ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಂದು ಮಹತ್ವದ ಪಂದ್ಯಸೆಮೀಸ್ ಪ್ರವೇಶಿಸುವವ ಹೊಸ್ತಿಲಲ್ಲಿದೆ ಹರ್ಮನ್‌ಪ್ರೀತ್ ಕೌರ್ ಪಡೆಐರ್ಲೆಂಡ್ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ

ಕೇಪ್‌​ಟೌ​ನ್‌(ಫೆ.20): ಐಸಿಸಿ ಮಹಿಳಾ ಟಿ20 ವಿಶ್ವ​ಕ​ಪ್‌​ನ ಸೆಮಿ​ಫೈ​ನಲ್‌ ರೇಸ್‌​ನಲ್ಲಿ ಉಳಿ​ಯಲು ಕಾತ​ರಿ​ಸು​ತ್ತಿ​ರುವ ಕಳೆದ ಬಾರಿ ರನ್ನ​ರ್‌-ಅಪ್‌ ಭಾರತ ಸೋಮ​ವಾರ ಮಾಡು ಇಲ್ಲವೇ ಮಡಿ ಪಂದ್ಯ​ದ​ಲ್ಲಿ ಐರ್ಲೆಂಡ್‌ ವಿರುದ್ಧ ಸೆಣ​ಸಲಿದೆ. ಪಾಕಿ​ಸ್ತಾನ, ವೆಸ್ಟ್‌​ಇಂಡೀಸ್‌ ವಿರುದ್ಧ ಗೆದ್ದಿದ್ದ ಭಾರತ, ಕಳೆದ ಪಂದ್ಯ​ದಲ್ಲಿ ಇಂಗ್ಲೆಂಡ್‌ಗೆ ಶರ​ಣಾ​ಗಿತ್ತು. 

ಭಾರತ ಸದ್ಯ 4 ಅಂಕ​ಗ​ಳೊಂದಿಗೆ ‘ಬಿ​’ ಗುಂಪಿ​ನ​ಲ್ಲಿ 2ನೇ ಸ್ಥಾನ​ದ​ಲ್ಲಿದ್ದರೂ ಕಳಪೆ ನೆಟ್‌ ರನ್‌ರೇಟ್‌ ಹೊಂದಿದೆ. ಹೀಗಾಗಿ, ಐರ್ಲೆಂಡ್‌ ವಿರುದ್ಧ ದೊಡ್ಡ ಗೆಲು​ವಿನ ಅಗ​ತ್ಯ​ವಿದೆ. ಒಂದು ವೇಳೆ ಸೋತರೆ ಸೆಮೀಸ್‌ಗೇರುವ ಕನಸು ಬಹುತೇಕ ಭಗ್ನಗೊಳ್ಳಲಿದೆ.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಭಾರತ ತಂಡವು 11 ರನ್‌ಗಳ ರೋಚಕ ಸೋಲು ಅನುಭವಿಸಿತ್ತು. ಭಾರತ ತಂಡದ ಪರ ಸ್ಮೃತಿ ಮಂಧನಾ ಹಾಗೂ ರಿಚಾ ಘೋಷ್ ಆಕರ್ಷಕ ಬ್ಯಾಟಿಂಗ್ ನಡೆಸುವ ಗಮನ ಸೆಳೆದಿದ್ದರು. ಹೀಗಿದ್ದೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕ್ರಮಾಂಕ ವೈಫಲ್ಯ ಅನುಭವಿಸಿದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. 

ಪಂದ್ಯ: ಸಂಜೆ 6.30ಕ್ಕೆ
ನೇರ​ಪ್ರ​ಸಾ​ರ: ಸ್ಟಾರ್‌​ಸ್ಪೋ​ರ್ಟ್ಸ್‌

ಮಹಿಳಾ ಟಿ20 ವಿಶ್ವ​ಕ​ಪ್‌: ಆಸ್ಪ್ರೇ​ಲಿಯಾ ಸೆಮೀ​ಸ್‌​ಗೆ

ಕೇಪ್‌​ಟೌ​ನ್‌: 5 ಬಾರಿ ಚಾಂಪಿ​ಯನ್‌ ಆಸ್ಪ್ರೇ​ಲಿಯಾ ಐಸಿಸಿ ಮಹಿಳಾ ಟಿ20 ವಿಶ್ವ​ಕ​ಪ್‌​ನಲ್ಲಿ ಸತತ 4ನೇ ಗೆಲು​ವಿ​ನೊಂದಿಗೆ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿದೆ. 8 ಗುಂಪಿ​ನೊಂದಿಗೆ ‘ಎ’ ಗುಂಪಿ​ನಲ್ಲಿ ಅಗ್ರ​ಸ್ಥಾ​ನಿ​ಯಾದ ಆಸೀಸ್‌, ಅಂತಿಮ 4ರ ಘಟ್ಟತಲು​ಪಿದ ಮೊದಲ ತಂಡ ಎನಿ​ಸಿ​ಕೊಂಡಿತು. 

ಆಸ್ಟ್ರೇಲಿಯಾ ವಿರುದ್ಧ ಕೊನೇ 2 ಟೆಸ್ಟ್‌, ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ರಾಹುಲ್‌ಗೆ ಶಾಕ್‌!

