ಚೆನ್ನೈ(ಫೆ.08): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಚೆನ್ನೈ ಪಂದ್ಯ ರೋಚಕ ಘಟ್ಟ ತಲುಪಿದೆ.  ಆರಂಭಿಕ 3 ದಿನ ಇಂಗ್ಲೆಂಡ್ ಮೇಲುಗೈ ಸಾಧಿಸಿದ್ದರೆ, 4ನೇ ದಿನ ಟೀಂ ಇಂಡಿಯಾ ಅಬ್ಬರಿಸಿದೆ. ಆರ್ ಅಶ್ವಿನ್ 6 ವಿಕೆಟ್ ಕಬಳಿಸೋ ಮೂಲಕ ಇಂಗ್ಲೆಂಡ್ ತಂಡವನ್ನು 178 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೂಲಕ 420 ರನ್ ಪಡೆದು 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ, ಮೊದಲ ವಿಕೆಟ್ ಕಳೆದುಕೊಂಡಿದೆ.

ಚೆನ್ನೈ ಟೆಸ್ಟ್‌: 100 ವರ್ಷಕ್ಕೂ ಹಳೆಯದಾದ ಅಪರೂಪದ ದಾಖಲೆ ಬ್ರೇಕ್‌ ಮಾಡಿದ ಅಶ್ವಿನ್‌..!.

2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅಬ್ಬರಿಸಲು ಅವಕಾಶ ನೀಡಲಿಲ್ಲ. ಆರ್ ಅಶ್ವಿನ್ ಮೋಡಿಗೆ ಇಂಗ್ಲೆಂಡ್ ತಬ್ಬಿಬ್ಬಾಯಿತು. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆಯಿಂದ ಟೀಂ ಇಂಡಿಯಾಗೆ 420 ರನ್ ಗುರಿ ನೀಡಿತು. ಈ ವೇಳೆ ಸರಿಸುಮಾರು 15 ಓವರ್ ದಿನದಾಟ ಬಾಕಿ ಇತ್ತು. 

ಬೃಹತ್ ಗುರಿ ಕಾರಣ ಟೀಂ ಇಂಡಿಯಾ ಬಿರುಸಿನ ಹೋರಾಟಕ್ಕೆ ಮುಂದಾಯಿತು. ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ನೀಡುವ ಸೂಚನೆ ನೀಡಿದರು. ಆದರೆ ಇವರಿಬ್ಬರ ಅಬ್ಬರ ಹೆಚ್ಚು ಹೊತ್ತುಇರಲಿಲ್ಲ. 5.3 ಓವರ್‌ನಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನಗೊಂಡಿತು.

ಚೇತೇಶ್ವರ್ ಪೂಜಾರ ಹಾಗೂ ಗಿಲ್ ಹೋರಾಟದ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 4ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 1 ವಿಕೆಟ್ ನಷ್ಟಕ್ಕೆ 39 ರನ್ ಸಿಡಿಸಿದೆ. ಈ ಮೂಲಕ ಗೆಲುವಿಗೆ ಇನ್ನು 381 ರನ್ ಸಿಡಿಸಿಬೇಕಿದೆ. 5ನೇ ಹಾಗೂ ಅಂತಿಮ ದಿನ ಭಾರತಕ್ಕೆ ಬೃಹತ್ ಸವಾಲು ಎದುರಾಗಲಿದೆ.   ಬಲಿಷ್ಠ ಬ್ಯಾಟಿಂಗ್ ಪಡೆ ಹಾಗೂ ಚೇಸಿಂಗ್‌ನಲ್ಲಿ ಉತ್ತಮವಾಗಿರುವ ಟೀಂ ಇಂಡಿಯಾ ಚೆನ್ನೈ ಟೆಸ್ಟ್‌ಗೆ ಮತ್ತಷ್ಟು ರೋಚಕತೆ ತರುವುದರಲ್ಲಿ ಯಾವುದೇ ಅನುಮಾನವಿಲ್ಲ.