Asianet Suvarna News Asianet Suvarna News

2023ರಲ್ಲಿ ಟೀಂ ಇಂಡಿಯಾ ಪಡೆದುಕೊಂಡಿದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ..! ಈ ಬಾರಿ ಸೋತಿದ್ದು ಒಂದಲ್ಲ 2 ವಿಶ್ವಕಪ್

ಈ ವರ್ಷ ಭಾರತೀಯ ಕ್ರಿಕೆಟ್ ಪಾಲಿಗೆ ಯಾಕೆ ಮಹತ್ವದ್ದಾಗಿತ್ತು ಅಂದ್ರೆ ಎರಡು ವಿಶ್ವಕಪ್ ಟೂರ್ನಿಗಳು ನಡೆದ ವರ್ಷವಿದು. ಜೂನ್‌ನಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

2023 disappoint year for Indian Cricket Team kvn
Author
First Published Dec 31, 2023, 1:55 PM IST

ಬೆಂಗಳೂರು(ಡಿ.31): 2023ರ ವರ್ಷ ಮುಗಿಯುತ್ತಿದೆ. ಹೊಸ ವರ್ಷ ಬರ ಮಾಡಿಕೊಳ್ಳಲು ಭಾರತೀಯ ಕ್ರಿಕೆಟ್ ಕಾಯುತ್ತಿದೆ. ಈ ವರ್ಷ ಟೀಂ ಇಂಡಿಯಾ ಪಾಲಿಗೆ ಬ್ಯಾಡ್ ಈಯಸ್ ಅಂದ್ರೆ ತಪ್ಪಲ್ಲ. 2023ರಲ್ಲಿ ಪಡೆದುಕೊಂಡಿದ್ದ ಕಳೆದುಕೊಂಡಿದ್ದೇ ಹೆಚ್ಚು. ಈ ವರ್ಷ ಟೀಂ ಇಂಡಿಯಾ ಸಾಧನೆ ಇಲ್ಲಿದೆ ನೋಡಿ.

ಪಡೆದುಕೊಂಡಿದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ..!

2023ರ ವರ್ಷ ಮುಗಿಯೋಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಮುಗಿದ್ರೆ ಈ ವರ್ಷ ಕೊನೆಗೊಳ್ಳಲಿದೆ. 2024ರ ಹೊಸ ವರ್ಷವನ್ನ ಬರ ಮಾಡಿಕೊಳ್ಳಲು ಇಡೀ ಜಗತ್ತು ಕಾತುರದಿಂದ ಕಾಯ್ತಿದೆ. ಭಾರತೀಯ ಕ್ರಿಕೆಟ್ ಸಹ ಅಷ್ಟೆ. ಎಷ್ಟು ಬೇಗ 2023ರ ವರ್ಷ ಮುಗಿಯುತ್ತೆ ಅಂತ ಯೋಚಿಸ್ತಿದೆ. ಯಾಕೆ ಗೊತ್ತಾ..? 2023 ಭಾರತೀಯ ಕ್ರಿಕೆಟ್ ಪಾಲಿಗೆ ಕರಾಳ ವರ್ಷ. ಈ ವರ್ಷ ಇಂಡಿಯನ್ ಕ್ರಿಕೆಟರ್ಸ್ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ. ನಿರೀಕ್ಷೆಗಳು ಬೆಟ್ಟದಷ್ಟು ಇದ್ದರೂ ಎಲ್ಲವೂ ಹುಸಿಯಾದ್ವು.

ದಕ್ಷಿಣ ಆಫ್ರಿಕಾದಲ್ಲಿ ರೋಹಿತ್ ಶರ್ಮಾಗೆ ಅಗ್ನಿಪರೀಕ್ಷೆ..!

ಈ ವರ್ಷ ಎರಡು ವಿಶ್ವಕಪ್ ಕೈ ಚಲ್ಲಿದೆ ಟೀಂ ಇಂಡಿಯಾ

ಈ ವರ್ಷ ಭಾರತೀಯ ಕ್ರಿಕೆಟ್ ಪಾಲಿಗೆ ಯಾಕೆ ಮಹತ್ವದ್ದಾಗಿತ್ತು ಅಂದ್ರೆ ಎರಡು ವಿಶ್ವಕಪ್ ಟೂರ್ನಿಗಳು ನಡೆದ ವರ್ಷವಿದು. ಜೂನ್‌ನಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. 2022-23ರ ಟೆಸ್ಟ್ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತೀಯರು, ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದರು. ಆದ್ರೆ ಸತತ 2ನೇ ಸಲವೂ ಅದೇ ನಿರಾಸೆ. 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟೆಸ್ಟ್ ವಿಶ್ವಕಪ್ ಕೈ ಚಲ್ಲಿತು. ಆಸೀಸ್ ವಿರುದ್ಧವೇ ಮಾರ್ಚ್ನಲ್ಲಿ ಟೆಸ್ಟ್ ಸರಣಿ ಗೆದ್ದಿದ್ದ ಭಾರತೀಯರು, ಅದೇ ಆಸೀಸ್ ವಿರುದ್ಧ ಫೈನಲ್ನಲ್ಲಿ ಸೋತು ಹೋದ್ರು.