ಶನಿ​ವಾರ ರಾತ್ರಿ ನಡೆದ ಪಂದ್ಯ​ದಲ್ಲಿ ದ.ಆ​ಫ್ರಿಕಾ ವಿರುದ್ಧ ಆಸೀಸ್‌ 6 ವಿಕೆಟ್‌ ಗೆಲುವು ಸಾಧಿ​ಸಿತು. ಮೊದಲು ಬ್ಯಾಟ್‌ ಮಾಡಿದ ದ.ಆ​ಫ್ರಿಕಾ 6 ವಿಕೆ​ಟ್‌ಗೆ 124 ರನ್‌ ಕಲೆ​ಹಾ​ಕಿತು. ಸುಲಭ ಗುರಿ ಬೆನ್ನ​ತ್ತಿದ ಆಸೀಸ್‌ ಕೇವಲ 16.3 ಓವ​ರ್‌​ಗ​ಳಲ್ಲಿ ಜಯ ತನ್ನ​ದಾ​ಗಿ​ಸಿತು. ತಹಿಲಾ ಮೆಗ್ರಾ​ಥ್‌​(57) ಗೆಲುವಿ ರೂವಾರಿ ಎನಿ​ಸಿ​ದರು.

ಪ್ರಧಾನಿ ಮ್ಯೂಸಿಯಂಗೆ ರೋಹಿತ್‌ ಶರ್ಮಾ ಪಡೆ ಭೇಟಿ

ನವ​ದೆಹ​ಲಿ: ಆಸ್ಪ್ರೇ​ಲಿಯಾ ವಿರು​ದ್ಧದ 2ನೇ ಟೆಸ್ಟ್‌ ಬಳಿಕ ಭಾರ​ತೀಯ ಆಟ​ಗಾ​ರರು ನವ​ದೆ​ಹ​ಲಿ​ಯ​ಲ್ಲಿ​ರುವ ಪ್ರಧಾ​ನ​ಮಂತ್ರಿ ವಸ್ತು ಸಂಗ್ರ​ಹಾ​ಲ​ಯಕ್ಕೆ ಭೇಟಿ ನೀಡಿ​ದರು. ರೋಹಿತ್‌, ವಿರಾಟ್‌, ದ್ರಾವಿಡ್‌ ಸೇರಿ​ದಂತೆ ಎಲ್ಲಾ ಆಟ​ಗಾ​ರ​ರು ಕೆಲ​ಹೊತ್ತು ಮ್ಯೂಸಿ​ಯಂನಲ್ಲಿರುವ ಅಪರೂಪದ ವಸ್ತು, ಫೋಟೋಗಳನ್ನು ನೋಡಿ ಅವುಗಳ ಬಗ್ಗೆ ಮಾಹಿತಿ ಪಡೆದರು. ಸ್ವಾತಂತ್ರ್ಯ ನಂತ​ರ ಭಾರ​ತ​ದ ಪಯಣ, ಎಲ್ಲಾ ಪ್ರಧಾ​ನಿ​ಗಳ ವಿವ​ರ​ಗ​ಳಿ​ರುವ ಸಂಗ್ರ​ಹಾ​ಲ​ಯ​ವನ್ನು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಉದ್ಘಾ​ಟಿ​ಸಿ​ದ್ದರು.

ಮೇ 14ಕ್ಕೆ ಚಿಪಾ​ಕ್‌​ನ​ಲ್ಲಿ ಧೋನಿಗೆ ಕೊನೆ ಪಂದ್ಯ?

ಚೆನ್ನೈ: ಎಂ.ಎ​ಸ್‌.​ಧೋನಿ ಚೆನ್ನೈನ ಚಿಪಾಕ್‌ ಕ್ರೀಡಾಂಗ​ಣ​ದಲ್ಲಿ ಮೇ 14ರಂದು ಕೋಲ್ಕತಾ ವಿರುದ್ಧ ತಮ್ಮ ಕೊನೆ ಐಪಿ​ಎಲ್‌ ಪಂದ್ಯ​ವಾ​ಡುವ ಸಾಧ್ಯತೆ ಇದೆ ಎಂದು ಚೆನ್ನೈ ಫ್ರಾಂಚೈಸಿ ಮೂಲ​ಗಳು ತಿಳಿ​ಸಿ​ದ್ದಾಗಿ ವರ​ದಿ​ಯಾ​ಗಿದೆ. ಧೋನಿ ಮುಂದಿನ ವರ್ಷ ಐಪಿ​ಎ​ಲ್‌​ನಲ್ಲಿ ಕಣ​ಕ್ಕಿ​ಳಿ​ಯುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಈ ಬಾರಿ ಚೆನ್ನೈ ಪ್ಲೇ-ಆಫ್‌ ಪ್ರವೇ​ಶಿ​ಸ​ದಿ​ದ್ದರೆ ಮೇ 14ರ ಲೀಗ್‌ ಹಂತದ ಕೊನೆ ಪಂದ್ಯ ಧೋನಿ ಪಾಲಿಗೆ ವಿದಾ​ಯದ ಪಂದ್ಯ​ವಾ​ಗುವ ಸಾಧ್ಯತೆ ಇದೆ ಎಂದು ತಿಳಿ​ದು​ಬಂದಿ​ದೆ.

ಧೋನಿ 2008ರ ಚೊಚ್ಚಲ ಆವೃ​ತ್ತಿ​ಯಿಂದಲೂ ತಂಡಕ್ಕೆ ನಾಯ​ಕತ್ವ ವಹಿ​ಸು​ತ್ತಿದ್ದು, ಕಳೆದ ಆವೃ​ತ್ತಿ​ಯಲ್ಲಿ ಜಡೇಜಾ ನಾಯ​ಕತ್ವ ಬಿಟ್ಟು​ಕೊ​ಟ್ಟರೂ ಮತ್ತೆ ನಾಯ​ಕ​ನಾಗಿ ಮುಂದು​ವ​ರಿ​ದಿ​ದ್ದರು.