ಸಿಇಓ ವರ್ಲ್ಡ್‌ ಮ್ಯಾಗಜೀನ್‌ ಇತ್ತೀಚೆಗೆ 2023ರ ವೇಳೆ ವಿಶ್ವದ ಶ್ರೀಮಂತ ಕ್ರಿಕೆಟಿಗ ಯಾರು ಅನ್ನೋದರ ವರದಿ ಮಾಡಿದೆ. ಅಚ್ಚರಿ ಎನ್ನುವಂತೆ ಹಾಲಿ ಕ್ರಿಕೆಟಿಗರ ಪೈಕಿ ಯಾರೊಬ್ಬರೂ ಅಗ್ರಸ್ಥಾನದಲ್ಲಿಲ್ಲ. ಆಸೀಸ್‌ನ ಮಾಜಿ ಕ್ರಿಕೆಟಿಗ ವಿಶ್ವದ ಶ್ರೀಮಂತ ಕ್ರಿಕೆಟಿಗ ಎಂದು ಹೇಳಲಾಗಿದೆ. 

ಬೆಂಗಳೂರು (ಮಾ.14): ಭಾರತದಲ್ಲಿ ಕ್ರಿಕೆಟ್‌ ಜನಪ್ರಿಯ ಕ್ರೀಡೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಹುಶಃ ಕ್ರಿಕೆಟಿಗರರನ್ನು ಕೆಲವೊಂದು ಭಾಗಗಳಲ್ಲಿ ದೇವರಂತೆಯೆ ಪೂಜೆ ಮಾಡುತ್ತಾರೆ. ಐಪಿಎಲ್,‌ ಅಂತಾರಾಷ್ಟ್ರೀಯ ಕ್ರಿಕೆಟ್‌, ಜಾಹೀರಾತು ಹೀಗೆ ಈ ಎಲ್ಲಾ ಕಾರಣದಿಂದಾಗಿ ಭಾರತದ ಕ್ರಿಕೆಟಿಗರು ಕೂಡ ಕ್ರಿಕೆಟ್‌ನಿಂದ ಅಪಾರ ಹಣವನ್ನು ಸಂಪಾದನೆ ಮಾಡುತ್ತಾರೆ. ಭಾರತದ ಸ್ಟಾರ್‌ ಕ್ರಿಕೆಟಿಗ, ದೇಶದ ಕೆಲವೊಂದು ಶ್ರೀಮಂತರ ಪಟ್ಟಿಯಲ್ಲಂತೂ ಸ್ಥಾನ ಪಡೆಯಬಲ್ಲಷ್ಟು ಶಕ್ತರಿದ್ದಾರೆ. ಅದರಲ್ಲೂ ದಿಗ್ಗಜ ಬ್ಯಾಟ್ಸ್‌ಮನ್‌ಳಾದ ಸಚಿನ್‌ ತೆಂಡುಲ್ಕರ್‌, ಎಂಎಸ್‌ ಧೋನಿ, ವಿರಾಟ್‌ ಕೊಹ್ಲಿ ಅವರನ್ನು ಬಹಳ ಸುಲಭವಾಗಿ ವಿಶ್ವದ ಶ್ರೀಮಂತ ಕ್ರಿಕೆಟಿಗರು ಎಂದು ಕೂಡ ಹೇಳಬಹುದು. ಆದರೆ, ಮ್ಯಾಗಝೀನ್‌ವೊಂದು ಮಾಡಿರುವ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಡಂ ಗಿಲ್‌ಕ್ರಿಸ್ಟ್‌ 2023ರ ವೇಳೆ ವಿಶ್ವದ ಶ್ರೀಮಂತ ಕ್ರಿಕೆಟಿಗ ಎಂದು ಹೇಳಿದೆ. ಅದಲ್ಲದೆ, ಅವರ ಆದಾಯದ ಮೂಲವೇನು, ಇಷ್ಟು ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎನ್ನುವುದರ ವಿವರಗಳನ್ನೂ ನೀಡಿದೆ. 'ಸಿಇಓ ವರ್ಲ್ಡ್ ಮ್ಯಾಗಜೀನ್' ವರದಿಯ ಪ್ರಕಾರ, ಆಡಮ್ ಗಿಲ್‌ಕ್ರಿಸ್ಟ್ ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ ಮತ್ತು ಅಂದಾಜು 3130 ಕೋಟಿ ರೂಪಾಯಿ (380 ಮಿಲಿಯನ್‌ ಡಾಲರ್‌) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಎರಡನೇ ಸ್ಥಾನವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್‌ ಅಲಂಕರಿಸಿದ್ದಾರೆ. ಸಚಿನ್‌ ಅವರ ನಿವ್ವಳ ಮೌಲ್ಯ 1400 ಕೋಟಿ ರೂಪಾಯಿ (170 ಮಿಲಿಯನ್‌ ಡಾಲರ್‌) ಎಂದು ಹೇಳಲಾಗಿದೆ.

