Team India: ದೇಶದ ಪರವಾಗಿ ಆಡಿದ್ದ ಕ್ರಿಕೆಟಿಗ ಇಂದು ಹಣಕ್ಕಾಗಿ ಎಮ್ಮೆ ಸಾಕ್ತಿದ್ದಾರೆ!

ಬಾಲಾಜಿ ದಾಮೋರ್ ಅವರು 1998 ರ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೆಮಿಫೈನಲ್‌ ಹಂತಕ್ಕೆ ಏರಿಸಿದ್ದರು. ಈಗ ಅದೇ ಬಾಲಾಜಿ ಮನೋಹರ್‌ ಎಮ್ಮೆ, ಮೇಕೆ ಮೇಯಿಸುವ ಕೆಲಸ ಮಾಡುತ್ತಿದ್ದಾರೆ. ಬಾಲಾಜಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಪಾಳುಬಿದ್ದ ಒಂದು ಕೋಣೆಯ ಮನೆಯನ್ನು ವಾಸಕ್ಕೆ ಹೊಂದಿದ್ದಾರೆ.

Bhalaji Damor This cricketer forced to graze buffalo goats was shown in the 1998 Blind World Cup san

ನವದೆಹಲಿ (ಸೆ.15): ಬಾಲಾಜಿ ದಾಮೋರ್‌ ಎನ್ನುವ ಹೆಸರನ್ನು ಬಹುತೇಕ ಮಂದಿ ಕೇಳಿರಲಿಕ್ಕಿಲ್ಲ. ಬಾಲಾಜಿ ಕೂಡ ಭಾರತ ತಂಡದ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಆಡಿದ್ದಾರೆ. ಆದರೆ, ಅವರ ಜೀವನ ಕೊಹ್ಲಿ, ಸೆಹ್ವಾಗ್‌, ಧೋನಿಯಂಥ ಕ್ರಿಕೆಟಿಗರಂಥಲ್ಲ.1998ರಲ್ಲಿ ನಡೆದ ಅಂಧರ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಾಲಾಜಿ ದಾಮೋರ್‌ ತಂಡವನ್ನು ಸೆಮಫೈನಲ್‌ ಹಂತದವರೆಗೆ ಮುನ್ನಡೆಸಿದ್ದರು. ಆದರೆ, ಅಂದು ಕ್ರಿಕೆಟಿಗನಾಗಿ ಟೀಮ್‌ ಇಂಡಿಯಾ ಜೆರ್ಸಿ ಧರಿಸಿದ್ದ ಬಾಲಾಜಿ ದಾಮೋರ್, ಎಮ್ಮೆ, ಮೇಕೆ ಮೇಯಿಸುವ ಕೆಲಸ ಮಾಡುತ್ತಿದ್ದಾರೆ. ಅದರೊಂದಿಗೆ ಜೀವನೋಪಾಯಕ್ಕಾಗಿ ಇತರ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಇನ್ನು ಬಾಲಾಜಿಯ ಕ್ರಿಕೆಟ್‌ ಜೀವನ ಅದ್ಭುತವಾಗಿತ್ತು. ಆಡಿದ 125 ಪಂದ್ಯಗಳಿಂದ 3125 ರನ್‌ ಬಾರಿಸಿದ್ದ ಬಾಲಾಜಿ 150 ವಿಕೆಟ್‌ ಕೂಡ ಉರುಳಿಸಿದ್ದಾರೆ. ಅರಾವಳಿ ಜಿಲ್ಲೆಯ ಪಿಪ್ರಾನಾ ಗ್ರಾಮದ ನಿವಾಸಿ ಭಾಲಾಜಿ ದಾಮೋರ್ ಅವರು ತಮ್ಮ ವಿಭಾಗದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 1998 ರ ಅಂಧರ ವಿಶ್ವಕಪ್ ಪಂದ್ಯದ ಸೆಮಿಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲು ಕಂಡರೂ, ಅಂದಿನ ರಾಷ್ಟ್ರಪತಿ ಕೆಆರ್‌ ನಾರಾಯಣನ್‌ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಬಾಲಾಜಿ ದಾಮೋರ್‌ರನ್ನು ಹೊಗಳಿದ್ದರು. ಸಾಮಾನ್ಯ ಕಣ್ಣಿನ ಸಾಮರ್ಥ್ಯ ಹೊಂದಿರುವ ಕ್ರಿಕೆಟಿಗರು ವಿಕೆಟ್‌ಗಳನ್ನು ಪಡೆಯಲು ಸಾಕಷ್ಟು ಪ್ರಶಂಸೆಯನ್ನು ಪಡೆದರೆ, ಬಾಲಾಜಿ ಅಂಧರಾದ ನಂತರವೂ ಬ್ಯಾಟ್ಸ್‌ಮನ್‌ಗಳಿಗೆ ತಮ್ಮ ಬೌಲಿಂಗ್‌ ಮೂಲಕ ವಂಚಿಸುತ್ತಿದ್ದರು.

