'ನಾನು, ಸಚಿನ್ ಅಲ್ಲವೇ ಅಲ್ಲ..!' ಈತನೇ ಸಾರ್ವಕಾಲಿಕ ಶ್ರೇಷ್ಠ ಪ್ರತಿಭಾನ್ವಿತ ಕ್ರಿಕೆಟಿಗನೆಂದ ಬ್ರಿಯಾನ್ ಲಾರಾ..!

ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ, ಜಗತ್ತಿನ ಅತ್ಯುತ್ತಮ ಪ್ರತಿಭಾನ್ವಿತ ಕ್ರಿಕೆಟಿಗ ಯಾರು ಎನ್ನುವುದನ್ನು ಹೆಸರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Brian Lara Names Most Talented Player Of All Time Says Not Even Sachin Tendulkar Myself kvn

ನವದೆಹಲಿ: ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ವಿಶ್ವಕಪ್ ಕ್ರಿಕೆಟ್ ಆಳಿದ ದಿಗ್ಗಜ ಆಟಗಾರರು. ತಾವು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಸಚಿನ್ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ದಶಕವೇ ಕಳೆದರೂ ಇಂದಿಗೂ ಹತ್ತು ಹಲವು ದಾಖಲೆಗಳು ಈ ಇಬ್ಬರು ದಿಗ್ಗಜರ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿವೆ.

ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್, ಏಕದಿನ(18,426) ಹಾಗೂ ಟೆಸ್ಟ್ ಕ್ರಿಕೆಟ್‌(15,921)ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್‌ನಲ್ಲಿ(400*) ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ(501) ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿದ ದಾಖಲೆ ಬ್ರೇಕ್ ಮಾಡಲು ಯಾರೊಬ್ಬರಿಗೂ ಸಾಧ್ಯವಾಗಿಲ್ಲ. ಸಚಿನ್ ತೆಂಡುಲ್ಕರ್ ಸಮಯ ಸಿಕ್ಕಾಗಲೆಲ್ಲಾ ಲಾರಾ ಗುಣಗಾನ ಮಾಡಿದರೆ, ವಿಂಡೀಸ್ ದಿಗ್ಗಜ ಕ್ರಿಕೆಟಿಗ ಲಾರಾ, ತೆಂಡುಲ್ಕರ್ ಅವರನ್ನು ಹೊಗಳುವುದನ್ನು ನಾವೆಲ್ಲರೂ ನೋಡಿದ್ದೇವೆ. 

ಯುವಿ, ಭಜ್ಜಿ, ರೈನಾ ಮೇಲೆ ಪೊಲೀಸ್ ಕೇಸ್‌ ದಾಖಲು! ಕ್ಷಮಿಸಿಬಿಡಿ: ಕೈಮುಗಿದು ಬೇಡಿಕೊಂಡ ಹರ್ಭಜನ್ ಸಿಂಗ್.!

ಇದೀಗ ಬ್ರಿಯಾನ್ ಲಾರಾ, ಸಾರ್ವಕಾಲಿಕ ಶ್ರೇಷ್ಠ ಪ್ರತಿಭಾನ್ವಿತ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದು, ಮಾಜಿ ಸಹ ಆಟಗಾರ ಕಾರ್ಲ್ ಹೂಪರ್, ನಾನು ಕಂಡ ಶ್ರೇಷ್ಠ ಪ್ರತಿಭಾನ್ವಿತ ಕ್ರಿಕೆಟಿಗ ಎಂದಿದ್ದಾರೆ.

"ನಾನು ಗಮನಿಸಿದಂತೆ ಕಾರ್ಲ್ ಹೂಪರ್ ಶ್ರೇಷ್ಠ ಪ್ರತಿಭಾನ್ವಿತ ಆಟಗಾರ. ನಾನಾಗಲಿ ಅಥವಾ ಸಚಿನ್ ತೆಂಡುಲ್ಕರ್ ಅವರ ಹತ್ತಿರವೂ ಸುಳಿಯಲು ಸಾಧ್ಯವಿಲ್ಲ. ನಾಯಕನಾಗಿ ಹಾಗೂ ಆಟಗಾರನಾಗಿ ಅವರ ನಂಬರ್ ಬದಿಗಿಟ್ಟು ನೋಡಿದರೆ, ನಾಯಕನಾಗಿ ಅವರು 50% ಸರಾಸರಿ ಹೊಂದಿದ್ದಾರೆ. ಹೀಗಾಗಿ ಅವರು ಆ ಜವಾಬ್ದಾರಿಯನ್ನೂ ಎಂಜಾಯ್ ಮಾಡಿದ್ದಾರೆ. ನಾಯಕನಾಗಿ ಅವರು ಯಶಸ್ಸು ಕಂಡರು ಎನ್ನುವುದು ಬಿಟ್ಟರೇ, ಅವರಲ್ಲಿದ್ದ ನಿಜವಾದ ಸಾಮರ್ಥ್ಯ ಹೊರತರಲು ಸಾಧ್ಯವಾಗದಿದ್ದು ಬೇಸರ ಎಂದು ಲಾರಾ ಹೇಳಿದ್ದಾರೆ.

ಟೀಂ ಇಂಡಿಯಾ, ಕೋಚ್‌ ದ್ರಾವಿಡ್‌ಗೆ ಕರ್ನಾಟಕ ವಿಧಾನಸಭೆ ಅಭಿನಂದನೆ

ಇತ್ತೀಚೆಗಷ್ಟೇ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ತಮ್ಮ ಹೆಸರಿನಲ್ಲಿರುವ ಗರಿಷ್ಠ ವೈಯುಕ್ತಿಕ ಸ್ಕೋರ್ 400, ಈ ದಾಖಲೆ ಮುರಿಯಬಲ್ಲ ಇಬ್ಬರು ಭಾರತೀಯ ಹಾಗೂ ಇಂಗ್ಲೆಂಡ್ ಆಟಗಾರರನ್ನು ಹೆಸರಿಸಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಲಾರಾ, ಭಾರತದ ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ಹಾಗೂ ಇಂಗ್ಲೆಂಡ್‌ನ ಜಾಕ್ ಕ್ರಾಲಿ ಮತ್ತು ಹ್ಯಾರಿ ಬ್ರೂಕ್ ತಮ್ಮ ರೆಕಾರ್ಡ್ ಬ್ರೇಕ್ ಮಾಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.   
 

Latest Videos
Follow Us:
Download App:
  • android
  • ios