ಕೊರೋನಾ ಎಫೆಕ್ಟ್: ಅರ್ಧ ತಿಂಗಳು ಸಂಬಳ ಸರ್ಕಾರಕ್ಕೆ ನೀಡಲು ಮುಂದಾದ ಬಾಂಗ್ಲಾ ಕ್ರಿಕೆಟಿಗರು..!

ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸಲು ಬಾಂಗ್ಲಾ ಕ್ರಿಕೆಟಿಗರು ಮುಂದಾಗಿದ್ದಾರೆ. ತಮ್ಮ ಅರ್ಧ ತಿಂಗಳ ಸಂಬಳವನ್ನು ನೀಡುವ ಮೂಲಕ ಜನರ ಹೃದಯ ಗೆದ್ದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Coronavirus Pandemic Bangladesh Cricketers Donate Half Month Salary To Bangla Government Relief Fund

ಢಾಕಾ(ಮಾ.26): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಸೆಣಸುತ್ತಿರುವ ಬಾಂಗ್ಲಾದೇಶಕ್ಕೆ ರಾಷ್ಟ್ರೀಯ ತಂಡದ ಕ್ರಿಕೆಟಿಗರು ತಮ್ಮ ಅರ್ಧ ತಿಂಗಳ ಸಂಬಳವನ್ನು ಸರ್ಕಾರದ ಪರಿಹಾರ ನಿಧಿಗೆ ನೀಡಲು ಮುಂದಾಗಿದೆ.

ಬಾಂಗ್ಲಾದೇಶದ 27 ಕ್ರಿಕೆಟಿಗರು ತಮ್ಮ ಅರ್ಧ ತಿಂಗಳ ಸಂಬಳ ನೀಡಲು ಮುಂದಾಗಿದ್ದಾರೆ. 27 ಆಟಗಾರರ ಪೈಕಿ 17 ಆಟಗಾರರು ಇತ್ತೀಚೆಗಷ್ಟೇ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್(ಬಿಸಿಬಿ) ಕೇಂದ್ರೀಯ ಗುತ್ತಿಗೆ ಸೇರಿದ್ದರು. ಇನ್ನುಳಿದ 10 ಆಟಗಾರರು ಕೆಲ ತಿಂಗಳುಗಳ ಹಿಂದಷ್ಟೇ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಪಾದಾರ್ಪಣೆ  ಮಾಡಿದವರಾಗಿದ್ದಾರೆ.

ಕೊರೋನಾ ಎಫೆಕ್ಟ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯೋದು ಅನುಮಾನ..!

ಇಡೀ ಜಗತ್ತೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಬಾಂಗ್ಲಾದೇಶದಲ್ಲೂ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಬಾಂಗ್ಲಾದೇಶದಲ್ಲೂ ಹೆಚ್ಚುತ್ತಿದೆ. ಕ್ರಿಕೆಟಿಗರಾದ ನಾವೆಲ್ಲ ಜನರಲ್ಲಿ ಕೊರೋನಾ ಕುರಿತಂತೆ ಅರಿವು ಮೂಡಿಸಬೇಕಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಪಿಡುಗಿನ ವಿರುದ್ಧ ಹೋರಾಡಬೇಕಿದೆ ಎಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ನಾಯಕ ವಿರಾಟ್ ಕೊಹ್ಲಿ!

ಜನರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೇ, ಸೆಂಟ್ರಲ್ ಕಾಂಟ್ರ್ಯಾಕ್ಟ್ ಹೊಂದಿರುವ 17 ಆಟಗಾರರು ಹಾಗೂ ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡ ಸೇರಿಕೊಂಡಿರುವ 10 ಆಟಗಾರರು ತಮ್ಮ ಅರ್ಧ ತಿಂಗಳ ಸಂಬಳ ನೀಡಲು ನಿರ್ಧರಿಸಿದ್ದೇವೆ. ಟ್ಯಾಕ್ಸ್ ಹೊರತುಪಡಿಸಿ ಸುಮಾರು 25 ಲಕ್ಷ ಟಾಕ ಹಣ ಸಂಗ್ರಹವಾಗಬಹುದು. ಈ ಹಣ ಕೊರೋನಾ ವೈರಸ್‌ ಪ್ರಮಾಣಕ್ಕೆ ಹೋಲಿಸಿದರೆ ಭಾರೀ ಮೊತ್ತವೇನಲ್ಲ. ಆದರೆ ನಾವೆಲ್ಲ ಒಟ್ಟಾಗಿ ನಮ್ಮ ಕೈಲಾದ ಸಹಾಯ ಮಾಡಿದರೆ ಕೊರೋನಾ ವಿರುದ್ಧ ದೊಡ್ಡ ಮೊಟ್ಟದಲ್ಲಿ ಹೋರಾಟ ಮಾಡಬಹುದಾಗಿದೆ ಎಂದು ಬಾಂಗ್ಲಾ ಕ್ರಿಕೆಟಿಗರು ಹೇಳಿಕೆ ನೀಡಿದ್ದಾರೆ. 

ಇದುವರೆಗೂ ಜಗತ್ತಿನಾದ್ಯಂತ ಸುಮಾರು 4 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 21 ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಬಾಂಗ್ಲಾದೇಶದಲ್ಲಿ ಇದುವರೆಗೂ 39 ಕೊರೋನಾ ವೈರಸ್ ಖಚಿತವಾಗಿದ್ದು, 5 ಮಂದಿ ಕೊನೆಯುಸಿರೆಳೆದಿದ್ದಾರೆ.  
 

Latest Videos
Follow Us:
Download App:
  • android
  • ios