ನವದೆಹಲಿ(ಏ.22): ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೆ, 2020ರ ಟಿ20 ವಿಶ್ವಕಪ್‌ ಟೂರ್ನಿಯನ್ನು ಭಾರತದಲ್ಲಿ ನಡೆಸಬಹುದು. ಮಾಜಿ ನಾಯಕ  ಸುನಿಲ್ ಗವಾಸ್ಕರ್ ಹೇಳಿಕೆ ಇದೀಗ ಹೊಸ ಸಂಚಲನ ಹುಟ್ಟುಹಾಕಿದೆ.

2021ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಅನ್ನು ಆಸ್ಪ್ರೇಲಿಯಾದಲ್ಲಿ ಆಯೋಜಿಸಬಹುದು ಎಂದು ಭಾರತದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ. ಭಾರತದಲ್ಲಿ ವಿಶ್ವಕಪ್‌ ನಡೆದರೆ, ವಿಶ್ವಕಪ್‌ಗೂ ಮುನ್ನ ಐಪಿಎಲ್‌ ಟೂರ್ನಿ ನಡೆಸಬಹುದು. ವಿಶ್ವಕಪ್‌ಗೆ ಅಭ್ಯಾಸ ನಡೆಸಲು ಎಲ್ಲರಿಗೂ ಅನುಕೂಲವಾಗಲಿದೆ ಎಂದು ಗವಾಸ್ಕರ್‌ ಅಭಿಪ್ರಾಯಿಸಿದ್ದಾರೆ.

ಕೆ.ಎಲ್‌.ರಾಹುಲ್‌ಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಸುನೀಲ್‌ ಶೆಟ್ಟಿ ಪುತ್ರಿ

ಆಸ್ಪ್ರೇಲಿಯಾದಲ್ಲಿ ಸೆ.30ರ ವರೆಗೂ ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ಮತ್ತಷ್ಟು ದಿನ ಮುಂದೂಡಬಹುದು ಎನ್ನಲಾಗಿದೆ. ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಭಾರತದಲ್ಲಿ 2021ರಲ್ಲಿ ಟಿ20 ವಿಶ್ವಕಪ್ ಜರುಗಲಿದೆ. 

ಇನ್ನು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯೂ ಕೊರೋನಾ ವೈರಸ್ ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.