ಧೋನಿ ನಿವಾಸಕ್ಕೆ ಭೇಟಿ ನೀಡಿದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಧೋನಿಯ ಕಾರು, ಬೈಕ್ ಕಲೆಕ್ಷನ್ ನೋಡಿ ತಬ್ಬಿಬ್ಬಾದ ಮಾಜಿ ಕ್ರಿಕೆಟಿಗರುಇಷ್ಟೊಂದು ಬೈಕು-ಕಾರು ಹೊಂದಲು ಹುಚ್ಚುತನವಿರಬೇಕೆಂದ ವೆಂಕಿ

ನವದೆಹಲಿ(ಜು.18): ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ವೆಂಕಟೇಶ್‌ ಪ್ರಸಾದ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಆಟೋಮೊಬೈಲ್‌ ಕಲೆಕ್ಷನ್‌ ನೋಡಿ ಒಂದು ಕ್ಷಣ ತಬ್ಬಿಬ್ಬಾಗಿ ಹೋಗಿದ್ದಾರೆ. ಧೋನಿಯವರ ಈ ಕಲೆಕ್ಷನ್‌ ನೋಡಿ ತಾವು ಮನಸೋತಿದ್ದಾಗಿ ವೆಂಕಿ ಹೇಳಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಧೋನಿಯವರ ಬೈಕು & ಕಾರು ಕಲೆಕ್ಷನ್‌ನ ವಿಡಿಯೋವನ್ನು ವೆಂಕಟೇಶ್ ಪ್ರಸಾದ್ ಹಂಚಿಕೊಂಡಿದ್ದಾರೆ.

"ಒಬ್ಬ ವ್ಯಕ್ತಿಯಲ್ಲಿ ನೋಡಿದ ಕ್ರೇಜಿ ಉತ್ಸಾಗಳಲ್ಲಿ ಇದು ಒಂದಾಗಿದೆ. ಎಂತಹ ಕಲೆಕ್ಷನ್ ಹಾಗೂ ಎಂತಹ ಅದ್ಭುತ ವ್ಯಕ್ತಿ ಎಂ ಎಸ್ ಧೋನಿ. ಓರ್ವ ಅತ್ಯುತ್ತಮ ಸಾಧಕ ಹಾಗೂ ಅದಕ್ಕಿಂತ ಮಿಗಿಲಾಗಿ ಧೋನಿ ಅತ್ಯದ್ಭುತ ವ್ಯಕ್ತಿಯಾಗಿದ್ದಾರೆ. ಇದು ರಾಂಚಿಯ ಅವರ ನಿವಾಸದಲ್ಲಿರುವ ಬೈಕ್ ಮತ್ತು ಕಾರು ಸಂಗ್ರಹದ ಒಂದು ನೋಟವಾಗಿದೆ. ಈ ವ್ಯಕ್ತಿಯ ಫ್ಯಾಷನ್ ನೋಡಿ ನಾನು ಮನಸೋತು ಹೋದೆ" ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ. 

ಈ ವಿಡಿಯೋದಲ್ಲಿ ವೆಂಕಟೇಶ್ ಪ್ರಸಾದ್‌, "ಇಷ್ಟೊಂದು ಬೈಕ್‌ಗಳನ್ನು ಹೊಂದಲು ಯಾರಿಗಾದರೂ ಒಂದೋ ತುಂಬಾ ಉತ್ಸಾಹ ಬೇಕು ಅಥವಾ ಹುಚ್ಚನಾಗಿರಬೇಕು ಎಂದು ವೆಂಕಟೇಶ್ ಪ್ರಸಾದ್ ತಮಾಷೆ ಮಾಡಿದ್ದಾರೆ.

ಇವರೇ ನೋಡಿ ಅತಿಹೆಚ್ಚು ಟ್ಯಾಕ್ಸ್‌ ಕಟ್ಟುವ ಭಾರತದ ಕ್ರಿಕೆಟಿಗ..! ಆದ್ರೆ ಇವರು ಕೊಹ್ಲಿ, ಸಚಿನ್,ಯುವಿ ಅಲ್ಲವೇ ಅಲ್ಲ..!

"ಇದೊಂದು ಬೈಕ್ ಶೋರೂಂ ಆಗಿರಬೇಕು. ಈ ಮಟ್ಟಿಗೆ ಬೈಕ್‌ ಕಲೆಕ್ಷನ್‌ ಹೊಂದಿರಬೇಕಾದರೆ, ಒಂದೋ ಅತಿಯಾದ ಒಲವು ಇರಬೇಕು ಅಥವಾ ಆ ಬಗ್ಗೆ ಹುಚ್ಚುತನ ಹೊಂದಿರಬೇಕು. ಇಲ್ಲದಿದ್ದರೆ ಇದು ಸಾಧ್ಯವಿಲ್ಲ ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.

Scroll to load tweet…

ವೆಂಕಟೇಶ್ ಪ್ರಸಾದ್ ಮಾತಿಗೆ ಧ್ವನಿಗೂಡಿಸಿರುವ ಸಾಕ್ಷಿ ಧೋನಿ, "ನಾನು ಕೂಡಾ ಇದು ಹುಚ್ಚುತನ ಎಂದೇ ಹೇಳುತ್ತೇನೆ" ಎಂದಿದ್ದಾರೆ.

ಇದಾದ ಬಳಿಕ ವಿಡಿಯೋವನ್ನು ಧೋನಿ ಕಡೆಗೆ ತಿರುಗಿಸಿ ಸಾಕ್ಷಿ," ಯಾಕೆ ಮಹಿ? ಇಷ್ಟೊಂದು ಬೈಕ್‌ಗಳ ಅಗತ್ಯವೇನಿದೆ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧೋನಿ, ಯಾಕೆಂದರೆ, ನೀನು ನನ್ನಿಂದ ಎಲ್ಲವನ್ನು ತೆಗೆದುಕೊಂಡಿದ್ದೀರ. ನನಗೆ ನನ್ನದೇ ಆದದ್ದನ್ನು ಹೊಂದಬೇಕು ಬಯಸುತ್ತೇನೆ. ನೀವು ಅನುಮತಿಸಿದ ಏಕೈಕ ವಿಚಾರ ಇದಾಗಿದೆ ಎಂದು ಧೋನಿ ಮುಗುಳುನಗೆ ಬೀರಿದ್ದಾರೆ.

'ಭಾರತದ ಮುಸ್ಲಿಮರು ಹಿಂದೆಯೂ ಪಾಕಿಸ್ತಾನ ಬೆಂಬಲಿಸಿದ್ರು, 2023ರಲ್ಲೂ ಬೆಂಬಲಿಸ್ತಾರೆ' ಪಾಕ್‌ ಮಾಜಿ ವೇಗಿ ವಿವಾದಾತ್ಮಕ ಹೇಳಿಕೆ..!

ಮಹೇಂದ್ರ ಸಿಂಗ್ ಧೋನಿ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮೂರು ಮಾದರಿಯಲ್ಲೂ ಐಸಿಸಿ ಟ್ರೋಫಿ ಗೆದ್ದ ಜಗತ್ತಿನ ಮೊದಲ ಹಾಗೂ ಏಕೈಕ ನಾಯಕ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಎಂ ಎಸ್ ಧೋನಿ ನಾಯಕತ್ವದಲ್ಲಿ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.