ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಮಹತ್ವದ ಪಂದ್ಯಐರ್ಲೆಂಡ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆಭಾರತ ತಂಡದಲ್ಲಿ ಒಂದು ಬದಲಾವಣೆ

ಕೇಪ್‌ಟೌನ್‌(ಫೆ.20): ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಂದು ಭಾರತ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕ ಹರ್ಮನ್‌ಪ್ರೀತ್ ಕೌರ್, ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು,ರಾಧಾ ಯಾದವ್ ಬದಲಿಗೆ ದೇವಿಕಾ ವೈದ್ಯ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ತಂಡದ ಪರ ಸ್ಮೃತಿ ಮಂಧನಾ, ರಿಚಾ ಘೋಷ್‌ ಅದ್ಭುತ ಬ್ಯಾಟಿಂಗ್ ಮೂಲಕ ಮಿಚುತ್ತಿದ್ದಾರೆ. ಇವರಿಗೆ ಶಫಾಲಿ ವರ್ಮಾ ಜೆಮಿಮಾ ರೋಡ್ರಿಗ್ಸ್‌, ದೀಪ್ತಿ ಶರ್ಮಾ, ಹರ್ಮನ್‌ಪ್ರೀತ್ ಕೌರ್, ಪೂಜಾ ವಸ್ತ್ರಾಕರ್‌ ಉತ್ತಮ ಸಾಥ್ ನೀಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಕಳೆದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿ ಮಿಂಚಿದ್ದರು. ಇಂದು ಭಾರತ ಸಂಘಟಿತ ಪ್ರದರ್ಶನ ತೋರಿದರೆ, ಐರ್ಲೆಂಡ್ ಎದುರು ಗೆಲುವು ದಾಖಲಿಸುವುದು ಕಷ್ಟವೇನಲ್ಲ.

ICC Women's T20 World Cup: ಭಾರತಕ್ಕೆ ಇಂದು ಐರ್ಲೆಂಡ್‌ ಸವಾ​ಲು, ಸೆಮೀಸ್‌ ಪ್ರವೇಶಿಸುವ ಗುರಿ

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು 'ಬಿ' ಗುಂಪಿನಲ್ಲಿ ಸದ್ಯ ಮೂರು ಪಂದ್ಯಗಳನ್ನಾಡಿ ಎರಡು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂದು ಐರ್ಲೆಂಡ್ ಎದುರು ಗೆಲುವು ಸಾಧಿಸಿದರೆ, ಸೆಮಿಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಈಗಾಗಲೇ 'ಬಿ' ಗುಂಪಿನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಇಂಗ್ಲೆಂಡ್ ತಂಡವು ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

Scroll to load tweet…

ಇನ್ನೊಂದೆಡೆ ಐರ್ಲೆಂಡ್ ತಂಡವು ತಾನಾಡಿದ ಮೂರೂ ಪಂದ್ಯಗಳಲ್ಲೂ ಸೋಲಿನ ಕಹಿಯುಂಡಿದ್ದು, ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಗೆದ್ದು, ಗೆಲುವಿನೊಂದಿಗೆ ತಮ್ಮ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ. ಒಂದು ವೇಳೆ ಐರ್ಲೆಂಡ್ ಎದುರು ಭಾರತ ಮುಗ್ಗರಿಸಿದರೆ, ಉಳಿದ ಪಂದ್ಯದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಸೆಮೀಸ್‌ ಹಾದಿ ತೀರ್ಮಾನವಾಗಲಿದೆ.

ತಂಡಗಳು ಹೀಗಿವೆ ನೋಡಿ:

ಭಾರತ:

ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌, ಹರ್ಮನ್‌ಪ್ರೀತ್ ಕೌರ್(ನಾಯಕಿ), ರಿಚಾ ಘೋಷ್(ವಿಕೆಟ್ ಕೀಪರ್), ದೇವಿಕಾ ವೈದ್ಯ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್

ಐರ್ಲೆಂಡ್‌:

ಆಮಿ ಹಂಟರ್, ಗ್ಯಾಬೆ ಲೆವಿಸ್, ಓರ್ಲಾ ಪ್ರೆಂಡರ್‌ಗಸ್ಟ್‌, ಎಲ್ಮೀರ್ ರಿಚರ್ಡ್‌ಸನ್, ಲೌಸಿ ಲಿಟ್ಲ್, ಲೌರಾ ಡೆಲ್ನೇ(ನಾಯಕಿ), ಅರ್ಲೇನೆ ಕೆಲ್ಲೇ, ಮೇರಿ ವಾಲ್ಡರ್ನ್‌(ವಿಕೆಟ್ ಕೀಪರ್), ಲೇಹ್ ಪೌಲ್, ಕಾರಾ ಮುರ್ರೆ, ಜಾರ್ಜೆನಿಯಾ ಡೆಮ್ಸೇ.