ತವರಿನಲ್ಲಿ ಏಕದಿನ ವಿಶ್ವಕಪ್ ಸಿಗಲಿಲ್ಲ..!

2011ರ ಬಳಿಕ ಭಾರತ, ಈ ವರ್ಷ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿತ್ತು. 12 ವರ್ಷಗಳ ನಂತರ ಟೀಂ ಇಂಡಿಯಾ, ಒನ್ಡೇ ವರ್ಲ್ಡ್‌ಕಪ್ ಗೆಲ್ಲುತ್ತೆ ಅನ್ನೋ ನಿರೀಕ್ಷೆಗಳಿದ್ದವು. ಅದರಂತೆ ಸತತ 10 ಪಂದ್ಯಗಳನ್ನ ಗೆದ್ದು ಫೈನಲ್ ಸಹ ಪ್ರವೇಶಿಸಿತ್ತು. ಆದ್ರೆ ಫೈನಲ್‌ನಲ್ಲಿ ಮಾತ್ರ ಭಾರಿ ನಿರಾಸೆ ಮೂಡಿಸಿತು. ಮತ್ತದೆ ಆಸ್ಟ್ರೇಲಿಯಾ ವಿರುದ್ಧ ಸೋತು ಏಕದಿನ ವಿಶ್ವಕಪ್ ಕೈ ಚಲ್ಲಿತು. ಈ ವರ್ಷ ಕಾಂಗರೂಗಳು ಭಾರತೀಯರಿಂದ ಎರಡು ವಿಶ್ವಕಪ್‌ಗಳನ್ನ ಕಿತ್ತುಕೊಂಡಿದ್ದಾರೆ. ಭಾರತ ವಿರುದ್ಧ ದ್ವಿಪಕ್ಷೀಯ ಸರಣಿಗಳಲ್ಲಿ ಸೋತು, ವಿಶ್ವಕಪ್‌ಗಳನ್ನು ಎತ್ತಿ ಹಿಡಿದಿದ್ದಾರೆ.

Boxing Day Test ಟೀಂ ಇಂಡಿಯಾ ಸೋಲಿಗೆ ಈ 4 ವೈಫಲ್ಯಗಳೇ ಕಾರಣ..! ನೀವೇನಂತೀರಾ?

ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯೂ ಸಿಗುವುದಿಲ್ಲ..!

ಎರಡು ವರ್ಲ್ಡ್‌ಕಪ್‌ಗಳಂತೂ ಸಿಗಲಿಲ್ಲ. ಅಟ್ ಲಿಸ್ಟ್ ಸೌತ್ ಆಫ್ರಿಕಾದಲ್ಲಿ ಮೊದಲ ಸಲ ಟೆಸ್ಟ್ ಸರಣಿ ಗೆಲ್ಲುತ್ತೆ ಅನ್ನೋ ನಿರೀಕ್ಷೆಗಳು ಸುಳ್ಳಾಗಿದೆ. ಮೊದಲ ಟೆಸ್ಟ್ ಅನ್ನ ಹೀನಾಯವಾಗಿ ಸೋಲೋ ಮೂಲಕ ಆಫ್ರಿಕಾದಲ್ಲಿ ಫಸ್ಟ್ ಟೈಮ್ ಟೆಸ್ಟ್ ಸಿರೀಸ್ ಗೆಲ್ಲೋದ್ರಿಂದ ವಂಚಿತವಾಯ್ತು.

ಏಷ್ಯಾಕಪ್ ಗೆದ್ದಿದ್ದೇ ಈ ವರ್ಷ ಭಾರತೀಯರ ಸಾಧನೆ

ಹೌದು, ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಗೆದ್ದಿದ್ದೇ ಟೀಂ ಇಂಡಿಯಾದ ಈ ವರ್ಷದ ಸಾಧನೆ. ಪಾಕ್-ಲಂಕಾದಲ್ಲಿ ನಡೆದ ಏಷ್ಯಾಕಪ್ ಅನ್ನ  ಭಾರತ ಗೆದ್ದುಕೊಂಡಿತ್ತು. ಬದ್ಧವೈರಿ ಪಾಕಿಸ್ತಾನವನ್ನ ಏಷ್ಯಾಕಪ್ನಲ್ಲಿ ಸೋಲಿಸಿತ್ತು. ಫೈನಲ್ನಲ್ಲಿ ಸಿಂಹಗಳ ಘರ್ಜನೆಯನ್ನೇ ಅಡಗಿಸಿತ್ತು. ಒಟ್ನಲ್ಲಿ ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿತ್ತು. ಏಷ್ಯಾಕಪ್ ಗೆಲುವು. ಈ ಎರಡೇ ಈ ವರ್ಷ ಭಾರತೀಯರ ಸಾಧನೆ. ಉಳಿದೆಲ್ಲಾ ಶೂನ್ಯ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Follow Us:
Download App:
  • android
  • ios