ಅಡಿಲೇಡ್(ಜ.26)‌: ಒಂದೇ ಎಸೆತದಲ್ಲಿ ಬ್ಯಾಟ್ಸ್‌ಮನ್‌ ಒಬ್ಬ 2 ಬಾರಿ ರನೌಟ್‌ ಆದ ಅಪರೂಪದ ಪ್ರಸಂಗ ಭಾನುವಾರ ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಟಿ20ಯಲ್ಲಿ ನಡೆದಿದೆ. 

ಸಿಡ್ನಿ ಥಂಡರ್‌ ವಿರುದ್ಧದ ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕ​ರ್ಸ್ ತಂಡದ ಬ್ಯಾಟ್ಸ್‌ಮನ್‌ ಜ್ಯಾಕ್‌ ವೀಥರಾಲ್ಡ್‌ 2 ಬಾರಿ ರನೌಟ್‌ ಆದ ಆಟಗಾರ. ಫಿಲ್‌ ಸಾಲ್ಟ್‌ ಬಾರಿಸಿದ ಚೆಂಡು ಬೌಲರ್‌ ಕ್ರಿಸ್‌ ಗ್ರೀನ್‌ಗೆ ಕೈಗೆ ತಗುಲಿ ವಿಕೆಟ್‌ಗೆ ಬಡಿಯವ ವೇಳೆಗೆ ವೀಥರಾಲ್ಡ್‌ ಕ್ರೀಸ್‌ ಬಿಟ್ಟಿದ್ದರು.  ಚೆಂಡು ವಿಕೆಟ್‌ಗೆ ಬಡಿದು ಕವರ್‌ ಕ್ಷೇತ್ರದತ್ತ ಹೋದ ಕಾರಣ ರನ್‌ ಕದಿಯಲು ಯತ್ನಿಸಿದ ಜ್ಯಾಕ್‌, ಸ್ಟ್ರೈಕರ್‌ ಬದಿಯಲ್ಲೂ ರನೌಟ್‌ ಆದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಲಂಕಾ ವಿರುದ್ಧ ಇಂಗ್ಲೆಂಡ್‌ 2-0 ಸರಣಿ ಕ್ಲೀನ್‌ ಸ್ವೀಪ್‌

ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ಕೋಚ್ ಜೇಸನ್‌ ಗಿಲೆಸ್ಪಿ, ಈ ರೀತಿಯ ರನೌಟ್‌ ಆಗಿದ್ದು ಇದೇ ಮೊದಲು ಎಂದು ಹೇಳಿದ್ದಾರೆ. ಇನ್ನು ಆಸೀಸ್‌ ಮಾಜಿ ವೇಗಿ ಬ್ರೆಟ್‌ ಲೀ ನಾನು ಯಾವತ್ತಿಗೂ ಒಬ್ಬ ಬ್ಯಾಟ್ಸ್‌ಮನ್‌ ಎರಡೆರಡು ಬಾರಿ ರನೌಟ್ ಆಗಿದ್ದನ್ನು ನೋಡಿಲ್ಲ ಎಂದು ಕಾಮೆಂಟರಿ ವೇಳೆ ಹೇಳಿದ್ದಾರೆ.