ಟೀಂ ಇಂಡಿಯಾ ಕಂಡ ಶ್ರೇಷ್ಠ ಕ್ರಿಕೆಟಿಗ, ಭಾರತಕ್ಕೆ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಷ್ಠ ನಾಯಕ. ಇದೀಗ ದಿಢೀರ್ ವಿದಾಯ ನೀಡಿ ಧೋನಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಧೋನಿ ವಿದಾಯದ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಧೋನಿಗೆ ಭಾರತ ರತ್ನ ನೀಡಲು ಆಗ್ರಹಿಸಿದ್ದಾರೆ.

ನವದೆಹಲಿ(ಆ.17):  ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ದಿಢೀರ್ ವಿದಾಯ ಹೇಳಿ ಶಾಕ್ ನೀಡಿದ್ದಾರೆ. ಧೋನಿ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ಅಭಿಮಾನಿಗಳ ಕೊನಯ ಆಸೆ ಈಡೇರಿಲ್ಲ. ಐಪಿಎಲ್ ಟೂರ್ನಿಗೆ ತಯಾರಿ ನಡೆಸುತ್ತಿರುವ ನಡುವೆ ಯಾರಿಗೂ ಸುಳಿವು ನೀಡಿದಂತೆ ಧೋನಿ ತಮ್ಮ ವಿದಾಯ ಘೋಷಿಸಿದ್ದಾರೆ. ಧೋನಿ ವಿದಾಯದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಕೆಪಿ ಶರ್ಮಾ , ಧೋನಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಧೋನಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ!

ಎಂ.ಎಸ್.ಧೋನಿ ಜಗತ್ತನ್ನೇ ಗೆದ್ದ ನಾಯಕ. ಭಾರತ ತಂಡದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಕ್ರಿಕೆಟಿಗ. ಈ ಶ್ರೇಷ್ಠ ಕ್ರಿಕೆಟಿಗನಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎಂದು ಕೆಪಿ ಶರ್ಮಾ ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ.

Scroll to load tweet…

ವಿಶ್ವಕಪ್, ನಂ.1 ಪಟ್ಟ ಭಾರತಕ್ಕೆ ಎಲ್ಲವನ್ನೂ ಗೆದ್ದು ಕೊಟ್ಟ ಸಾಧಕ ನಮ್ಮ ಮಹಿ..!...

ಎಂ.ಎಸ್.ಧೋನಿ ಕ್ರೀಡಾ ವಿಭಾಗದ ಅತ್ಯುನ್ನತ ಗೌರವ ಖೇಲ್ ರತ್ನ ಪ್ರಶಸ್ತಿಗೆ ಭಾದೃಜನರಾಗಿದ್ದಾರೆ. ಇದರ ಜೊತೆಗೆ ಪದ್ನಭೂಷಣ ಹಾಗೂ ಪದ್ನಶ್ರಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೀಗ ಭಾರತ ರತ್ನ ನೀಡುವಂತೆ ಕೆಪಿ ಶರ್ಮಾ ಆಗ್ರಹಕ್ಕೆ ಅಭಿಮಾನಿಗಳಿ ಧನಿಗೂಡಿಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿದಾಯದ ಬಳಿಕ 2014ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಈ ಮೂಲಕ ಸಚಿನ್ ತೆಂಡುಲ್ಕರ್ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕ್ರೀಡಾಪಟು ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ.