"ತಮಿಳಿನ ಒಂದೇ ಒಂದು ಕೆಟ್ಟ ಪದ ನನಗೆ ಗೊತ್ತಿಲ್ಲ ಆದ್ರೆ ಹೆಂಡತಿಗೆ ಗೊತ್ತು": ಇಂಟ್ರೆಸ್ಟಿಂಗ್ ಸ್ಟೋರಿ ಬಿಚ್ಚಿಟ್ಟ ಧೋನಿ

ಚೆನ್ನೈನಲ್ಲಿ LGM ತಮಿಳು ಸಿನಿಮಾ ಟ್ರೇಲರ್ ಲಾಂಚ್ ಮಾಡಿದ ಎಂ ಎಸ್ ಧೋನಿ
ಧೋನಿ ಎಂಟರ್‌ಟೈನ್ಮೆಂಟ್‌ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿ LGM ಸಿನಿಮಾ ನಿರ್ಮಾಣ
ಮನೆಯಲ್ಲಿ ಯಾರು ಬಾಸ್ ಎನ್ನುವ ಗುಟ್ಟು ರಟ್ಟು ಮಾಡಿದ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ..!

Captain Cool MSD Said I Did not Teach Any Bad Words In Tamil To Wife Sakshi Dhoni kvn

ಚೆನ್ನೈ(ಜು.11): ಭಾರತ ಕ್ರಿಕೆಟ್ ತಂಡವು ಕಂಡ ಚಾಣಾಕ್ಷ ನಾಯಕ ಎನ್ನುವ ಹೆಗ್ಗಳಿಕೆ ಎಂ ಎಸ್ ಧೋನಿಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನೆಚ್ಚಿನ ನಗರ ಚೆನ್ನೈಗೆ ಬಂದಿಳಿದಿದ್ದು ಅವರ ಅಭಿಮಾನಿಗಳ ಪಾಲಿಗೆ ರೋಮಾಂಚನವನ್ನುಂಟು ಮಾಡಿದೆ. ಮಹೇಂದ್ರ ಸಿಂಗ್ ಧೋನಿ ಕೂಡಾ ಚೆನ್ನೈ ಅನ್ನು ತಮ್ಮ ಎರಡನೇ ತವರು ಎಂದು ಕರೆದಿದ್ದಾರೆ. ರಾಂಚಿ ಮೂಲದ ಧೋನಿ, ಚೆನ್ನೈನಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದೀಗ ಸಿನಿಮಾ ಪ್ರೊಡಕ್ಷನ್‌ಗೂ ಕೈ ಹಾಕಿರುವ ಧೋನಿ, LGM ಎನ್ನುವ ತಮಿಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 

LGM ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕಾಗಿ ಎಂ ಎಸ್ ಧೋನಿ ತಮ್ಮ ಪತ್ನಿ ಸಾಕ್ಷಿ ಸಮೇತ ಚೆನ್ನೈಗೆ ಬಂದಿಳಿದಿದ್ದರು. ಟ್ರೇಲರ್ ಲಾಂಚ್ ಬಳಿಕ ತೀರಾ ಅಪರೂಪ ಎನ್ನುವಂತೆ ಎಂ ಎಸ್ ಧೋನಿ ಮಾಧ್ಯಮ ಸಂವಾದಕ್ಕೆ ಸಿಕ್ಕಿದರು. ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಧೋನಿ ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಬಾಸ್ ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಆಗ ಧೋನಿ, ಇಲ್ಲಿ ಎಷ್ಟು ಜನ ಮದುವೆಯಾದವರು ಇದ್ದೀರ ಹೇಳಿ?. ನಿಮಗೆಲ್ಲರಿಗೂ ಮನೆಯಲ್ಲಿ ಬಾಸ್ ಯಾರೆಂಬುದು ಗೊತ್ತಿರುತ್ತದೆ. ನಾನು ಕ್ರಿಕೆಟ್ ಆಡುವ ಸಂದರ್ಭದಲ್ಲಿ ನನ್ನ ಪತ್ನಿ ಫಿಲ್ಮ್ ಪ್ರೊಡ್ಯೂಸ್ ಮಾಡೋಣವೇ ಎಂದು ಕೇಳಿದಳು ಎಂದು ಫಿಲ್ಮ್‌ ಪ್ರೊಡಕ್ಷನ್‌ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಕಳೆದ ತಿಂಗಳಷ್ಟೇ ಎಂ ಎಸ್ ಧೋನಿ ಹಾಗೂ ಸಾಕ್ಷಿ ಧೋನಿ ತಮ್ಮ 13ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇನ್ನು ಇದೇ ವೇಳೆ ತಾವು ಪತ್ನಿ ಸಾಕ್ಷಿಗೆ ತಮಿಳಿನ ಒಂದೇ ಒಂದು ಕೆಟ್ಟ ಶಬ್ದವನ್ನು ಕಲಿಸಿಲ್ಲ ಎನ್ನುವ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ; ಹೂ ಮಳೆ ಸುರಿಸಿ ಸ್ವಾಗತಿಸಿದ ಫ್ಯಾನ್ಸ್‌..! ವಿಡಿಯೋ ವೈರಲ್

