Asianet Suvarna News Asianet Suvarna News

Ben Stokes ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ದಾಖಲೆ ಬರೆದ ಸ್ಟೋಕ್ಸ್‌..!

* ಕೌಂಟಿ ಕ್ರಿಕೆಟ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಬೆನ್ ಸ್ಟೋಕ್ಸ್

* ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ಶತಕ ಪೂರೈಸಿದ ಇಂಗ್ಲೆಂಡ್ ಟೆಸ್ಟ್ ನಾಯಕ

* ಡರ್ಹಮ್‌ ತಂಡದ ಪರ ಅತಿವೇಗದ ಶತಕ ಪೂರೈಸಿದ ಸ್ಟೋಕ್ಸ್‌

Ben Stokes 5 six and boundary in an over en route to century creates world record in County cricket kvn
Author
Bengaluru, First Published May 7, 2022, 8:38 AM IST

ವೋರ್ಸೆಸ್ಟರ್(ಮೇ.07)‌: ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕನಾಗಿ ನೇಮಕಗೊಂಡ ಬಳಿಕ ಆಡಿದ ಮೊದಲ ಸ್ಪರ್ಧಾತ್ಮಕ ಪಂದ್ಯದಲ್ಲೇ ಬೆನ್‌ ಸ್ಟೋಕ್ಸ್‌ (England Test Captain Ben Stokes) ಸ್ಫೋಟಕ ಶತಕ ಸಿಡಿಸಿದ್ದಾರೆ. ಒಂದೇ ಓವರ್‌ನಲ್ಲಿ ಬರೋಬ್ಬರಿ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸುವ ಮೂಲಕ ಕೌಂಟಿ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.  ವೋರ್ಸೆಸ್ಟರ್‌ಶೈರ್‌ ವಿರುದ್ಧದ ಕೌಂಟಿ ಪಂದ್ಯದಲ್ಲಿ ಡರ್ಹಮ್‌ನ ಸ್ಟೋಕ್ಸ್‌ ಕೇವಲ 88 ಎಸೆತಗಳಲ್ಲಿ 161 ರನ್‌ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 17 ಸಿಕ್ಸರ್‌ಗಳಿದ್ದವು. ಡರ್ಹಮ್‌ 6 ವಿಕೆಟ್ ಕಳೆದುಕೊಂಡು 580 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಕೌಂಟಿ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆಯನ್ನು ಬೆನ್ ಸ್ಟೋಕ್ಸ್‌ ಬರೆದರು. ದಿನದ ಮೂರನೇ ಓವರ್‌ನಲ್ಲೇ ಕ್ರೀಸ್‌ಗಿಳಿದ ಬೆನ್ ಸ್ಟೋಕ್ಸ್, ಮೊದಲ ಒಂದೂವರೆ ಗಂಟೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಲಂಚ್ ಬ್ರೇಕ್ ಮುನ್ನವೇ 74  ಎಸೆತಗಳಲ್ಲಿ 131 ರನ್ ಸಿಡಿಸಿದರು. ಇದಷ್ಟೇ ಅಲ್ಲದೇ ಬೆನ್ ಸ್ಟೋಕ್ಸ್‌ ಕೌಂಟಿ ಕ್ರಿಕೆಟ್‌ನಲ್ಲಿ ಡರ್ಹಮ್‌ ತಂಡದ ಪರ ಅತಿವೇಗವಾಗಿ ಶತಕ ಬಾರಿಸಿದ ಬ್ಯಾಟರ್‌ ಎನ್ನುವ ಕೀರ್ತಿಗೂ ಪಾತ್ರರಾದರು. ಇನ್ನು ಡರ್ಹಾಮ್ ತಂಡದ ಇನಿಂಗ್ಸ್‌ನ 117ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ 18 ವರ್ಷದ ಜೋಶ್ ಬೇಕರ್ ಬೆನ್ ಸ್ಟೋಕ್ಸ್‌ ಕ್ರಮವಾಗಿ 6,6,6,6,6,4 ರನ್ ಬಾರಿಸುವ ಮೂಲಕ ಅತಿವೇಗದ ಶತಕ ಸಿಡಿಸಿ ದಾಖಲೆ ಬರೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೋ ರೂಟ್‌ (Joe Root) ನಾಯಕತ್ವದಿಂದ ಕೆಳಗಿಳಿದ ಬಳಿಕ ಕೆಲ ದಿನಗಳ ಹಿಂದಷ್ಟೇ ಸ್ಟೋಕ್ಸ್‌ರನ್ನು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ, ಟೆಸ್ಟ್‌ ತಂಡದ ನಾಯಕನನ್ನಾಗಿ ನೇಮಿಸಿತ್ತು. ಇದೀಗ ಬೆನ್ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್ ತಂಡವು (England Cricket Team) ತವರಿನಲ್ಲಿ ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿಯನ್ನಾಡಲಿದೆ. ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ತಂಡದಿಂದ ಹೊರಗುಳಿದಿದ್ದ ವೇಗಿಗಳಾದ ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆಂಡರ್‌ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಒಲವು ತೋರಿದ್ದಾರೆ ಎಂದು ವರದಿಯಾಗಿದೆ.

