Asianet Suvarna News Asianet Suvarna News

Virat Kohli ನಾಯಕತ್ವ ಕಳೆದುಕೊಂಡ ಬಳಿಕವೂ ಕಂಪೆನಿಗಳಿಗೆ ವಿರಾಟ್ ಕೊಹ್ಲಿಯೇ ಫೇವರಿಟ್‌..!

* ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದರೂ ತಗ್ಗದ ವಿರಾಟ್ ಕೊಹ್ಲಿ ಜನಪ್ರಿಯತೆ

* ಈಗಲೂ ಹಲವು ಕಂಪನಿಗಳ ಪಾಲಿಗೆ ಕೊಹ್ಲಿಯೇ ಫೇವರಿಟ್‌ ಆಟಗಾರರ

* 2021ರಲ್ಲಿ ಸುಮಾರು 178.77 ಕೋಟಿ ರುಪಾಯಿಗಳನ್ನು ಜಾಹಿರಾತಿನಿಂದಲೇ ಗಳಿಸಿರುವ ಕೊಹ್ಲಿ

Captaincy Resignation No Negative impact on Brands Value with Virat Kohli kvn
Author
Bengaluru, First Published Jan 19, 2022, 3:29 PM IST

ನವದೆಹಲಿ(ಜ.19): ಟೀಂ ಇಂಡಿಯಾದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಹೊರತಾಗಿಯೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಈಗಲೂ ಹಲವು ಕಂಪೆನಿಗಳಿಗೆ ಫೇವರಿಟ್‌ ಆಗಿದ್ದು, ಜಾಹೀರಾತುಗಳ ಮೂಲಕ ಅತೀ ಹೆಚ್ಚಿನ ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. ವರದಿಗಳ ಪ್ರಕಾರ, ಕೊಹ್ಲಿಯ ಜಾಹೀರಾತು ಮೌಲ್ಯದಲ್ಲಿ ಅವರು ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ನಂತರವೂ ಯಾವುದೇ ಬದಲಾಗಿಲ್ಲ. ಹಲವು ಕಂಪೆನಿಗಳ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಕೊಹ್ಲಿ, ಅದರ ಮೂಲಕವೇ 2021ರಲ್ಲಿ ಸುಮಾರು 178.77 ಕೋಟಿ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊಹ್ಲಿ ಪೂಮಾ(PUMA), ಎಂಆರ್‌ಎಫ್‌(MRF), ಅಮೆರಿಕನ್‌ ಟೂರಿಸ್ಟರ್‌ ಸೇರಿದಂತೆ ವಿವಿಧ ಪ್ರಮುಖ 30 ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ನಾಯಕತ್ವ ತ್ಯಜಿಸಿದ್ದರೂ ಕಂಪೆನಿಗಳು ಒಪ್ಪಂದ ಮುಂದುವರಿಸಿದ್ದು, ಕೊಹ್ಲಿಯನ್ನೇ ನೆಚ್ಚಿನ ಸೆಲೆಬ್ರಿಟಿಯಾಗಿ ಆಯ್ಕೆ ಮಾಡಿಕೊಂಡಿವೆ ಎಂದು ವರದಿಯಾಗಿದೆ.

ಯುಎಇನಲ್ಲಿ ನಡೆದ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯು ಮುಕ್ತಾಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ಇದಾದ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಬಿಸಿಸಿಐ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕನ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೂ ವಿದಾಯ ಘೋಷಿಸಿದ್ದಾರೆ.

ಟೆಸ್ಟ್‌ ನಾಯಕತ್ವಕ್ಕೆ ಸಿದ್ಧ ಎಂದ ಕೆ.ಎಲ್. ರಾಹುಲ್

ಅತ್ತ ಟೀಂ ಇಂಡಿಯಾದ ಟೆಸ್ಟ್‌ ತಂಡದ ಹೊಸ ನಾಯಕನ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದು, ಇದೇ ವೇಳೆ ಕೆ.ಎಲ್‌.ರಾಹುಲ್‌ (KL Rahul) ಕೂಡ ಟೆಸ್ಟ್‌ ತಂಡದ ನಾಯಕನಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ  ಗಾಯಗೊಂಡ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ರಾಹುಲ್‌ ಮುನ್ನಡೆಸಿದ್ದರು.

