ಕೋವಿಡ್, ಆಟಗಾರರ ಅನಾರೋಗ್ಯ ಇವೆಲ್ಲದರ ನಡುವೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ71ನೇ ಶತಕ ಸಿಡಿಸ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತಿರುವ ಭಾರತ ತಂಡ, ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದು ಕೊಹ್ಲಿ ಶತಕದ ಕುತೂಹಲ ಆರಂಭವಾಗಿದೆ.
ಬರ್ಮಿಂಗ್ ಹ್ಯಾಮ್ (ಜು.1): ದಿ ಗ್ರೇಟ್ ವಿರಾಟ್ ಕೊಹ್ಲಿಯ (Virat Kohli) ಬ್ಯಾಟ್ ಮೊದಲಿನಂತೆ ಸದ್ದು ಮಾಡ್ತಿಲ್ಲ ನಿಜ. ಶತಕ ಸಿಡಿಸಿದೇ ಎರಡೂವರೆ ವರ್ಷ ಉರುಳಿರೋದು ನಿಜ. ವಿರಾಟ್ ಫಾರ್ಮ್ ಬಗ್ಗೆ ಟೀಕೆಗಳು ಕೇಳಿ ಬರ್ತಿರೋದು ನಿಜ. ಆದ್ರೆ ಹಿಂದಿನ ಹಿಸ್ಟರಿ ಏನೇ ಇರಲಿ. ಕೊಹ್ಲಿಯದ್ದು ಇಷ್ಟು ದಿನದ್ದು ಒಂದು ಲೆಕ್ಕವಾದ್ರೆ, ಇವತ್ತಿನಿಂದ ಬೇರೆಯದ್ದೇ ಲೆಕ್ಕ. ಅಂದ್ರೆ ಈವರೆಗೆ ಕಳೆದುಕೊಂಡಿದ್ದನ್ನ ಚುಕ್ತಾ ಮಾಡುವ ಲೆಕ್ಕ ಇಂದಿನಿಂದ ಶುರುವಾಗಲಿದೆ.
ಆಧುನಿಕ ಕ್ರಿಕೆಟ್ ದೊರೆ ಸದ್ಯ ಹಸಿದ ಹೆಬ್ಬುಲಿಯಂತಾಗಿದ್ದು, ಇಂಗ್ಲೆಂಡ್ (England) ಮೇಲೆ ಎಗರಲು ಸಜ್ಜಾಗಿದ್ದಾರೆ. ಹಿಂದಿನ ವೈಫಲ್ಯ ಮರೆತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ರನ್ ಮಾಸ್ಟರ್ ಹಪಾಹಪಿ ಕಾಣುತ್ತಿದೆ. ಇದಕ್ಕೆ ಗುರು ರಾಹುಲ್ ದ್ರಾವಿಡ್ (Rahul Dravid) ಸಾಥ್ ನೀಡಿದ್ದಾರೆ.
ಮಾಸ್ಟರ್ ದ್ರಾವಿಡ್ರಿಂದ ಶಿಷ್ಯ ಕೊಹ್ಲಿಗೆ ಬ್ಯಾಟಿಂಗ್ ಟಿಪ್ಸ್ : ಸುದೀರ್ಘ ಎರಡೂವರೆ ವರ್ಷದಿಂದ ಕೊಹ್ಲಿ ಸೆಂಚುರಿ ವನವಾಸ ಅನುಭವಿಸ್ತಿದ್ದಾರೆ. ಈ ವನವಾಸ ಇಂಗ್ಲೆಂಡ್ ಪ್ರವಾಸದಲ್ಲಿ ಅಂತ್ಯಗೊಂಡರೂ ಅಚ್ಚರಿಯಿಲ್ಲ. ಯಾಕಂದ್ರೆ ಕಿಂಗ್ ಕೊಹ್ಲಿ ಮತ್ತೆ ಹಳೇ ಖದರ್ ತೋರಿಸಲು ಕೋಚ್ ರಾಹುಲ್ ದ್ರಾವಿಡ್ ಮೊರೆ ಹೋಗಿದ್ದು, ಅವರಿಂದ ಬ್ಯಾಟಿಂಗ್ ಟಿಪ್ಸ್ ಪಡೆದಿದ್ದಾರೆ.
ಸರಣಿಯಲ್ಲಿ ಈಗಾಗಲೇ ಭಾರತ ತಂಡ 2-1ರಿಂದ ಮುನ್ನಡೆ ಸಾಧಿಸಿರಬಹುದು. ಆದರೆ, ಇಂಗ್ಲೆಂಡ್ ತವರಿನಲ್ಲಿ ಫೇವರಿಟ್ ಅನ್ನೊದನ್ನ ಮರೆಯುವಂತಿಲ್ಲ. ಅಲ್ಲದೇ ಕಳೆದ ಒಂದು ವರ್ಷದಲ್ಲಿ ಸ್ಟೋಕ್ಸ್ ಪಡೆ ಸಾಕಷ್ಟು ಬದಲಾಗಿದೆ. ಇಡೀ ತಂಡ ಆಡುವ ರೀತಿ ಬದಲಾಗಿದೆ. ಇಂತಹ ತಂಡವನ್ನ ಸೋಲಿಸಬೇಕಾದಲ್ಲಿ ಕೊಹ್ಲಿಯಂತ ಸಮರ ಶೂರ ಬಿಗ್ ಇನ್ನಿಂಗ್ಸ್ ಕಟ್ಟಲೇಬೇಕಿದೆ. ಆ ಕಾರಣಕ್ಕಾಗಿ ಕೊಹ್ಲಿ ಗುರು ದ್ರಾವಿಡ್ರಿಂದ ಬ್ಯಾಟಿಂಗ್ ಸಲಹೆ ಪಡೆದಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಖಡಕ್ ವಾರ್ನಿಂಗ್ ನೀಡಿದ BCCI..! ಯಾಕೆ ಏನಾಯ್ತು?
ಬಲಿಷ್ಠ ಆಂಗ್ಲರ ವಿರುದ್ಧ 71ನೇ ಶತಕ ಸಿಡಿಸ್ತಾರಾ ಕೊಹ್ಲಿ..? : ಈಗ ಇರೋ ತಂಡದಲ್ಲಿ ವಿರಾಟ್ ಕೊಹ್ಲಿ ಅನುಭವಿ ಕ್ರಿಕೆಟಿಗ. ಇಂಗ್ಲೆಂಡ್ ನೆಲದಲ್ಲಂತೂ ವಿರಾಟ್ ದಾಖಲೆಗಳು ಅದ್ಭುತವಾಗಿದೆ. 4 ಬಾರಿ ಆಂಗ್ಗರ ನೆಲದಲ್ಲಿ ಆಡಿರೋ ಕೊಹ್ಲಿ 29 ಇನ್ನಿಂಗ್ಸ್ಗಳಿಂದ 1009 ರನ್ ಬಾರಿಸಿದ್ದಾರೆ.
IPL 2022: ಶತಕವಿಲ್ಲದೆ 100 ಪಂದ್ಯ ಪೂರೈಸಿದ ವಿರಾಟ್ ಕೊಹ್ಲಿ..!
2014ರಲ್ಲಿ ಮುಗ್ಗರಿಸಿದ ಸೆಂಚುರಿ ಸ್ಪೆಶಲಿಸ್ಟ್, 2018ರ ಪ್ರವಾಸದಲ್ಲಿ ಅಬ್ಬರದ 593 ರನ್ ಬಾರಿಸಿದ್ದರು. ಇನ್ನು ಕಳೆದ ಬಾರಿ 218 ರನ್ ಗಳಿಸಿದ್ದರು. ಈ ಸಲವೂ ರನ್ ಹೊಳೆ ಹರಿಸಲು ಕೊಹ್ಲಿ ಎದುರು ನೋಡುತ್ತಿದ್ದಾರೆ. ಇದಕ್ಕಾಗಿ ಗುರು ದ್ರಾವಿಡ್ ರಿಂದ ಟಿಪ್ಸ್ ಪಡೆದುಕೊಂಡಿದ್ದಾರೆ. ಅಲ್ಲಿಗೆ ಕೊಹ್ಲಿ ಬ್ಯಾಟ್ನಿಂದ ಎರಡೂವರೆ ವರ್ಷಗಳ ಬಳಿಕ 71ನೇ ಶತಕ ಮೂಡಿಬಂದರೂ ಅಚ್ಚರಿಯಿಲ್ಲ.
