ಬೆಂಗಳೂರು(ಫೆ.10): ಎಲ್ಲರು ಮಕ್ಕಳನ್ನ ದೇವರ ಸಮಾನರು ಎನ್ನುತ್ತಾರೆ. ನಾವು ಮಕ್ಕಳನ್ನ ಮನೆಯ ಬೆಳಕು ಎಂದು ಭಾವಿಸುತ್ತೇವೆ. ಆದ್ರೆ ಏನು ಅರಿಯದ ವಯಸ್ಸಿನಲ್ಲೆ ತಮ್ಮದಲ್ಲದ ತಪ್ಪಿಗೆ ಹೆತ್ತವರಿಂದ  ದೂರಾಗುವ ಬಡ ಅನಾಥ ಮಕ್ಕಳ ನೋವು ನಿಜಕ್ಕೂ ಕರುಣಾಜನಕವಾದದ್ದು. ಇತಂಹ ಮಕ್ಕಳ ಬಾಳಿನಲ್ಲಿ ಬೆಳಕು ತುಂಬುವ ಉದ್ದೇಶದಿಂದ ಬಂಟ್ಸ್ ಬಿಗ್ ಬ್ಯಾಶ್ ಲೀಗ್ ಶುರುವಾಗುತ್ತಿದೆ.

ಇದನ್ನೂ ಓದಿ: ಬುಶ್ ಫೈರ್ ಪಂದ್ಯ: ಗಿಲ್ಲಿ ಎದುರು ಪಾಂಟಿಂಗ್ ಪಡೆಗೆ ರೋಚಕ ಜಯ

 ಸುಜೀತ್ ಶೆಟ್ಟಿ ನೇತೃತ್ವದಲ್ಲಿ ಈ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆಗೊಂಡಿದ್ದು, ಮಾರ್ಚ್ 21-22 ರಂದು ಪಂದ್ಯಾವಳಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ತಂಡಗಳ ಜರ್ಸಿ ಬಿಡುಗಡೆ ಮತ್ತು ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಕುಂದಾಪುರದ ಬೊರರಾಜ್ ಶೆಟ್ಟಿ ಅಧಿಕ ಬೆಲೆಗೆ ಸೇಲ್ ಆಗಿದ್ದಾರೆ. 

ಒಟ್ಟು ಏಂಟು ತಂಡಗಳು ಭಾಗಿ!
ಒಂದೊಳ್ಳೆ ಸಾಮಾಜಿಕ ಕಳಕಳಿಯಿಂದ ನಡೆಯಲಿರುವ ಈ ಟೂರ್ನಿಯಲ್ಲಿ ಗೂಗ್ಲಿ ಪೊಳಲಿ ಟೈಗರ್ಸ್, ಉಡುಪಿ ಹಾಸ್ಪೆಟಲಿಟಿ ಸರ್ವಿಸಸ್,ಎಸ್ ಡಿಸಿಸಿ, ಅಭಯ ಕ್ರಿಕೆಟರ್ಸ್, ಶೆಟ್ಟಿ ಎಂಪೈರ್ಸ್, ಯುನೈಟೆಡ್ ವಾರಿಯರ್ಸ್, ಬಂಟ್ಸ್ ಯುನೈಟೆಡ್ ಮಂಗಳೂರು, ಇಶಾನಿ ಸಹಾರ ಕ್ರಿಕೆಟರ್ಸ್ ತಂಡಗಳು ಭಾಗವಹಿಸಲಿವೆ.  ಪ್ರತಿಪಂದ್ಯ 10 ಓವರ್ ಗಳಿಗೆ ಸಿಮೀತವಾಗಿದ್ದು, ಚಾಂಪಿಯನ್ ತಂಡಕ್ಕೆ 1.5 ಲಕ್ಷ ಮತ್ತು ಚಿನ್ನದ ಪದಕ ಮತ್ತು ರನ್ನರ್ ಅಪ್ ತಂಡಕ್ಕೆ 1 ಲಕ್ಷ ಬಹುಮಾನ ನೀಡಲಾಗುವುದು.  

ಇದನ್ನೂ ಓದಿ: ನಿವೃತ್ತಿಯಿಂದ ಹೊರಬಂದ ಸಚಿನ್ ತೆಂಡುಲ್ಕರ್; ಮೊದಲ ಎಸೆತದಲ್ಲೇ ಬೌಂಡರಿ!
  
ಒಟ್ಟಾರೆ ಎಲ್ಲ ಮಕ್ಕಳಿಗೂ  ಪ್ರೀತಿಸಿದವರ ಜೊತೆ ಬೆಳೆಯುವ,ಆಡುವ,ಕಲಿಯುವ ಹಕ್ಕಿದೆ. ಆದರೆ ಹೆತ್ತವರನ್ನು ಕಳೆದುಕೊಂಡ ಮಕ್ಕಳು ಇವುಗಳಿಂದ ವಂಚಿತರಾಗಿರುತ್ತಾರೆ. ಅಂತಹ ಮಕ್ಕಳಿಗೆ ಬೇಕಿರುವುದು ಆಶ್ರಯವಲ್ಲ ಆಸರೆ. ಭೋಗದ ಜೀವನವಲ್ಲ ಶಿಕ್ಷಣ ಎಂಬ ಧ್ಯೇಯದೊಂದಿಗೆ ಈ ಟೂರ್ನಿಮೆಂಟ್ ಅನ್ನು ಆಯೋಜನೆ ಮಾಡಲಾಗಿದೆ. ಇದರಿಂದ ಬಂದ ಹಣದಿಂದ ಕನಿಷ್ಠ ಐದು ಮಕ್ಕಳನ್ನು ದತ್ತು ಪಡೆಯುವ ಉದ್ದೇಶ ಹೊಂದಿದ್ದಾರೆ ಆಯೋಜಕರು..

ಗತಕಾಲದ ವೈಭವ ನೆನಪಿಸಿದ ಸೂಪರ್ ಸ್ಟಾರ್ಸ್

ಇನ್ನು ಹರಾಜು ಪ್ರಕ್ರಿಯೆಗೂ ಮುನ್ನ ಉದ್ಯಮಿ ಅನಂತ್ ರಾಮ ಶೆಟ್ಟಿ ಅವರು ತಂಡಗಳ ಜರ್ಸಿಯನ್ನು ಬಿಡುಗಡೆ ಮಾಡಿದ್ರು.ಈ ಕಾರ್ಯಕ್ರಮದಲ್ಲಿ ಟೂರ್ನಿ ಆಯೋಜಕರಾದ ಸುಜೀತ್ ಶೆಟ್ಟಿ, ಉದ್ಯಮಿಗಳಾದ ರಾಮಕ್ರಿಷ್ಣ ಶೆಟ್ಟಿ, ರಾಧಕ್ರಿಷ್ಣ ಶೆಟ್ಟಿ, ಸಮಾಜಸೇವಕರಾದ ಸೌಮ್ಯ ಪ್ರಿಯ ಹೆಗಡೆ, ಅಮೃತ ಶೆಟ್ಟಿ ಉಪಸ್ಥಿತರಿದ್ದರು.