Asianet Suvarna News Asianet Suvarna News

ಎಂ ಎಸ್ ಧೋನಿ ಐಪಿಎಲ್‌ ಯೂ ಟರ್ನ್​ ಹಿಂದಿನ ರಹಸ್ಯ..!

* ಐಪಿಎಲ್‌ನಲ್ಲಿ ಮತ್ತೊಂದು ವರ್ಷ ಕಣಕ್ಕಿಳಿಯಲು ತೀರ್ಮಾನಿಸಿದ ಕ್ಯಾಪ್ಟನ್ ಕೂಲ್

* IPL ವಿಷಯಕ್ಕೆ ಬಂದರೆ ಎಂ ಎಸ್ ಧೋನಿಯೇ ಕಿಂಗ್

* ಚೆನ್ನೈ ಪರ ಮತ್ತೊಮ್ಮೆ ಕಣಕ್ಕಿಳಿಯುವುದಾಗಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ

Chennai Super Kings captain MS Dhoni IPL U turn Secrate kvn
Author
Bengaluru, First Published May 23, 2022, 1:45 PM IST

ಮುಂಬೈ(ಮೇ.23): ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ಟನ್ (Team India Captain Rohit Sharma) ಇರಬಹುದು. ವಿರಾಟ್ ಕೊಹ್ಲಿ ಪಾಪ್ಯುಲರ್ ಕ್ರಿಕೆಟರ್ ಇರಬಹುದು. ಆದರೆ IPL ವಿಷಯಕ್ಕೆ ಬಂದರೆ ಎಂ ಎಸ್ ಧೋನಿಯೇ (MS Dhoni) ಕಿಂಗ್. ಈ ಸೀಸನ್​ನಲ್ಲಿ ಅತಿಹೆಚ್ಚು ವೀಕ್ಷಿಸಿದ ಪಂದ್ಯ ಅಂದ್ರೆ ಅದು ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಆಡಿದ್ದು. ಅದರಲ್ಲೂ ಮಾಸ್ಟರ್ ಮೈಂಡ್ ಧೋನಿ ಮ್ಯಾಚ್ ಫಿನಿಶ್ ಮಾಡಿದ ಮ್ಯಾಚ್​. ಇದರಲ್ಲೇ ಗೊತ್ತಾಗುತ್ತೆ ಧೋನಿ ತಾಕತ್ತು.

ಎಂ ಎಸ್ ಧೋನಿಗೆ 40 ವರ್ಷ. ಈ IPL ಅವರ ಪಾಲಿಗೆ ಕೊನೆಯದ್ದು. ಹಾಗಾಗಿಯೇ ಕ್ಯಾಪ್ಟನ್ಸಿಯನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟರು ಅಂತ ಎಲ್ಲರೂ ಬಾವಿಸಿದ್ದರು. ಆದರೆ ಜಡ್ಡು ಮಧ್ಯೆದಲ್ಲೇ ನಾಯಕತ್ವ ವಾಪಾಸ್ ಬಿಟ್ಟುಕೊಟ್ಟರು. ಆದ್ರೂ ಧೋನಿ ಮುಂದಿನ ಸೀಸನ್ ಆಡಲ್ಲ ಅನ್ನಲಾಗಿತ್ತು. ಆದ್ರೆ ಮುಂದಿನ ವರ್ಷ IPL ಆಡ್ತೀನಿ ಅಂತ ಹೇಳೋ ಮೂಲಕ ಎಲ್ಲರಿಗೂ ಶಾಕ್ ನೀಡಿದ್ರು. ಅಷ್ಟಕ್ಕೂ ಧೋನಿ ರಿಟೈರ್ಡ್​ ಆಗದೆ ಮುಂದಿನ IPL ಆಡ್ತೀನಿ ಅಂದಿದ್ದೇಕೆ ಗೊತ್ತಾ..? ಫ್ರಾಂಚೈಸಿಗಾಗಿ. ಹೌದು, ತನ್ನ ಬೆಳೆಸಿದ ಫ್ರಾಂಚೈಸಿಗಾಗಿಯೇ ಮಹಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅದು ಹೇಗೆ ಅನ್ನೋದಕ್ಕೂ ನಮ್ಮ ಬಳಿ ಆನ್ಸರ್ ಇದೆ.

ಧೋನಿ ಪ್ಲೇಯರ್ ಕಮ್ ಕ್ಯಾಪ್ಟನ್:

