ಲಂಕಾ ಗೆಲುವಿಗೆ ಅಂತಿಮ 3 ಓವರ್‌ಗಳಲ್ಲಿ 59 ರನ್ ಅವಶ್ಯಕತೆ ದಸೂನ್ ಶನಕಾ ಸ್ಫೋಟಕ ಬ್ಯಾಟಿಂಗ್‌ಗೆ ಆಸೀಸ್ ಲೆಕ್ಕಾಚಾರ ಉಲ್ಟಾ ಹೊಸ ದಾಖಲೆ ಬರೆದ ದಸೂನ್ ಶನಕಾ, ಲಂಕಾಗೆ ರೋಚಕ ಗೆಲುವು
ಪಲ್ಲೆಕೆಲೆ(ಜೂ.12): ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ. ಲಂಕಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ ಬರೋಬ್ಬರಿ 59 ರನ್ ಅವಶ್ಯಕತೆ ಇತ್ತು. ಈ ಪಂದ್ಯದಲ್ಲೂ ಲಂಕಾಗೆ ಸೋಲೇ ಗತಿ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ದಸೂನ್ ಶನಕಾ ಚಿತ್ರಣವನ್ನೇ ಬದಲಿಸಿದ್ದಾರೆ. ಕಾರಣ ಅಂತಿಮ 17 ಎಸೆತದಲ್ಲಿ ದಾಖಲೆಯ 59 ರನ್ ಸಿಡಿಸಿ ಲಂಕಾಗೆ 4 ವಿಕೆಟ್ ರೋಚಕ ಗೆಲುವು ತಂದುಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ನೀಡಿದ 177 ರನ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾಗೆ ದಸೂನ್ ಶನಕಾ ಅಬ್ಬರದ ಬ್ಯಾಟಿಂಗ್‌ನಿಂದ ರೋಚಕ ಗೆಲುವು ಸಿಕ್ಕಿದೆ. ದಸೂನ್ ಶನಕಾ ಒಟ್ಟು 25 ಎಸೆತದಲ್ಲಿ 54 ರನ್ ಸಿಡಿಸಿದ್ದಾರೆ. 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಶನಕಾ ಹೊಸ ಅಧ್ಯಾ ಬರೆದಿದ್ದಾರೆ.
IND vs SA ಮತ್ತೆ ಟಾಸ್ ಗೆದ್ದ ಸೌತ್ ಆಫ್ರಿಕಾ, 2 ಬದಲಾವಣೆ!
ಅಂತಿಮ 6 ಎಸೆತದಲ್ಲಿ 19 ರನ್ ಬೇಕಿತ್ತು. ಎರಡು ಬೌಂಡರಿ 1 ಸಿಕ್ಸರ್ ಹಾಗೂ ಅಸೀಸ್ ಬೌಲರ್ ಕೇನ್ ರಿಚರ್ಡ್ಸನ್ ವೈಡ್ ಎಸೆತದಿಂದ ಶ್ರೀಲಂಕಾ ಇನ್ನೂ ಒಂದು ಎಸೆತ ಬಾಕಿ ಇರುವಂತೆ ಪಂದ್ಯ ಗೆದ್ದುಕೊಂಡಿತು. ಈ ಪಂದ್ಯದೊಂದಿಗೆ 3 ಪಂದ್ಯಗಳ ಟಿ20 ಸರಣಿ ಅಂತ್ಯಗೊಂಡಿದೆ. ಆರಂಭಿಕ 2 ಪಂದ್ಯ ಗೆದ್ದು ಆಸ್ಟ್ರೇಲಿಯಾ ಸರಣಿ ವಶಪಡಿಸಿಕೊಂಡಿತ್ತು. ಅಂತಿಮ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಲೆಕ್ಕಾಚಾರದಲ್ಲಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿತ್ತು. ಡೇವಿಡ್ ವಾರ್ನರ್ 39, ನಾಯಕ ಆ್ಯರೋನ್ ಫಿಂಚ್ 29, ಗ್ಲೆನ್ ಮ್ಯಾಕ್ಸ್‌ವೆಲ್ 16, ಸ್ಟೀವನ್ ಸ್ಮಿತ್ ಅಜೇಯ 37, ಸ್ಟೊಯ್ನಿಸ್ 38 ಹಾಗೂ ಮ್ಯಾಥ್ಯೂ ವೇಡ್ ಅಜೇಯ 13 ರನ್ ಸಿಡಿಸಿದ್ದರು.
ಇತ್ತ ಶ್ರೀಲಂಕಾ ಪರ ದನುಶ್ಕಾ ಗುಣತಿಲಕ 15 ರನ್, ಪಥುಮ್ ನಿಸಂಕ 27, ಚಾರಿತ್ ಅಸಲಂಕಾ 26, ಭಾನುಕಾ ರಾಜಪಕ್ಸ 17, ಕುಸಾಲ್ ಮೆಂಡೀಸ್, 6, ದಸೂನ್ ಶನಕಾ ಅಜೇಯ 54, ವಾನಿಂಡು ಹಸರಂಗ 8 ಹಾಗೂ ಚಾಮಿಕಾ ಕರುಣಾರತ್ನೆ 14 ರನ್ ಸಿಡಿಸಿ ಔಟಾದರು.
3 ಪಂದ್ಯಗಳ ಟಿ20 ಸರಣಿ
ಜೂನ್ 7 ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಈ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿತ್ತು. ಎರಡನೇ ಪಂದ್ಯದಲ್ಲಿ ಲಂಕಾ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿತ್ತು. ಆದರೆ ದ್ವಿತೀಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ಗೆಲುವು ದಾಖಲಿಸಿತ್ತು. 2-0 ಅಂತರದಲ್ಲಿ ಸರಣಿ ಗೆದ್ದ ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ರೋಚಕ ಗೆಲುವು ದಾಖಲಿಸಿದೆ.
ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ಗೆ ಕೋವಿಡ್ ದೃಢ, ಎರಡನೇ ಟೆಸ್ಟ್‌ನಿಂದ ಔಟ್..!
ಟಿ20 ಸರಣಿ ಮುಗಿಸಿರುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ 4 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜೂನ್ 14 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಜೂನ್ 24ಕ್ಕೆ 5ನೇ ಹಾಗೂ ಅಂತಿಮ ಪಂದ್ಯದ ಮೂಲಕ ಸರಣಿ ಅಂತ್ಯಗೊಳ್ಳಲಿದೆ. ಬಳಿಕ ಎರಡು ಪಂದ್ಯದ ಟೆಸ್ಟ್ ಸರಣಿ ಆಯೋಜಿಸಲಾಗಿದೆ.
