Asianet Suvarna News Asianet Suvarna News

India Tour of South Africa: ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ: BCCI ಸ್ಪಷ್ಟನೆ!

*ವೇಳಾಪಟ್ಟಿಯಲಿಲ್ಲ ಬದಲಾವಣೆ ಇಲ್ಲ: ಬಿಸಿಸಿಐ ಅಧ್ಯಕ್ಷ
*ಟೀಂ ಇಂಡಿಯಾಗೆ ಬಯೋಬಬಲ್‌ ವ್ಯವಸ್ಥೆ: ದ.ಆಫ್ರಿಕಾ ಸರ್ಕಾರ
 

BCCI treasurer Arun Dhumal has confirmed that Indias tour of South Africa is currently going as per schedule mnj
Author
Bengaluru, First Published Dec 1, 2021, 11:40 AM IST
  • Facebook
  • Twitter
  • Whatsapp

ನವದೆಹಲಿ(ಡಿ. 01): ಭಾರತದ ಆಟಗಾರರು (Team India) ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ (India Tour of South Africa) ಕೈಗೊಳ್ಳಲಿದ್ದಾರೆ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ (Arun Dhumal) ಸ್ಪಷ್ಟಪಡಿಸಿದ್ದಾರೆ. ಒಮಿಕ್ರೋನ್‌ ಭೀತಿಯಿಂದಾಗಿ (Omicron Variant) ಭಾರತ ತಂಡ ಪ್ರವಾಸ ರದ್ದು ಮಾಡಲಿದೆ ಎಂದು ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಸರಣಿ ನಡೆಯಲು ನಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಆದರೆ ಆಟಗಾರರ ಆರೋಗ್ಯ, ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. 

ಆಟಗಾರರು ದ.ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ ಹಾಗೂ ಅವರನ್ನು ಅಲ್ಲಿ ಬಯೋಬಬಲ್‌ನಲ್ಲಿ (Bio Bubble) ಇರಿಸಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಲಹೆ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಡಿ.9ರಂದು ಭಾರತ ತಂಡ ದ.ಆಫ್ರಿಕಾಕ್ಕೆ ತೆರಳಲಿದ್ದು, 7 ವಾರಗಳ ಅವಧಿಯಲ್ಲಿ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಲಿದೆ.

ಟೀಂ ಇಂಡಿಯಾಗೆ ಬಯೋಬಬಲ್‌ ವ್ಯವಸ್ಥೆ: ದ.ಆಫ್ರಿಕಾ ಸರ್ಕಾರ

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಕಠಿಣ ಬಯೋಬಬಲ್‌ ವ್ಯವಸ್ಥೆ ಮಾಡುವುದಾಗಿ ದ.ಆಫ್ರಿಕಾ ವಿದೇಶಾಂಗ ಸಚಿವಾಲಯ ಮಂಗಳವಾರ ಭರವಸೆ ನೀಡಿದೆ. ಜೊತೆಗೆ, ಒಮಿಕ್ರೋನ್‌ ಭೀತಿಯ ನಡುವೆಯೂ ‘ಎ’ ತಂಡಗಳ ನಡುವಿನ ಅನಧಿಕೃತ ಟೆಸ್ಟ್‌ ಸರಣಿಯನ್ನು ಮುಂದುವರಿಸಲು ಸಹಕರಿಸಿದ್ದಕ್ಕೆ ಬಿಸಿಸಿಐ ಅಧಿಕಾರಿಗಳನ್ನು ಶ್ಲಾಘಿಸಿದೆ. ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಮುಕ್ತಾಯಗೊಂಡ ಬಳಿಕ ಡಿಸೆಂಬರ್ 9ರಂದು ಭಾರತ ತಂಡ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಬೇಕಿದೆ. ಅಲ್ಲಿ ಸುಮಾರು 7 ವಾರಗಳ ಕಾಲ ಇರಬೇಕಿರುವ ಟೀಂ ಇಂಡಿಯಾ, ಆತಿಥೇಯ ತಂಡದ ವಿರುದ್ಧ 3 ಟೆಸ್ಟ್‌, 3 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಬೇಕಿದೆ.  

IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!

ಒಮಿಕ್ರೋನ್‌ ವೈರಸ್‌ ಹಬ್ಬುತ್ತಿರುವ ಕಾರಣ ಭಾರತ ತಂಡ ಪ್ರವಾಸ ರದ್ದುಗೊಳಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (Cricket South Africa), ಸರಣಿಯು ಪೂರ್ವ ನಿಗದಿಯಂತೆ ನಡೆಯಲಿದೆ ಎಂದಿದೆ. ಡಿಸೆಂಬರ್ 17ರಿಂದ ಮೊದಲ ಟೆಸ್ಟ್‌ ಆರಂಭವಾಗಬೇಕಿದೆ. ಭಾರತ ಹಾಗೂ ನ್ಯೂಜಿಲೆಂಡ್  ನಡುವೆ ತವರಿನಲ್ಲಿ ಟೆಸ್ಟ್ ಸರಣಿ ನಡೆಯುತ್ತಿದೆ. ಇದಾದ ಬಳಿಕ ಟೀಂ ಇಂಡಿಯಾ (Team India), ದಕ್ಷಿಣ ಆಫ್ರಿಕಾ ಪ್ರವಾಸ (South Africa Tour) ಮಾಡಬೇಕಿದೆ. ಇದರ ನಡುವೆ ಆಫ್ರಿಕಾ ರಾಷ್ಟ್ರಗಳಲ್ಲಿ ಒಮಿಕ್ರೋನ್‌ ಭೀತಿ (Omicron Variant Threat) ಕಾಣಿಕೊಂಡ ಹಿನ್ನೆಲೆಯಲ್ಲಿ ಟೂರ್ನಿ ಆಯೋಜನೆಯ ಕುರಿತಂತೆ ಅನಿಶ್ಚಿತತೆ ಮನೆ ಮಾಡಿತ್ತು. 

IPL Retention: ರಾಹುಲ್, ರಶೀದ್‌ಗೆ ಹಣದ ಆಮಿಷ: ಬ್ಯಾನ್ ಆಗ್ತಾರಾ ಈ ಇಬ್ಬರು ಆಟಗಾರರು..?

ಲಖನೌ ತಂಡ (Lucknow Team) ಹೆಚ್ಚು ಮೊತ್ತದ ಆಮಿಷ ಒಡ್ಡಿ, ನಾವು ಆಟಗಾರರನ್ನು ಉಳಿಸಿಕೊಳ್ಳುವ ಮೊದಲೇ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಐಪಿಎಲ್‌ನ 2 ತಂಡಗಳು ಬಿಸಿಸಿಐಗೆ (BCCI) ದೂರು ನೀಡಿವೆ ಎಂದು ವರದಿಯಾಗಿದೆ. ಪಂಜಾಬ್ ಕಿಂಗ್ಸ್‌ (Punjab Kings) ತಂಡದ ನಾಯಕ ಕೆ.ಎಲ್. ರಾಹುಲ್ (KL Rahul) ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ನ (Sunrisers Hyderabad) ಸ್ಟಾರ್ ಕ್ರಿಕೆಟರ್ ರಶೀದ್‌ ಖಾನ್‌ಗೆ (Rashid khan) ಲಖನೌ ಫ್ರಾಂಚೈಸಿ ಬಲೆ ಬೀಸಿದೆ ಎನ್ನಲಾಗಿದೆ. ಒಂದು ವೇಳೆ ಸರಿಯಾದ ತನಿಖೆ ನಡೆದು ಆರೋಪ ಸಾಬೀತಾದರೇ ಈ ಇಬ್ಬರು ಆಟಗಾರರು ಐಪಿಎಲ್‌ ಟೂರ್ನಿಯಿಂದ ಒಂದು ವರ್ಷಗಳ ಬ್ಯಾನ್ ಆಗುವ ಸಾಧ್ಯತೆಯಿದೆ

Follow Us:
Download App:
  • android
  • ios