದ್ದರು. ಇದರ ಜತೆಗೆ ಹಾರ್ಟ್‌ಬ್ರೇಕ್ ಹಾಗೂ ಅಳುವ ಎಮೋಜಿಯನ್ನು ಸಹ ಪೋಸ್ಟ್‌ ಮಾಡಿದ್ದರು.

Scroll to load tweet…

ವಿವಿಎಸ್ ಲಕ್ಷ್ಮಣ್ ಬಳಸಿದ ಅಳುವ ಎಮೋಜಿಯು 'ಆನಂದ ಭಾಷ್ಪದ' ಎಮೋಜಿಯಾಗಿತ್ತು. ಇದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಈ ಪೋಸ್ಟ್ ಅಳಿಸಿ ಹಾಕುವಂತೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್‌ಗೆ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಕೊನೆಗೂ ಎಚ್ಚೆತ್ತುಕೊಂಡ ಲಕ್ಷ್ಮಣ್, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ತಪ್ಪಾದ ಎಮೋಜಿ ಬಳಸಿದ್ದಕ್ಕೆ ಕ್ಷಮೆ ಇರಲಿ ಎಂದು ವಿವಿಎಸ್‌ ಲಕ್ಷ್ಮಣ್ ಮನವಿ ಮಾಡಿಕೊಂಡಿದ್ದಾರೆ.

#RIPAndrewSymonds: ಸೈಮಂಡ್ಸ್‌ ನಿಧನಕ್ಕೆ ಕಂಬನಿ ಮಿಡಿದ ಹರ್ಭಜನ್ ಸಿಂಗ್‌..!

Scroll to load tweet…
Scroll to load tweet…

ಆಸ್ಟ್ರೇಲಿಯಾದ ದಿಗ್ಗಜ ಆಲ್ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಆಂಡ್ರ್ಯೂ ಸೈಮಂಡ್ಸ್‌ಗೆ 46 ವರ್ಷ ವಯಸ್ಸಾಗಿತ್ತು. ಕ್ವೀನ್ಸ್‌ಲ್ಯಾಂಡ್ ರಾಜ್ಯದ ಟೌನ್ಸ್‌ವಿಲ್ಲೇ ನಗರದ ಹೊರಭಾಗದಲ್ಲಿ ನಡೆದ ಕಾರು ಅಪಘಾತದಲ್ಲಿ ಸೈಮಂಡ್ಸ್‌ ಕೊನೆಯುಸಿರೆಳೆದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್‌ ಪತ್ನಿ ಲೌರಾ ಹಾಗೂ ಇಬ್ಬರು ಮಕ್ಕಳಾದ ಕ್ಲೋಯ್ ಹಾಗೂ ಬಿಲ್ಲೇಯನ್ನು ಅಗಲಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡವು 2003 ಹಾಗೂ 2007ರ ಐಸಿಸಿ ಏಕದಿನ ವಿಶ್ವಕಪ್‌ ಗೆಲ್ಲುವಲ್ಲಿ ಆಂಡ್ರ್ಯೂ ಸೈಮಂಡ್ಸ್‌ ಮಹತ್ತರ ಪಾತ್ರ ವಹಿಸಿದ್ದರು. ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾತ್ರವಲ್ಲದೇ ಸೈಮಂಡ್ಸ್‌ ಅದ್ಭುತ ಕ್ಷೇತ್ರರಕ್ಷಣೆಯ ಮೂಲಕವೂ ಗಮನ ಸೆಳೆದಿದ್ದರು.