ಬೆಂಗಳೂರು(ಫೆ.15): ಅಂಧರ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಸೆಮಿಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ, ತಮಿಳುನಾಡು ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿತು. 

ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು 6 ವಿಕೆಟ್‌ಗೆ 169 ರನ್‌ ಗಳಿಸಿತು. ಪ್ರಕಾಶ್‌ ಜಯರಾಮಯ್ಯ (99*) ಹಾಗೂ ಉಮೇಶ್‌ (63*) ಆಕರ್ಷಕ ಆಟದ ನೆರವಿನಿಂದ ಕರ್ನಾಟಕ ಇನ್ನೂ 6.2 ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಸೆಮೀಸ್‌ನಲ್ಲಿ ಕರ್ನಾಟಕ, ಒಡಿಶಾ ವಿರುದ್ಧ ಸೆಣಸಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಹರಾರ‍ಯಣ ಹಾಗೂ ಆಂಧ್ರ ಪ್ರದೇಶ ಮುಖಾಮುಖಿಯಾಗಲಿವೆ.

ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವಿಂಡೀಸ್‌

ಸ್ಕೋರ್‌: 
ತಮಿಳುನಾಡು 169/6
ಕರ್ನಾಟಕ 173/0

ದಕ್ಷಿಣ ಆಫ್ರಿಕಾ ವಿರುದ್ದ ಪಾಕ್‌ಗೆ ಟಿ20 ಸರಣಿ ಜಯ

ಲಾಹೋರ್‌(ಫೆ.15): ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು 4 ವಿಕೆಟ್‌ ಗೆಲುವು ದಾಖಲಿಸುವ ಮೂಲಕ 2-1 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿತು.

ಭಾನುವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತದ ನಡುವೆಯೂ ಡೇವಿಡ್‌ ಮಿಲ್ಲರ್ ಆಕರ್ಷಕ ಅರ್ಧಶತಕದ ನೆರವಿನಿಂದ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.