ಸಿಎಸ್​ಕೆ ತಂಡಕ್ಕೆ ಉತ್ತಮ ನಾಯಕನ ಅವಶ್ಯಕತೆ ಇದೆ. ಮಹಿ ಬಳಿಕ ರವೀಂದ್ರ ಜಡೇಜಾ (Ravindra Jadeja) ನಾಯಕ ಅಂತ ಸಿಎಸ್​ಕೆ ಅಂದುಕೊಂಡಿತ್ತು. ಅದರಂತೆ ನಾಯಕತ್ವವನ್ನೂ ನೀಡಿತ್ತು. ಆದ್ರೆ ಕಳಪೆ ಪ್ರದರ್ಶನ ನೀಡಿದ ಜಡ್ಡು, ಟೂರ್ನಿ ಮಧ್ಯೆದಲ್ಲೇ ನಾಯಕತ್ವ ತ್ಯಜಿಸಿದ್ದರಿಂದ ಮತ್ತೆ ಧೋನಿ ಹೆಗಲಿಗೆ ಕ್ಯಾಪ್ಸನ್ಸಿ ಬಿದ್ದಿದೆ. ಸದ್ಯ ಧೋನಿ ಬಿಟ್ಟರೆ ಋತುರಾಜ್ ಗಾಯಕ್ವಾಡ್ ಮಾತ್ರ ಸಿಎಸ್​ಕೆ ಕ್ಯಾಪ್ಟನ್ ರೇಸ್​ನಲ್ಲಿರೋದು. ಆದರೆ ನಾಯಕತ್ವ ವಹಿಸಿಕೊಳ್ಳೋಕು ಮುನ್ನ ಋತುರಾಜ್​​ಗೆ ಇನ್ನಷ್ಟು ಅನುಭವ ಬೇಕು. ಜೊತೆಗೆ ಸ್ಥಿರ ಪ್ರದರ್ಶನ ನೀಡಬೇಕು. ಅಲ್ಲಿಯವರೆಗೂ ಧೋನಿ ಅವಶ್ಯಕತೆ ಸಿಎಸ್​ಕೆಗೆ ಇದೆ.

IPL 2022 ಗೇಮ್​​ ಇಸ್​​​ ನಾಟ್ ಓವರ್​​​​, ಫಿಕ್ಚರ್​​​ ಅಭಿ ಬಾಕಿ ಹೈ..!

ಧೋನಿ ಕೋಚ್ ಕಮ್ ಮೆಂಟರ್​:

ಧೋನಿ ಕೇವಲ ಆಟಗಾರ ಮತ್ತು ಕ್ಯಾಪ್ಟನ್ ಅಲ್ಲ. ಸಿಎಸ್​ಕೆ ತಂಡದ ಕೋಚ್ ಕಮ್ ಮೆಂಟರ್ ಸಹ ಅವರೇ. ಸ್ಟೀಫನ್ ಫ್ಲೆಮಿಂಗ್ ಕೋಚ್ ಆಗಿರಬಹುದು. ಆದ್ರೆ ಯಂಗ್ ಸ್ಟಾರ್ಸ್​​ಗೆ ಕೋಚಿಂಗ್ ಕೋಡೋದು ಧೋನಿಯೇ. ಇಡೀ ಟೀಮ್​ಗೆ ಮೆಂಟರ್ ಸಹ ಅವರೇ. ಆಟಗಾರನಾಗಿದ್ದುಕೊಂಡೇ ಈ ಎರಡು ಕೆಲಸವನ್ನ ನಿರ್ವಹಿಸುತ್ತಿದ್ದಾರೆ. ಸಹಾಯಕ ಸಿಬ್ಬಂದಿ ಜೊತೆ ಧೋನಿ ಒಡನಾಟ ಚೆನ್ನಾಗಿದೆ. ಹಾಗಾಗಿ ನಾಲ್ಕು ಟ್ರೋಫಿ ಗೆಲ್ಲಲು ಸಾಧ್ಯವಾಗಿರೋದು. ಮಹಿ ನಾಯಕತ್ವ ತ್ಯಜಿಸಿದರೆ ಈ ಎಲ್ಲಾ ವಿಭಾಗದಲ್ಲೂ ಸಿಎಸ್​ಕೆ ಕೊರತೆ ಅನುಭವಿಸಲಿದೆ.

ಧೋನಿ ಸಿಎಸ್​ಕೆ ಬ್ರಾಂಡ್ ಅಂಬಾಸಿಡರ್​:

ಸಿಎಸ್​ಕೆ ಒಂದು ಫ್ರಾಂಚೈಸಿ ತಂಡವಲ್ಲ. ಅದೊಂದು ಬ್ರ್ಯಾಂಡ್. ಆ ಬ್ರ್ಯಾಂಡ್ ಹೆಸರೇ ಮಹೇಂದ್ರ ಸಿಂಗ್ ಧೋನಿ. ಹೌದು, ಸಿಎಸ್​ಕೆ ತಂಡ ಅನ್ನೋದಕ್ಕಿಂತ ಆ ತಂಡಕ್ಕೆ ಧೋನಿ ನಾಯಕ ಅಂತ ಪಂದ್ಯ ನೋಡೋರೇ ಜಾಸ್ತಿ. ಅದು ಈ ಸೀಸನ್​ನಲ್ಲೂ ಪ್ರೂವ್ ಆಗಿದೆ. 2008ರಿಂದ ಸಿಎಸ್​ಕೆ ತಂಡವಿದ್ದು, 13 ಸೀಸನ್​ನಲ್ಲಿ ಧೋನಿಯೇ ನಾಯಕ. ಅವರೇ ಆ ತಂಡದ ಬ್ರ್ಯಾಂಡ್ ಅಂಬಾಸಿಡರ್​. ಧೋನಿ ಬಿಟ್ಟರೆ ಅಷ್ಟು ಪಾಪ್ಯುಲಾರಿಟಿ ಇರೋ ಪ್ಲೇಯರ್​ ಸಿಎಸ್​ಕೆಗೆ ಸದ್ಯಕ್ಕೆ ಸಿಗಲ್ಲ. ಮಹಿ ಮುಂದಿನ ಸೀಸನ್ ಐಪಿಎಲ್ ಆಡಲು ಇದು ಸಹ ಒಂದು ಕಾರಣವಾಗಿದೆ.

Follow Us:
Download App:
  • android
  • ios