Ind vs SA: ದಾದಾ, ದ್ರಾವಿಡ್‌, ಸಚಿನ್‌ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದರುವ ರಾಹುಲ್‌, ಜೋಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಿದ ವಿಶೇಷ ಅನುಭವ ನನ್ನಲ್ಲಿದೆ. ಫಲಿತಾಂಶ ನಮ್ಮ ಪರವಾಗಿರಲಿಲ್ಲ. ಆದರೆ, ನನ್ನ ಪಾಲಿಗೆ ಅದು ಅದ್ಭುತ ಅನುಭವ. ಈ ಬಗ್ಗೆ ಸದಾ ಹೆಮ್ಮೆ ಅನುಭವ ನನ್ನಲ್ಲಿ ಇರಲಿದೆ. ಭಾರತ ತಂಡವನ್ನು ಮುನ್ನಡೆಸುವ ಯಾರೊಬ್ಬರಿಗೂ ವಿಶೇಷ ಅನುಭವ ತಂದುಕೊಡುತ್ತದೆ. ನನಗೂ ಈ ಅನುಭವ ದೊರೆತಿದೆ. ನನಗೆ ಟೆಸ್ಟ್‌ ತಂಡದ ನಾಯಕತ್ವ ದೊರೆತರೆ ಅದು ಬಹುದೊಡ್ಡ ಜವಾಬ್ದಾರಿ. ಈ ಬಗ್ಗೆ ಬಹಳ ಉತ್ಸುಕನಾಗಿದ್ದೇನೆ. ಈಗ ಅದರ ಬಗ್ಗೆ ನಾನು ಯೋಚಿಸುವುದಿಲ್ಲ. ಸದ್ಯ ನನ್ನ ಗಮನ ಏಕದಿನ ಸರಣಿ ಮೇಲಿದೆ ಎಂದಿದ್ದಾರೆ.

ಬಿಗ್‌ಬ್ಯಾಶ್‌ ಲೀಗಲ್ಲಿ ಆಡಿದ ಉನ್ಮುಕ್ತ್  ಚಾಂದ್‌‌: ಮೊದಲ ಭಾರತೀಯ

ಮೆಲ್ಬರ್ನ್‌: ಆಸ್ಪ್ರೇಲಿಯಾದ ದೇಸಿ ಟಿ20 ಕ್ರಿಕೆಟ್‌ ಲೀಗ್‌ ಬಿಗ್‌ಬ್ಯಾಶ್‌ನಲ್ಲಿ (Big Bash League) ಆಡಲು ಭಾರತದ ತಾರಾ ಬ್ಯಾಟರ್‌ ಉನ್ಮುಕ್ತ್  ಚಾಂದ್‌ಗೆ ಅವಕಾಶ ಸಿಕ್ಕಿದ್ದು, ಈ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರ ಹೋಬರ್ಟ್‌ ಹರಿಕೇನ್ಸ್‌ ವಿರುದ್ಧದ ಪಂದ್ಯದಲ್ಲಿ ಚಾಂದ್‌ ಮೆಲ್ಬರ್ನ್‌ ರೆನೆಗೇಡ್ಸ್‌ ಪರ ಆಡಿದರು. 28 ವರ್ಷದ ಚಾಂದ್‌ 2012ರಲ್ಲಿ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡದ ನಾಯಕರಾಗಿದ್ದರು. 2021ರಲ್ಲಿ ಭಾರತೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ಮಧ್ಯರಾತ್ರಿ ಪಾರ್ಟಿ ನಡೆಸಿದ ರೂಟ್‌, ಜಿಮ್ಮಿ ವಿರುದ್ಧ ತನಿಖೆ

ಲಂಡನ್‌: ಆ್ಯಷಸ್‌ ಟೆಸ್ಟ್‌ ಸರಣಿ (Ashes Test Series) ಬಳಿಕ ಮಧ್ಯರಾತ್ರಿ ಹೋಟೆಲ್‌ನಲ್ಲಿ ಪಾರ್ಟಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ನಾಯಕ ಜೋ ರೂಟ್‌ ಹಾಗೂ ಹಿರಿಯ ವೇಗಿ ಜೇಮ್ಸ್‌ ಆ್ಯಂಡರ್‌ಸನ್‌ ವಿರುದ್ಧ ತನಿಖೆ ಆರಂಭಿಸಿದೆ. ಆಟಗಾರರು ಆಸ್ಪ್ರೇಲಿಯಾದ ಟ್ರ್ಯಾವಿಸ್‌ ಹೆಡ್‌, ಲಯನ್‌, ಅಲೆಕ್ಸ್‌ ಕ್ಯಾರಿ ಜೊತೆ ಹೋಟೆಲ್‌ನಲ್ಲಿ ಪಾರ್ಟಿ ನಡೆಸಿದ್ದು, ಇತರರಿಂದ ದೂರು ಬಂದ ಕಾರಣ ಪೊಲೀಸರು ಸ್ಥಳಕ್ಕಾಗಮಿಸಿ ಆಟಗಾರರನ್ನು ತಮ್ಮ ಕೋಣೆಗೆ ಕಳುಹಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದು ಇಸಿಬಿ ಮಾಹಿತಿ ನೀಡಿದೆ.

Follow Us:
Download App:
  • android
  • ios