Wrestlers Protest: 'ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ'

ಕುಸ್ತಿಪಟುಗಳ ಹೋರಾಟದ ಬಗ್ಗೆ ಮೌನ ಮುರಿದ ಅನುರಾಗ್ ಠಾಕೂರ್
ಕೇಂದ್ರ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸುತ್ತಿದೆ ಎಂದ ಕ್ರೀಡಾ ಸಚಿವ
ಬ್ರಿಜ್‌ಭೂಷಣ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳು

Centre Handling Issue Of Protesting Wrestlers Sensitively Says minister Anurag Thakur kvn

ಮುಂಬೈ(ಜೂ.01): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್ ಸಿಂಗ್, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಕಳೆದೊಂದ ತಿಂಗಳಿನಿಂದ ಕುಸ್ತಿಪಟುಗಳು, ಬ್ರಿಜ್‌ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್, ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರವು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.

ಮುಂಬೈಗೆ ಭೇಟಿ ನೀಡಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅನುರಾಗ್ ಠಾಕೂರ್, ಕುಸ್ತಿಪಟುಗಳ ಬೇಡಿಕೆಯಂತೆಯೇ ಸರ್ಕಾರವು ಆರೋಪಿಯ ವಿರುದ್ದ ತನಿಖೆ ನಡೆಸಲು ಕಮಿಟಿಯೊಂದನ್ನು ರಚಿಸಿದೆ. ಸದ್ಯ ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ.

ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್, ಭಜರಂಗ್ ಪೂನಿಯಾ, ಸಂಗೀತಾ ಪೋಗಾಟ್ ಸೇರದಿಂತೆ ಹಲವಾರು ಒಲಿಂಪಿಕ್‌ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ ಕುಸ್ತಿಪಟುಗಳು, ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ಬ್ರಿಜ್‌ಭೂಷಣ್ ಬಂಧಿಸಲು ವಿಫಲವಾದ ಬೆನ್ನಲ್ಲೇ ಕುಸ್ತಿಪಟುಗಳು ತಾವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಯಿಸಿದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವ ಬೆದರಿಕೆಯನ್ನು ಒಡ್ಡಿದ್ದರು. 

Wrestlers Protest: ಬ್ರಿಜ್‌ಭೂಷಣ್‌ಗೆ ದೆಹಲಿ ಪೊಲೀಸ್‌ ಕ್ಲೀನ್‌ಚಿಟ್‌?

"ಸರ್ಕಾರವು ಕುಸ್ತಿಪಟುಗಳ ಪ್ರತಿಭಟನೆ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಿದೆ. ಕುಸ್ತಿಪಟುಗಳ ಆರೋಪಿಯ ವಿರುದ್ದ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿದ್ದರು, ಅದರಂತೆ ಡೆಲ್ಲಿ ಪೊಲೀಸರು ಎಫ್‌ಐಆರ್ ಕೂಡಾ ದಾಖಲಿಸಿದ್ದಾರೆ" ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ ಸಂಪರ್ಕಿಸಲು ಕುಸ್ತಿಪಟುಗಳಿಗೆ ಸುಪ್ರೀಂ ಕೋರ್ಟ್ ಕೂಡಾ ನಿರ್ದೇಶನ ಮಾಡಿದೆ ಎಂದು ಅವರು ಹೇಳಿದ್ದಾರೆ.

ಬ್ರಿಜ್‌​ಭೂ​ಷಣ್‌ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋ​ಪ​ಗ​ಳನ್ನು ಹೊರಿ​ಸಿದ್ದ ಕುಸ್ತಿ​ಪ​ಟು​ಗಳು, ಏ.23ರಿಂದ ಜಂತ​ರ್‌​ಮಂತ​ರ್‌​ನಲ್ಲಿ ಧರ​ಣಿ ಆರಂಭಿ​ಸಿ​ ಹೋರಾಟ ತೀವ್ರ​ಗೊ​ಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್‌​ಭೂ​ಷಣ್‌ ವಿರುದ್ಧ ಪೋಕ್ಸೋ ಸೇರಿ​ದಂತೆ 2 ಎಫ್‌​ಐ​ಆರ್‌ ದಾಖ​ಲಿಸಿ ದೆಹಲಿ ಪೊಲೀ​ಸರು ವಿಚಾ​ರಣೆ ಆರಂಭಿ​ಸಿ​ದ್ದರು. ದೂರು ನೀಡಿದ್ದ ಅಪ್ರಾ​ಪ್ತೆ​ಯರ ಹೇಳಿ​ಕೆ​ಗ​ಳನ್ನೂ ದಾಖ​ಲಿ​ಸ​ಲಾ​ಗಿತ್ತು.

ದುಡು​ಕ​ಬೇಡಿ, ಕಾಯಿ​ರಿ: ಕ್ರೀಡಾ ಸಚಿ​ವ ಠಾಕೂ​ರ್‌

ಪ್ರಕ​ರ​ಣದ ಬಗ್ಗೆ ಬುಧವಾರ ಮೌನ ಮುರಿ​ದಿ​ರುವ ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂರ್‌, ‘ಪೊಲೀಸರು ತನಿಖೆ ನಡೆ​ಸು​ತ್ತಿ​ದ್ದಾರೆ. ಅದು​ವ​ರೆಗೂ ಕ್ರೀಡೆ ಹಾಗೂ ಕ್ರೀಡಾ​ಳು​ಗ​ಳಿಗೆ ತೊಂದ​ರೆ​ಯಾ​ಗುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿ​ದ್ದಾ​ರೆ. ‘ಪೊ​ಲೀ​ಸ​ರ ತನಿ​ಖೆ​ಯಲ್ಲಿ ನಂಬಿಕೆ ಇಡಿ, ನಾವೂ ನಿಮ್ಮ ಜೊತೆ​ಗಿ​ದ್ದೇವೆ. ಆರೋಪ ಸಾಬೀ​ತಾ​ದರೆ ಕಠಿಣ ಶಿಕ್ಷೆ ನೀಡು​ತ್ತೇವೆ. ಕ್ರೀಡೆ​ಗಾಗಿ ಸರ್ಕಾರ ಸಾಕಷ್ಟುಶ್ರಮ ವಹಿ​ಸು​ತ್ತಿದೆ’ ಎಂದಿ​ದ್ದರು.

Latest Videos
Follow Us:
Download App:
  • android
  • ios