ಪ್ರಸ್ತುತ, ಬಾಲಾಜಿ ದಾಮೋರ್ (Bhalaji Damor) ಕೂಡ ಪಿಪ್ರಾನಾ (Piprana) ಗ್ರಾಮದ ತನ್ನ ಒಂದು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದರ ಕೂಡ ಈ ಭೂಮಿಯಲ್ಲಿ ಪಾಲು ಹೊಂದಿದ್ದಾರೆ. ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಅವರ ಜಮೀನಿನಿಂದ ಸಾಕಷ್ಟು ಆದಾಯವಿಲ್ಲ. ಅವರ ಪತ್ನಿ ಅನು ಕೂಡ ಗ್ರಾಮದ ಇತರ ಜನರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ.  ಬಾಲಾಜಿಗೆ 4 ವರ್ಷದ ಸತೀಶ್ ಎಂಬ ಮಗನಿದ್ದು, ಆತನೂ ಕೂಡ ಕಣ್ಣಿನ ಸಮಸ್ಯೆ ಹೊಂದಿದ್ದಾರೆ. ವಾಸದ ಹೆಸರಲ್ಲಿ ಒಂದೇ ಕೋಣೆಯ ಪಾಳುಬಿದ್ದ ಮನೆಯನ್ನು ಈ ಕುಟುಂಬ ಹೊಂದಿದೆ. ಈ ಮನೆಯಲ್ಲಿ ಬಾಲಾಜಿ ಕ್ರಿಕೆಟಿಗನಾಗಿ ಪಡೆದ ಪ್ರಮಾಣಪತ್ರಗಳು ಮತ್ತು ಇತರ ಪ್ರಶಸ್ತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ.

'ICC T20 World Cup ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ವಿದಾಯ ಘೋಷಿಸಬಹುದು..!

ಕ್ರಿಕೆಟ್ (Cricket) ಆಟದಿಂದ ಭಾಲಾಜಿ ಖಂಡಿತವಾಗಿಯೂ ಇಡೀ ಜಗತ್ತಿನಲ್ಲಿ ಛಾಪು ಮೂಡಿಸಿದ್ದರೂ, ಒಮ್ಮೆ ಅವರು ಕ್ರಿಕೆಟ್ ಮೈದಾನದಿಂದ (1998 Blind World Cup) ಹೊರಬಂದ ನಂತರ, ಅವರ ಜೀವನವು ತೊಂದರೆಗಳ ದೀರ್ಘ ಇನ್ನಿಂಗ್ಸ್‌ಅನ್ನು ಎದುರಿಸಿದೆ. ವಿಶ್ವಕಪ್ ಬಳಿಕ ಉದ್ಯೋಗಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟರೂ ಸ್ಪೋರ್ಟ್ಸ್ ಕೋಟಾ ಮೂಲಕವೂ ಕೆಲಸ ಸಿಗಲಿಲ್ಲ ಎಂದು ಬಾಲಾಜಿ ದಾಮೋರ್‌ ಹೇಳುತ್ತಾರೆ.

ಭಾವುಕ ಪತ್ರದೊಂದಿಗೆ ನಿವೃತ್ತಿ ಘೋಷಿಸಿದ Robin Uthappa, ವಿದೇಶಿ ಲೀಗ್‌ನತ್ತ ಚಿತ್ತ!

ಕೆಲವೊಮ್ಮೆ ಬಾಲಾಜಿ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಕಲಿಸಲು ಹತ್ತಿರದ ಅಂಧರ ಶಾಲೆಗೆ ಹೋಗುತ್ತಾರೆ. ಇದಕ್ಕಾಗಿ ಅವರು ತೀರಾ ಅಲ್ಪಮೊತ್ತದ ಶುಲ್ಕವನ್ನು ಪಡೆದುಕೊಳ್ಳುತ್ತಾರೆ. ಸಂಪಾದನೆಯ ಎಲ್ಲಾ ಮಾರ್ಗಗಳನ್ನು ಸೇರಿಕೊಂಡರೆ, ಅವರು ತಿಂಗಳಿಗೆ ಹೆಚ್ಚೆಂದರೆ 3 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. 17 ವರ್ಷಗಳ ಹಿಂದೆ 1998ರಲ್ಲಿ ಬಾಲಾಜಿ ಆಟಗಾರನಾಗಿದ್ದ ಕಾರಣಕ್ಕೆ ಪಡೆಯುತ್ತಿದ್ದ 5,000 ರೂ.ಗಿಂತ ಈ ಮೊತ್ತ ತೀರಾ ಕಡಿಮೆ. ಬಾಲ್ಯದಲ್ಲಿಯೂ ಬಾಲಾಜಿ ಎಮ್ಮೆ, ಮೇಕೆಗಳನ್ನು ಮಾತ್ರ ಮೇಯಿಸುತ್ತಿದ್ದರು. ಅವರಲ್ಲಿರುವ ಕ್ರಿಕೆಟ್ ಪ್ರತಿಭೆಯನ್ನು ಕಂಡು ಜನರು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಪ್ರೋತ್ಸಾಹಿಸಿದರು. ಈಗ ಕ್ರಿಕೆಟ್ ಆಟದಲ್ಲಿ ಹೆಸರು ಗಳಿಸಿದ ಮೇಲೂ ಮೊದಲು ಮಾಡುತ್ತಿದ್ದ ಕೆಲಸವನ್ನೇ ಮಾಡಬೇಕಾಗಿದೆ.

Latest Videos
Follow Us:
Download App:
  • android
  • ios