"ಸಿಎಸ್‌ಕೆಗೆ ಒಂದು ಪ್ರೀತಿಯಿಂದ ವಿಸಲ್ ಹೊಡಿಯಿರಿ. ನನಗೆ ತಮಿಳಿನ ಕೆಟ್ಟ ಪದಗಳ ಪರಿಚಯವಿದೆ ಎಂದು ನನ್ನ ಪತ್ನಿ ನನ್ನ ಬಳಿ ಹೇಳಿದರು. ಆದರೆ ನಾನು ಆಕೆಗೆ ಒಂದೇ ಒಂದು ಕೆಟ್ಟ ತಮಿಳು ಪದವನ್ನು ಕಲಿಸಿಲ್ಲ, ಯಾಕೆಂದರೆ ತಮಿಳಿನಲ್ಲಿ ನನಗೆ ಯಾವುದೇ ಕೆಟ್ಟ ಪದಗಳು ಗೊತ್ತಿಲ್ಲ. ಆದರೆ ಬೇರೆ ಭಾಷೆಗಳಲ್ಲಿ ಗೊತ್ತಿದೆ" ಎಂದು ಧೋನಿ ಹೇಳಿದ್ದಾರೆ.

ಇನ್ನು ಚೆನ್ನೈ ಜತೆಗಿನ ಒಡನಾಟದ ಕುರಿತಂತೆ ಮಾತನಾಡಿರುವ ಧೋನಿ, "ನಾನು ಚೆನ್ನೈನಲ್ಲಿಯೇ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು. ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಬಾರಿಸಿದ್ದು ಕೂಡಾ ಚೆನ್ನೈನಲ್ಲಿಯೇ. ಇದೀಗ ತಮ್ಮ ಮೊದಲ ತಮಿಳು ಸಿನಿಮಾ ನಿರ್ಮಾಣ ಕೂಡಾ ಇಲ್ಲಿಯೇ ಆಗುತ್ತಿದೆ. ಚೆನ್ನೈ ನನಗೆ ತುಂಬಾ ಸ್ಪೆಷಲ್‌. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ನಾನು ಚೆನ್ನೈನ ದತ್ತು ಮಗನಾಗಿದ್ದೇನೆ. ನಾವು ನಮ್ಮ ಮೊದಲ ಸಿನಿಮಾ ತಮಿಳಿನಲ್ಲಿ ಮಾಡುತ್ತಿರುವುದೇಕೆಂದರೆ, ಈ ರಾಜ್ಯದ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ" ಎಂದು ಧೋನಿ ಹೇಳಿದ್ದಾರೆ.

ಚೆನ್ನೈನಲ್ಲಿ ಧೋನಿಗೆ ಅದ್ದೂರಿ ಸ್ವಾಗತ: ಧೋನಿ, ಚೆನ್ನೈನ ಏರ್ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆಯೇ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿತು. ಧೋನಿ ಏರ್‌ಪೋರ್ಟ್‌ನಿಂದ ಹೊರಬರುವ ಗೇಟ್‌ ಬಳಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಸಾಗಾರೋಪಾದಿಯಲ್ಲಿ ನೆರೆದಿದ್ದರು. ಈ ಮೂಲಕ ತಮ್ಮ ನೆಚ್ಚಿನ ಹೀರೋ ಧೋನಿಗೆ ಹೂ ಮಳೆ ಸುರಿಸಿ, ಜಯಕಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಧೋನಿ ಹಾಗೂ ಪತ್ನಿ ಸಾಕ್ಷಿ ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆಯೇ ಅಭಿಮಾನಿಗಳು ಧೋನಿ.. ಧೋನಿ ಎಂದು ಘೋಷಣೆ ಕೂಗಿದರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Latest Videos
Follow Us:
Download App:
  • android
  • ios