Asianet Suvarna News Asianet Suvarna News

5 ಟೆಸ್ಟ್‌ ಪಂದ್ಯಗಳಲ್ಲೂ ಬೆಂಚ್ ಕಾಯಿಸಿದ ಅಶ್ವಿನ್‌..! ಇಂಗ್ಲೆಂಡ್​ಗೆ ಕರೆಸಿಕೊಂಡಿದ್ದೇಕೆ..?

* ಇಂಗ್ಲೆಂಡ್ ಎದುರು 5 ಪಂದ್ಯಗಳಲ್ಲೂ ಬೆಂಚ್ ಕಾಯಿಸಿದ ಅಶ್ವಿನ್
* ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲೂ ಹೊರಗುಳಿದ ಅಶ್ವಿನ್
* ಕೋವಿಡ್‌ನಿಂದ ಚೇತರಿಸಿಕೊಂಡು ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಿದ್ದ ಸ್ಪಿನ್ನರ್

Birmingham Test is Ravichandran Ashwin a victim of circumstances kvn
Author
Bengaluru, First Published Jul 2, 2022, 3:16 PM IST

ಬರ್ಮಿಂಗ್‌ಹ್ಯಾಮ್(ಜು.02) : ಹೆಸರು ರವಿಚಂದ್ರನ್ ಅಶ್ವಿನ್ (Ravichandran Ashwin). ಶಾರ್ಟ್​ ಆಗಿ ಆರ್. ಅಶ್ವಿನ್ ಅಂತ ಕರಿತಾರೆ. ವಯಸ್ಸು 35 ವರ್ಷ. ತಮಿಳುನಾಡಿನ ಈ ಆಲ್ರೌಂಡರ್ ಖಾತೆಯಲ್ಲಿ ಬರೋಬ್ಬರಿ 442 ಟೆಸ್ಟ್ ವಿಕೆಟ್​ಗಳಿವೆ. ಹಾಗೆ 2,931 ರನ್​​ಗಳನ್ನೂ ಬಾರಿಸಿದ್ದಾರೆ. 31 ಕ್ಯಾಚ್​ಗಳನ್ನೂ ಹಿಡಿದಿದ್ದಾರೆ. ಟೀಂ ಇಂಡಿಯಾ ತವರಿನಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದೆ ಅಂದ್ರೆ ಅವರೇ ಟ್ರಂಪ್​ಕಾರ್ಡ್​ ಪ್ಲೇಯರ್. ಭಾರತದಲ್ಲಿ ಇವರ ಮುಂದೆ ಕೊಹ್ಲಿನೂ ಡಮ್ಮಿಯೇ.

ಆದರೆ ಅದ್ಯಾಕೋ ವಿದೇಶದಲ್ಲಿ ಟೆಸ್ಟ್ ಆಡುವಾಗ ಟೀಂ ಇಂಡಿಯಾ (Team India) ಮಾತ್ರ ಅಶ್ವಿನ್ ಅವರನ್ನ ನೆಗ್ಲೆಟ್ ಮಾಡುತ್ತೆ. ಕಳೆದ ವರ್ಷ ಇಂಗ್ಲೆಂಡ್ ಟೂರ್​ಗೆ ಹೋಗಿದ್ದ ಭಾರತ 4 ಟೆಸ್ಟ್​ಗಳನ್ನಾಡಿತ್ತು. ಆದ್ರೆ ಆ ನಾಲ್ಕೂ ಟೆಸ್ಟ್​ಗಳಲ್ಲೂ ಅಶ್ವಿನ್ ಬೆಂಚ್ ಕಾಯಿಸಿದ್ದರು. ಆಗಲೇ ಅಪಸ್ವರಗಳು ಎದ್ದಿದ್ದವು. ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಆ 5ನೇ ಟೆಸ್ಟ್ ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್​ನಲ್ಲಿ ಆರಂಭವಾಗಿದೆ. 5ನೇ ಟೆಸ್ಟ್​​ನಲ್ಲೂ ರವಿಚಂದ್ರನ್ ಅಶ್ವಿನ್ ಆಡ್ತಿಲ್ಲ. ಅಲ್ಲಿಗೆ ಇಂಗ್ಲೆಂಡ್ ವಿರುದ್ಧದ ಐದಕ್ಕೆ ಐದು ಟೆಸ್ಟ್​​ಗಳನ್ನೂ ಅಶ್ವಿನ್ ಬೆಂಚ್ ಕಾದ್ರು. ಅಶ್ವಿನ್ ಮೊದಲ ಬಾರಿಗೆ ಅನಿಸ್ತಿದೆ ಒಂದು ಸಿರೀಸ್​ನಲ್ಲಿ ಒಂದೂ ಪಂದ್ಯವಾಡದೆ ಇರೋದು.

