ಕಳೆದ 14 ತಿಂಗಳಿನಿಂದ ಶತಕದ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಶತಕ ಸಿಡಿಸಲು ಕಾತರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.04): ರನ್ ಮಷಿನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ 14 ತಿಂಗಳುಗಳೇ ಕಳೆದಿವೆ. 2020ರಲ್ಲಿ ಒಂದೂ ಶತಕ ಬಾರಿಸದ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸೆಂಚುರಿ ಸಂಭ್ರಮ ಆಚರಿಸಲು ಕಾತರಿಸುತ್ತಿದ್ದಾರೆ.
ಕೊಹ್ಲಿ ಕೊನೆ ಬಾರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದು 2019ರ ನ.22ರಂದು. ಬಾಂಗ್ಲಾದೇಶ ವಿರುದ್ದ ಕೋಲ್ಕತಾದಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ವಿರಾಟ್ 136 ರನ್ ಗಳಿಸಿದ್ದರು. ಇನ್ನು ಏಕದಿನದಲ್ಲಿ ಕೊನೆ ಶತಕ ಬಾರಿಸಿದ್ದು 2019ರ ಆಗಸ್ಟ್‌ನಲ್ಲಿ. ವಿಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಅಜೇಯ 114 ರನ್ ಗಳಿಸಿದ್ದರು. ಫೆ.5ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್, ಕೊಹ್ಲಿ ಈ ವರ್ಷ ಆಡಲಿರುವ ಮೊದಲ ಪಂದ್ಯ. ಭರ್ಜರಿ ಶತಕದೊಂದಿಗೆ ವರ್ಷವನ್ನು ಆರಂಭಿಸಲು ಭಾರತ ತಂಡದ ನಾಯಕ ಎದುರು ನೋಡುತ್ತಿದ್ದಾರೆ.
ತವರಿನಲ್ಲಿ ಮತ್ತೊಂದು ಜಯಕ್ಕೆ ಟೀಂ ಇಂಡಿಯಾ ಕಾತರ..!
2ನೇ ಸ್ಥಾನಕ್ಕೆ ವಿರಾಟ್?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಒಟ್ಟು 70 ಶತಕ ಬಾರಿಸಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 100 ಶತಕ ಬಾರಿಸಿರುವ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದರೆ, 71 ಶತಕ ಬಾರಿಸಿರುವ ರಿಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್‌ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲು ಕೊಹ್ಲಿಗೆ 2 ಶತಕಗಳ ಅವಶ್ಯಕತೆ ಇದೆ. ಇಂಗ್ಲೆಂಡ್ ವಿರುದ್ಧ ಭಾರತ 4 ಟೆಸ್ಟ್, 5 ಟಿ20, 3 ಏಕದಿನ ಪಂದ್ಯಗಳನ್ನಾಡಲಿದ್ದು, ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 4, 2021, 12:14 PM IST