ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಐಪಿಎಲ್ ಟ್ರೋಫಿ ಗೆಲ್ಲೋವರೆಗೂ ಮದುವೆ ಆಗುವುದಿಲ್ಲ ಎಂದು ಯುವತಿಯೊಬ್ಬಳು ಪ್ರತಿಜ್ಞೆ ಮಾಡಿದ್ದಾಳೆ. ಈಕೆ ಕಳೆದ 16 ವರ್ಷದಿಂದ ಮದುವೆ ಆಗದೇ ಆರ್‌ಸಿಬಿ ಟ್ರೋಫಿ ಗೆಲುವಿಗಾಗಿ ಕಾಯುತ್ತಿದ್ದಾಳೆ.

ಬೆಂಗಳೂರು (ಮಾ.20): ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಆರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ ಟ್ರೋಫಿ ಗೆದ್ದಿಲ್ಲ. ಆದರೆ, ಬೆಂಗಳೂರಿನ ಕ್ರಿಕೆಟ್ ಅಭಿಮಾನಿ ಯುವತಿಯೊಬ್ಬಳು ತಾನು ಆರ್‌ಸಿಬಿ ತಂಡ ಐಪಿಎಲ್‌ ಟ್ರೋಫಿ ಗೆಲ್ಲುವವರೆಗೂ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟಿ-20 ಆರಂಭವಾಗಿ ಈವರೆಗೆ 16 ವರ್ಷಗಳು ಕಳೆದಿವೆ. ಅಂದರೆ, 2008ರಿಂದಲೇ ಐಪಿಎಲ್‌ ಟಿ-20 ಆರಂಭವಾಗಿದೆ. ಈ ಮೂಲಕ ಕ್ರಿಕೆಟ್‌ ಪ್ರೇಮಿಗಳಿಗೆ ಚುಟುಕು ಕ್ರಿಕೆಟ್‌ನ ಜ್ವರ ಹೆಚ್ಚಾಗುವಂತೆ ಮಾಡಿದೆ. ಆದರೆ, ಬೆಂಗಳೂರಿನ ಯುವತಿಯೊಬ್ಬಳು ಆರ್‌ಸಿಬಿ ತಂಡವು ಐಪಿಎಲ್‌ ಟ್ರೋಫಿ ಗೆಲ್ಲೋವರೆಗೂ ತಾನು ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳೆ. ಈ ಬಗ್ಗೆ ಸ್ವತಃ ಯುವತಿಯೇ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಈ ಸಂಬಂಧಪಟ್ಟ ಪೋಸ್ಟರ್‌ ಒಂದನ್ನು ತೋರಿಸಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ!

ಹೌದು, ಐಪಿಎಲ್ ಆರಂಭವಾಗಿ 16 ವರ್ಷಗಳು ಕಳೆದರೂ ಒಂದು ಕಪ್‌ ಗೆಲ್ಲರೇ ಬಹುಮಾನದ ಬರ ಅನುಭವಿಸುತ್ತಿರುವ ಆರ್‌ಸಿಬಿ ತಂಡಕ್ಕೆ ವಿಶ್ವದ ಯಾವುದೇ ಲೀಗ್‌ ತಂಡ ಹೊಂದಿರುವ ಅಭಿಮಾನಿಗಳಿಗಿಂತಲೂ ಕಡಿಮೆಯೇನಿಲ್ಲ. ಪ್ರತಿ ವರ್ಷ ಐಪಿಎಲ್ ಪಂದ್ಯಾವಳಿ ಆರಂಭವಾದರೂ 'ಈ ಸಲ ಕಪ್ ನಮ್ದೇ' ಎಂಬ ಘೋಷವಾಕ್ಯವನ್ನು ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಾರೆ.

ಇನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬರುವ ಅಭಿಮಾನಿಗಳಷ್ಟು ಬೇರಾವ ಐಪಿಎಲ್‌ ಪಂದ್ಯದ ಕ್ರೀಡಾಂಗಣಗಳಿಗೂ ಬರುವುದಿಲ್ಲ. ಇದಕ್ಕಾಗಿಯೇ ದೇಶದ ಬೇರಾವ ಕ್ರೀಡಾಂಗಣದಲ್ಲಿನ ಪಂದ್ಯ ನೋಡುವುದಕ್ಕೆ ನಿಗದಿಪಿಡಿಸಿದ ಟಿಕೆಟ್‌ ದರಕ್ಕಿಂತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಐಪಿಎಲ್ ಪಂದ್ಯ ವೀಕ್ಷಣೆ ಟಿಕೆಟ್‌ ದರ ಹೆಚ್ಚಾಗಿಯೇ ಇರುತ್ತದೆ. ಕಳೆದ ಹದಿನಾರು ವರ್ಷದಲ್ಲಿ ಆರ್‌ಸಿಬಿ 3 ಬಾರಿ ಫೈನಲ್ ಪ್ರವೇಶಿಸಿದ್ದರೂ ಒಂದು ಬಾರಿಯೂ ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ.

ಕಳೆದ ಎರಡು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ವುಮೆನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವೂ ಆಟವಾಡುತ್ತಿದೆ. ದೆಹಲಿಯನ್ನು ನಡೆದ ಪಂದ್ಯದ ವೇಳೆ ಆರ್‌ಸಿಬಿ ತಂಡದ ಅಭಿಮಾನಿಯೊಬ್ಬಳು 'ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆಲ್ಲುವವರೆಗೂ ನಾನು ಮದುವೆ ಮಾಡಿಕೊಳ್ಳುವುದಿಲ್ಲ'(NOT GETTING MARRIED TILL RCB WIN IPL TROPHY) ಎಂದು ಬರೆದಿರುವ ಪೋಸ್ಟರ್ ಅನ್ನು ಪ್ರದರ್ಶನ ಮಾಡಿದ್ದಾಳೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

WPL ಕಪ್‌ ಗೆದ್ದು ಬಾಯ್‌ ಫ್ರೆಂಡ್‌ ಜತೆ ಫೋಸ್‌ ಕೊಟ್ಟ RCB ಕ್ವೀನ್ ಸ್ಮೃತಿ ಮಂಧನಾ..! ನಮ್ಮ ಕ್ರಶ್‌ ಬಿಟ್ಬಿಡು ಎಂದ ಫ್ಯಾನ್ಸ್

ಇನ್ನು ಕಳೆದ ವರ್ಷದಿಂದ ಆರಂಭವಾದ ಮಹಿಳಾ ಐಪಿಎಲ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು ಭಾರತ ತಂಡದ ಸ್ಟಾರ್‌ ಆಟಗಾರ್ತಿ ಸ್ಮೃತಿ ಮಂದಾನ ನಾಯಕತ್ವದಲ್ಲಿ 2024ರ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಆದರೆ, ಆರ್‌ಸಿಬಿ ಟ್ರೋಫಿ ಗೆಲ್ಲೋವರೆಗೂ ಮದುವೆ ಆಗೊಲ್ಲವೆಂದು ಪ್ರತಿಜ್ಞೆ ಮಾಡಿದ ಯುವತಿ ಈಗಲಾದರೂ ಮದುವೆ ಆಗುತ್ತಾಳಾ? ಅಥವಾ ಆರ್‌ಸಿಬಿ ಪುರುಷರ ತಂಡ ಗೆಲ್ಲುವವರೆಗೂ ಮದುವೆ ಮುಂದೂಡುತ್ತಾಳಾ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇನ್ನು ಮುಂದಿನ ಪಂದ್ಯಗಳಲ್ಲಿ ಬಂದರೆ, ಆರ್‌ಸಿಬಿ ಮಹಿಳಾ ಅಭಿಮಾನಿಯೇ ಇದಕ್ಕೆ ಉತ್ತರವಿರುವ ಪೋಸ್ಟರ್ ತೋರಿಸಬೇಕು ಎಂದು ಕಮೆಂಟಿಗರು ತಿಳಿಸಿದ್ದಾರೆ.

Scroll to load tweet…