Asianet Suvarna News Asianet Suvarna News

ಟಿ20 ವಿಶ್ವಕಪ್‌ ಮುಂದೂಡಿ: ಐಸಿಸಿಗೆ ಆಸ್ಪ್ರೇಲಿಯಾ ಮನವಿ

ಐಸಿಸಿ ಟಿ20 ವಿಶ್ವಕಪ್ ಆಯೋಜನೆಯ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಇದರ ಬೆನ್ನಲ್ಲೇ ಕ್ರಿಕೆಟ್‌ ಆಸ್ಪ್ರೇಲಿಯಾ ಟೂರ್ನಿಯನ್ನು ಒಂದು ವರ್ಷ ಮುಂದೂಡುವುದು ಒಳಿತು ಎಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Cricket Australia Chief Says 20 World Cup Being Postponed good Option
Author
Melbourne VIC, First Published May 30, 2020, 6:57 PM IST

ಮೆಲ್ಬರ್ನ್(ಮೇ.30)‌: ಅಕ್ಟೋಬರ್‌-ನವೆಂಬರ್‌ನಲ್ಲಿ ಆಯೋಜಿಸಲಾಗಿರುವ ಟಿ20 ವಿಶ್ವಕಪ್‌ ಟೂರ್ನಿಯನ್ನು ಮುಂದಿನ ವರ್ಷ ನಡೆಸಲು ಅವಕಾಶ ನೀಡಬೇಕು ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ (ಸಿಎ) ಐಸಿಸಿಗೆ ಮನವಿ ಮಾಡಿದೆ. 

ಸಿಎ ಮುಖ್ಯಸ್ಥ ಎರ್ಲ್ ಎಡ್ಡಿಂಗ್ಸ್‌, ಐಸಿಸಿಯ ಹಣಕಾಸು ಸಮಿತಿಗೆ ಟಿ20 ವಿಶ್ವಕಪ್‌ ಅನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕ್ರಿಕೆಟ್‌ ಆಸ್ಪ್ರೇಲಿಯಾ ಭಾರೀ ನಷ್ಟ ಅನುಭವಿಸಿದೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್‌ ಆತಿಥ್ಯ ಅಸಾಧ್ಯ ಎಂದು ಸಿಇಒ ಕೆವಿನ್‌ ರಾಬರ್ಟ್ಸ್ ಶುಕ್ರವಾರ ಹೇಳಿರುವುದು ಟೂರ್ನಿ ಮುಂದೂಡಿಕೆ ವರದಿಗೆ ಪುಷ್ಟಿ ನೀಡಿದಂತಾಗಿದೆ.

ಬಹುನಿರೀಕ್ಷಿತ 2020ರ ಟಿ20 ವಿಶ್ವ​ಕಪ್‌ ಮುಂದ​ಕ್ಕೆ?

ಎಲ್ಲವೂ ಈ ಮೊದಲಿನಂತೆ ಅಂದುಕೊಂಡಂತೆ ಆದರೆ ಟಿ20 ವಿಶ್ವಕಪ್ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ. ಆದರೆ ಕೊರೋನಾ ಆರ್ಭಟದಿಂದಾಗಿ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. 

55 ಕ್ರಿಕೆಟ್‌ ಆಟಗಾರರ ಅಭ್ಯಾಸಕ್ಕೆ ಇಸಿಬಿ ವೇದಿಕೆ

ಲಂಡನ್‌: ಜುಲೈನಿಂದ ಕ್ರಿಕೆಟ್‌ ಚಟುವಟಿಕೆಗಳನ್ನು ಆರಂಭಿಸುವ ಯೋಚನೆಯಲ್ಲಿರುವ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಶುಕ್ರವಾರ 55 ಆಟಗಾರರ ಹೊರಾಂಗಣ ಅಭ್ಯಾಸಕ್ಕೆ ವೇದಿಕೆ ಸಜ್ಜುಗೊಳಿಸಿದೆ. 

ಮುಂಬರುವ ಟೆಸ್ಟ್‌ ಸರಣಿಗಳನ್ನು ಗಮನದಲ್ಲಿರಿಸಿಕೊಂಡು ಕಳೆದ ವಾರವೇ 18 ಬೌಲರ್‌ಗಳ ಅಭ್ಯಾಸಕ್ಕೆ ಅವಕಾಶ ನೀಡಲಾಗಿತ್ತು. 18 ಬೌಲರ್‌ಗಳು ಸೇರಿದಂತೆ ಇದೀಗ 55 ಆಟಗಾರರ ಹೆಸರನ್ನು ಇಸಿಬಿ ಪ್ರಕಟಿಸಿದೆ. ಈ ಪಟ್ಟಿಯಿಂದ ಅಲೆಕ್ಸ್‌ ಹೇಲ್ಸ್‌, ಲಿಯಾಮ್‌ ಪ್ಲಂಕೆಟ್‌ ಅವರ ಹೆಸರನ್ನು ಕೈ ಬಿಡಲಾಗಿದೆ.
 

Follow Us:
Download App:
  • android
  • ios