Asianet Suvarna News Asianet Suvarna News

ಚೆನ್ನೈ ಟೆಸ್ಟ್: ಸೋಲಿನ ಸುಳಿಯಲ್ಲಿ ಟೀಂ ಇಂಡಿಯಾ

ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿದ್ದು, ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೋಲಿನಿಂದ ತಂಡವನ್ನು ಪಾರು ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Chennai Test Team India six down at lunch on Day 5 against  England kvn
Author
Chennai, First Published Feb 9, 2021, 11:51 AM IST

ಚೆನ್ನೈ(ಫೆ.09): ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮಾರಕ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ 5ನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ 6 ವಿಕೆಟ್‌ ಕಳೆದುಕೊಂಡು 144 ರನ್‌ ಬಾರಿಸಿದ್ದು, ಗೆಲ್ಲಲು ಇನ್ನೂ 276 ರನ್‌ಗಳ ಅಗತ್ಯವಿದೆ. ಇನ್ನು ಇಂಗ್ಲೆಂಡ್‌ ಕೇವಲ 4 ವಿಕೆಟ್ ಕಬಳಿಸಿದರೆ ಮೊದಲ ಟೆಸ್ಟ್ ಪಂದ್ಯ ಇಂಗ್ಲೆಂಡ್ ಪಾಲಾಗಲಿದೆ.

ನಾಲ್ಕನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 39 ರನ್ ಬಾರಿಸಿದ್ದ ಭಾರತ ತಂಡ ಕೊನೆಯ ದಿನದಾಟವನ್ನು ಅತ್ಯಂತ ಎಚ್ಚರಿಕೆಯಿಂದ ಆರಂಭಿಸಿತು. ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(15) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಜಾಕ್ ಲೀಚ್‌ ಅವಕಾಶ ನೀಡಲಿಲ್ಲ. ಆ ಬಳಿಕ ಯುವ ಬ್ಯಾಟ್ಸ್‌ಮನ್‌ ಶುಭ್‌ಮನ್‌ ಗಿಲ್‌ ಹಾಗೂ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು.

ಫಿಫ್ಟಿ ಬಾರಿಸಿದ ಶುಭ್‌ಮನ್‌ ಗಿಲ್‌: ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶುಭ್‌ಮನ್‌ ಗಿಲ್‌ ಆಕರ್ಷಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ಗಿಲ್ 83  ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 50 ರನ್‌ ಬಾರಿಸಿದರು. ಅಂದಹಾಗೆ ಇದು ಗಿಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರನೇ ಟೆಸ್ಟ್ ಅರ್ಧಶತಕವಾಗಿದೆ. 

ಚೆನ್ನೈ ಟೆಸ್ಟ್: ಬೃಹತ್ ಗುರಿ ಪಡೆದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ

ಶಾಕ್ ಕೊಟ್ಟ ಆ್ಯಂಡರ್‌ಸನ್‌: ಗಿಲ್ ಅರ್ಧಶತಕ ಬಾರಿಸುತ್ತಿದ್ದಂತೆ ಇಂಗ್ಲೆಂಡ್ ನಾಯಕ ಜೋ ರೂಟ್‌ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್ ಅವರನ್ನು ದಾಳಿಗಿಳಿಸಿದರು. 27ನೇ ಓವರ್‌ನಲ್ಲಿ ಆ್ಯಂಡರ್‌ಸನ್‌ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಾದ ಶುಭ್‌ಮನ್‌ ಗಿಲ್ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಕ್ಲೀನ್‌ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಶಾಕ್‌ ನೀಡಿದರು. ಬಳಿಕ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರನ್ನು ಬಲಿ ಪಡೆಯುವ ಮೂಲಕ ಭಾರತಕ್ಕೆ ಇಂಗ್ಲೆಂಡ್‌ ವೇಗಿ ದೊಡ್ಡ ಹೊಡೆತ ನೀಡಿದರು.

ಕೊಹ್ಲಿ ಮೇಲೆ ಎಲ್ಲರ ಚಿತ್ತ: ಒಂದು ಕಡೆ ನಿರಂತರ ವಿಕೆಟ್‌ ಬೀಳುತ್ತಿದ್ದರೂ ನಾಯಕ ವಿರಾಟ್ ಕೊಹ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ತಂಡಕ್ಕೆ ಆಸರೆಯಾಗಿದ್ದಾರೆ. ಸದ್ಯ ಕೊಹ್ಲಿ 51 ಎಸೆತಗಳಲ್ಲಿ 5 ಬೌಂಡರಿ ಸಹಿತ 45 ರನ್‌ ಬಾರಿಸಿ ಅಜೇಯರಾಗುಳಿದಿದ್ದಾರೆ. ವಿರಾಟ್ ಕೊಹ್ಲಿ ಎರಡನೇ ಸೆಷನ್‌ನಲ್ಲಿ ಯಾವ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಹಾಗೂ ಅಶ್ವಿನ್‌(2) ನಾಯಕನಿಗೆ ಯಾವ ರೀತಿ ಸಾಥ್ ನೀಡುತ್ತಾರೆ ಎನ್ನುವುದರ ಆಧಾರದ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.
 

Follow Us:
Download App:
  • android
  • ios