ಜೂನ್ 15ರಂದು ಇಂಗ್ಲೆಂಡ್​ ಫ್ಲೈಟ್ ಹತ್ತೋಕು ಮುಂಚೆ ರವಿಚಂದ್ರನ್‌ ಅಶ್ವಿನ್​ಗೆ ಕೋವಿಡ್ ಕಾಣಿಸಿಕೊಂಡಿತ್ತು. ಹಾಗಾಗಿ ಅವರು ಲೇಟಾಗಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಿದ್ರು. ಆಡಿಸದಿದ್ದರೆ ರವಿಚಂದ್ರನ್ ಅಶ್ವಿನ್ ಅವರನ್ನ ಇಂಗ್ಲೆಂಡ್​ಗೆ ಕರೆಸಿಕೊಂಡಿದ್ದೇಕೆ ಅನ್ನೋ ಪ್ರಶ್ನೆ ಮೂಡಿದೆ. ಇನ್ನು ಕಳೆದ ವರ್ಷ ನಾಲ್ಕು ಟೆಸ್ಟ್​​ಗಳಿಂದ ಡ್ರಾಪ್ ಮಾಡಿದಕ್ಕೆ ಕೆಲವರು ಕೊಹ್ಲಿ ಮೇಲೆ ಗರಂ ಆಗಿದ್ದರು. ಈಗಲೂ ಅವರನ್ನ ಡ್ರಾಪ್ ಮಾಡಿದ್ದಾರೆ. ಅಲ್ಲಿಗೆ ಇಂಗ್ಲೆಂಡ್​ನಲ್ಲಿ ಒಬ್ಬ ಸ್ಪಿನ್ನರ್​ಗೆ ಆಡಲು ಮಾತ್ರ ಅವಕಾಶ. ಹಾಗಾಗಿ ಅಶ್ವಿನ್ ಡ್ರಾಪ್ ಮಾಡಿ ಜಡೇಜಾಗೆ ಚಾನ್ಸ್ ಕೊಡಲಾಗಿದೆ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಬೇಕು. 

ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ : 

2021ರಲ್ಲಿ ಆಡಿದ ತಂಡಕ್ಕೂ ಈಗ ಟೆಸ್ಟ್​ ಆಡುತ್ತಿರುವ ತಂಡಕ್ಕೂ ಮೂರು ವ್ಯತ್ಯಾಸಗಳಿವೆ. ಅಂದತೆ ಮೂರು ಬದಲಾವಣೆ ಆಗಿವೆ. ರೋಹಿತ್ ಶರ್ಮಾ (Rohit Sharma), ಕೆಎಲ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಬದಲಿಗೆ ಶುಬ್​ಮನ್ ಗಿಲ್, ಹನುಮ ವಿಹಾರಿ ಹಾಗೂ ಶ್ರೇಯಸ್ ಅಯ್ಯರ್ ಆಡ್ತಿದ್ದಾರೆ. ಉಳಿದಂತೆ 8 ಮಂದಿ ಕಳೆದ ವರ್ಷವೂ ಟೆಸ್ಟ್ ಸರಣಿ ಆಡಿದ್ದರು.

35 ವರ್ಷಗಳ ಬಳಿಕ ಫಾಸ್ಟ್ ಬೌಲರ್ ಕ್ಯಾಪ್ಟನ್: 

ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ​ಜಸ್​​ಪ್ರೀತ್ ಬುಮ್ರಾ (Jasprit Bumrah) ಟೀಂ ಇಂಡಿಯಾವನ್ನ ಲೀಡ್ ಮಾಡ್ತಿದ್ದಾರೆ. ಸುದೀರ್ಘ 35 ವರ್ಷಗಳ ಬಳಿಕ ವೇಗದ ಬೌಲರ್ ಒಬ್ಬ ಭಾರತ ತಂಡದ ನಾಯಕರಾಗಿದ್ದಾರೆ. 1987ರಲ್ಲಿ ಕಪಿಲ್ ದೇವ್ ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರು.

ಕಳೆದ ವರ್ಷ ಆಡಿದ ತಂಡಕ್ಕೂ ಈ ವರ್ಷ ಆಡಿದ ತಂಡಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಕೇವಲ ಭಾರತ ಮಾತ್ರವಲ್ಲ, ಇಂಗ್ಲೆಂಡ್ ಟೀಮ್​ನಲ್ಲೂ ಕೋಚ್, ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಮತ್ತು ಕೆಲ ಆಟಗಾರರು ಬದಲಾಗಿದ್ದಾರೆ. ಇದನ್ನ ನೊಡಿದ್ರೆ ಜಸ್ಟ್ 10 ತಿಂಗಳಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗಿವೆ ಅನಿಸದೆ ಇರದು.

Follow Us:
Download App:
  • android
  • ios