ಢಾಕಾ(ಫೆ.15): ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ 17 ರನ್‌ಗಳ ರೋಚಕ ಗೆಲುವು ಸಾಧಿಸಿ 2-0 ಅಂತರದಲ್ಲಿ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದೆ. 

ಪಂದ್ಯದ 4ನೇ ದಿನವಾದ ಭಾನುವಾರ 2ನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ 117 ರನ್‌ಗೆ ಆಲೌಟ್‌ ಆಗಿ ಬಾಂಗ್ಲಾಗೆ 231 ರನ್‌ ಗುರಿ ನೀಡಿತು. ಮೊದಲ ವಿಕೆಟ್‌ಗೆ 59 ರನ್‌ ಜೊತೆಯಾಟ ಪಡೆದು ಉತ್ತಮ ಆರಂಭ ಪಡೆದ ಬಾಂಗ್ಲಾ ದಿಢೀರ್‌ ಕುಸಿತ ಕಂಡು 213 ರನ್‌ಗಳಿಗೆ ಆಲೌಟ್‌ ಆಯಿತು. ಕೊನೆಯಲ್ಲಿ ಮೆಹದಿ ಹಸನ್‌(31) ಹೋರಾಟ ಬಾಂಗ್ಲಾಗೆ ಗೆಲುವು ತಂದುಕೊಡಲಿಲ್ಲ. ಬಾಂಗ್ಲಾ ಪರ ಕಾರ್ನ್‌ವಾಲ್‌ 4, ವಾರಿಕ್ಕನ್‌ ಹಾಗೂ ಬ್ರಾಥ್‌ವೇಟ್‌ ತಲಾ 3 ವಿಕೆಟ್‌ ಕಬಳಿಸಿದರು.

INDvENG: 2ನೇ ದಿನವೂ ಮೇಲುಗೈ, ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ!

ಬಾಂಗ್ಲಾದೇಶ ವಿರುದ್ದ ಮೊದಲ ಟೆಸ್ಟ್‌ ಪಂದ್ಯವನ್ನು 3 ವಿಕೆಟ್‌ಗಳಿಂದ ಜಯಿಸಿದ್ದ  ವೆಸ್ಟ್‌ ಇಂಡೀಸ್‌ ತಂಡ ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ 17 ರನ್‌ಗಳ ಜಯ ದಾಖಲಿಸಿದೆ.

ಸ್ಕೋರ್‌: 
ವಿಂಡೀಸ್‌ 409 ಹಾಗೂ 117 
ಬಾಂಗ್ಲಾ 296 ಹಾಗೂ 213
(* ಎರಡು ಪಂದ್ಯಗಳ ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ ವೆಸ್ಟ್ ಇಂಡೀಸ್‌)