ನವದೆಹಲಿ(ಫೆ.07): ಫುಟ್ಬಾಲ್‌, ರಗ್ಬಿಯಂತಹ ಕ್ರೀಡೆಗಳನ್ನು ಅತ್ಯಂತ ಕಠಿಣ ಕ್ರೀಡೆಗಳೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಪ್ರತಿ ಬಾರಿ ಆಟಗಾರರ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ. ಆಟಗಾರರು ಪಂದ್ಯದುದ್ದಕ್ಕೂ ಓಡುತ್ತಲೇ ಇರುತ್ತಾರೆ. ಕ್ರಿಕೆಟಿಗರು ಇಷ್ಟೆಲ್ಲಾ ಓಡುವ ಅವಶ್ಯಕತೆ ಇಲ್ಲ ಎನ್ನುವುದು ಸಾಮಾನ್ಯವಾಗಿ ಎಲ್ಲರಲ್ಲೂ ಇರುವ ನಂಬಿಕೆ.

ಆದರೆ ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ.ಎಸ್‌.ಕೆ.ಪ್ರಸಾದ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ವಿಶ್ವ ಶ್ರೇಷ್ಠ ಫುಟ್ಬಾಲಿಗರಾದ ಲಿಯೋನೆಲ್‌ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋಗಿಂತ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ವೇಳೆ ಹೆಚ್ಚು ಓಡುತ್ತಾರೆ ಎಂದಿದ್ದಾರೆ.

ಭಾರತದ ಟಾಪ್ ಸೆಲೆಬ್ರೆಟಿ ಯಾರು? ಸಮಿಕ್ಷೆ ವರದಿ ಬಹಿರಂಗ!

ಪ್ರತಿ ಪಂದ್ಯದ ವೇಳೆ ಫುಟ್ಬಾಲಿಗರು 90 ನಿಮಿಷಗಳಲ್ಲಿ 8 ರಿಂದ 13 ಕಿಲೋ ಮೀಟರ್‌ನಷ್ಟುಓಡುತ್ತಾರೆ. ಮಿಡ್‌ಫೀಲ್ಡರ್‌ಗಳು ಅಟ್ಯಾಕ್‌ ಹಾಗೂ ಡಿಫೆನ್ಸ್‌ ಎರಡರಲ್ಲೂ ಪಾಲ್ಗೊಳ್ಳುವ ಕಾರಣ, ಅವರು ಹೆಚ್ಚು ಓಡಬೇಕಾಗುತ್ತದೆ. ಆದರೆ ಮೆಸ್ಸಿ, ರೊನಾಲ್ಡೋರಂತಹ ಫಾರ್ವರ್ಡ್‌ ಆಟಗಾರರು ಸರಾಸರಿ 7.6ರಿಂದ 8.3 ಕಿ.ಮೀ ಓಡುತ್ತಾರೆ. ಆದರೆ ಪ್ರಸಾದ್‌ ಪ್ರಕಾರ, ದೊಡ್ಡ ಇನ್ನಿಂಗ್ಸ್‌ ಆಡುವ ವೇಳೆ ಕೊಹ್ಲಿ ಸರಾಸರಿ 17 ಕಿ.ಮೀ ಓಡುತ್ತಾರೆ.

‘ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರುವ ಪ್ರತಿ ಆಟಗಾರನ ಕೆಲಸದ ಒತ್ತಡವನ್ನು ನಾವು ಜಿಪಿಎಸ್‌ ತಂತ್ರಜ್ಞಾನದ ಸಹಾಯದಿಂದ ಗಮನಿಸುತ್ತೇವೆ. ಅಭ್ಯಾಸದ ವೇಳೆಯಾಗಿರಲಿ, ಆಟದ ವೇಳೆಯಾಗಿರಲಿ ಆಟಗಾರರ ಕೆಲಸದ ಒತ್ತಡದ ದತ್ತಾಂಶವನ್ನು ಸಂಗ್ರಹಿಸುತ್ತೇವೆ. ಪ್ರತಿ ಅಂತಾರಾಷ್ಟ್ರೀಯ ತಂಡವು ಈ ಕ್ರಮ ಅನುಸರಿಸುತ್ತವೆ’ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕೆಎಲ್ ರಾಹುಲ್‌ಗೆ ಕೆಳಕ್ರಮಾಂಕ; ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ!

ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಉತ್ಕೃಷ್ಟ ಫಿಟ್ನೆಸ್‌ ಹೊಂದಿರುವ ಆಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಭಾರತ ತಂಡದ ಫಿಟ್ನೆಸ್‌ ಗುಣಮಟ್ಟ ಏರಿಕೆಯಾಗುವುದರಲ್ಲಿ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಫುಟ್ಬಾಲಿಗರಿಗಿಂತ ಹೆಚ್ಚು ಓಡಲಿದ್ದಾರೆ ಎನ್ನುವ ಸುದ್ದಿ ಕ್ರಿಕೆಟ್‌ ಆಟದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಕ್ರಿಕೆಟ್‌ ತಜ್ಞರು ಅಭಿಪ್ರಾಯಿಸಿದ್ದಾರೆ.