ವರದಿಯಲ್ಲಿ ಉಲ್ಲೇಖ ಮಾಡಿರುವ ಪ್ರಕಾರ, ಆಡಮ್‌ ಗಿಲ್‌ಕ್ರಿಸ್ಟ್‌ ಕೇವಲ ಕ್ರಿಕೆಟ್‌ನೊಂದಿಗೆ ಮಾತ್ರವಲ್ಲ ವಿವಿಧ ಕಂಪನಿಗಳ ಜೊತೆಗೂ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಈ ಕೆಲಸಗಳಿಗಾಗಿ ದೊಡ್ಡ ಮೊತ್ತದ ವೇತನವನ್ನು ಸಂಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದೆ. ಇದರಿಂದಾಗಿಯೇ ಅವರು ವಿಶ್ವದಲ್ಲಿ ನಡೆಯುತ್ತಿರುವ ಇತರ ಕ್ರಿಕೆಟ್‌ ಲೀಗ್‌ಗಳಲ್ಲಿ ಹಾಗೂ ವಿಶ್ಲೇಷಕರಾಗಿ ಕೆಲಸ ಮಾಡುತ್ತಿಲ್ಲ ಎಂದು ವಿವರಿಸಿದೆ.

ಸಚಿನ್ ತೆಂಡೂಲ್ಕರ್‌ - ಯುವರಾಜ್ ಸಿಂಗ್‌: ಭಾರತದ ಶ್ರೀಮಂತ ಕ್ರಿಕೆಟಿಗರು!

ಟೀಮ್‌ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಸಚಿನ್‌ ತೆಂಡುಲ್ಕರ್‌ ಅವರ ನಂತರದ ಸ್ಥಾನದಲ್ಲಿದ್ದು, ಧೋನಿ ಅವರ ನಿವ್ವಳ ಮೌಲ್ಯ 947 ಕೋಟಿ ರೂಪಾಯಿ (115 ಮಿಲಿಯನ್‌ ಯುಎಸ್‌ ಡಾಲರ್‌) ಆಗಿದೆ. ಸ್ಟಾರ್‌ ಬ್ಯಾಟ್ಸ್‌ಮನ್‌ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಧೋನಿಯ ಸನಿಹದಲ್ಲಿಯೇ ಇದ್ದು ಅವರ ನಿವ್ವಳ ಮೌಲ್ಯ 922 ಕೋಟಿ ರೂಪಾಯಿ ಆಗಿದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್‌, ವಿರಾಟ್‌ ಕೊಹ್ಲಿ ಹಾಗೂ ಎಂಎಸ್‌ ಧೋನಿ ಸಾಕಷ್ಟು ಪ್ರಖ್ಯಾತ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದರೂ, ಗಿಲ್‌ಕ್ರಿಸ್ಟ್‌ಗಿಂತ ಕಡಿಮೆ ಮೌಲ್ಯವನ್ನು ಹೊಂದಿದ್ದಾರೆ.

2021ರ ಟಾಪ್‌ 5 ಶ್ರೀಮಂತ ಕ್ರಿಕೆಟಿಗರಿವರು; ವಿರಾಟ್ ಕೊಹ್ಲಿಗೆ 3ನೇ ಸ್ಥಾನ..!

ಟೀಮ್‌ ಇಂಡಿಯಾ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಹಾಗೂ ವೀರೇಂದ್ರ ಸೆಹ್ವಾಗ್‌ ಕೂಡ ವಿಶ್ವದ ಅಗ್ರ 10 ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ. ಯುವರಾಜ್‌ ಸಿಂಗ್‌ 288 ಕೋಟಿ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದ್ದರೆ, ವೀರೇಂದ್ರ ಸೆಹ್ವಾಗ್‌ 329 ಕೋಟಿಯೊಂದಿಗೆ 8ನೇ ಸ್ಥಾನದಲ್ಲಿದ್ದಾರೆ ಎಂದು ವಿವರಿಸಲಾಗಿದೆ.

2023ರ ವೇಳೆಗೆ ವಿಶ್ವದ ಶ್ರೀಮಂತ ಕ್ರಿಕೆಟಿಗರು (ಆಧಾರ: ಸಿಇಒ ವರ್ಲ್ಡ್‌ ಮ್ಯಾಗಝೀನ್‌)

ಆಟಗಾರದೇಶಅಂದಾಜು ಮೌಲ್ಯ
ಆಡಂ ಗಿಲ್‌ಕ್ರಿಸ್ಟ್‌ಆಸ್ಟ್ರೇಲಿಯಾ3130 ಕೋಟಿ
ಸಚಿನ್‌ ತೆಂಡುಲ್ಕರ್‌ಭಾರತ1400 ಕೋಟಿ
ಎಂಎಸ್‌ ಧೋನಿಭಾರತ947 ಕೋಟಿ
ವಿರಾಟ್‌ ಕೊಹ್ಲಿಭಾರತ922 ಕೋಟಿ
ರಿಕಿ ಪಾಂಟಿಂಗ್‌ಆಸ್ಟ್ರೇಲಿಯಾ576 ಕೋಟಿ
ಜಾಕ್ಸ್‌ ಕಾಲಿಸ್‌ದಕ್ಷಿಣ ಆಫ್ರಿಕಾ576 ಕೋಟಿ
ಬ್ರಿಯಾನ್‌ ಲಾರಾವೆಸ್ಟ್‌ ಇಂಡೀಸ್‌494 ಕೋಟಿ
ವೀರೇಂದ್ರ ಸೆಹ್ವಾಗ್‌ಭಾರತ329 ಕೋಟಿ
ಯುವರಾಜ್‌ ಸಿಂಗ್‌ಭಾರತ288 ಕೋಟಿ
ಸ್ಟೀವ್‌ ಸ್ಮಿಆಸ್ಟ್ರೇಲಿಯಾ247 ಕೋಟಿ