IPL 2022 ಕೊನೇ ಓವರ್ ನಲ್ಲಿ 9 ರನ್ ರಕ್ಷಿಸಿಕೊಂಡು ಗೆಲುವು ಕಂಡ ಮುಂಬೈ!

ನಾನು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಗೆಲುವಿನ ಹಾದಿಗೆ ತರಲು ಎದುರು ನೋಡುತ್ತಿದ್ದೇನೆ. ಹೀಗಾಗಬೇಕಾದರೆ ತಂಡದಲ್ಲಿ ಅತ್ಯುತ್ತಮ ಆಡುವ ಹನ್ನೊಂದರ ಬಳಗವಿರಬೇಕು. ಒಂದು ವೇಳೆ ಸ್ಟುವರ್ಟ್‌ ಬ್ರಾಡ್ ಹಾಗೂ ಜೇಮ್ಸ್ ಆಂಡರ್‌ಸನ್ ಫಿಟ್ ಇದ್ದರೆ, ಅವರು ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಬೆನ್ ಸ್ಟೋಕ್ಸ್ ತಿಳಿಸಿದ್ದರು. 

ಐಪಿಎಲ್‌: ಪೊಲ್ಲಾರ್ಡ್‌ ಅತ್ಯಂತ ಕಳಪೆ ಪ್ರದರ್ಶನ

ಮುಂಬೈ: ಮುಂಬೈ ಇಂಡಿಯನ್ಸ್‌ನ ತಾರಾ ಆಲ್ರೌಂಡರ್‌ ಕೀರನ್‌ ಪೊಲ್ಲಾರ್ಡ್‌ ಐಪಿಎಲ್‌ ಸತತ 2ನೇ ವರ್ಷ ಕಳಪೆಯಾಟ ಪ್ರದರ್ಶಿಸಿದ್ದಾರೆ. ಈ ವರ್ಷ ಆಡಿರುವ 10 ಪಂದ್ಯಗಳಲ್ಲಿ ಅವರು ಕೇವಲ 129 ರನ್‌ ಗಳಿಸಿದ್ದು, ಅವರ ಗರಿಷ್ಠ ಮೊತ್ತ 25 ರನ್‌ ಆಗಿದೆ. ಕೇವಲ 109.32ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿರುವ ಪೊಲ್ಲಾರ್ಡ್‌, ತಂಡ ಭಾರೀ ಹಿನ್ನಡೆ ಅನುಭವಿಸುವಲ್ಲಿ ಪ್ರಮುಖ ಕಾರಣಕರ್ತರೆನಿಸಿದ್ದಾರೆ. ಗುಜರಾತ್‌ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಅವರು 14 ಎಸೆತದಲ್ಲಿ 4 ರನ್‌ ಗಳಿಸಿದರು. 2021ರ ಐಪಿಎಲ್‌ನಲ್ಲಿ ಪೊಲ್ಲಾರ್ಡ್‌ 14 ಪಂದ್ಯದಲ್ಲಿ 245 ರನ್‌ ಗಳಿಸಿದ್ದರು.

Follow Us:
Download App:
  • android
  • ios